Wednesday, February 4, 2026

ಸತ್ಯ | ನ್ಯಾಯ |ಧರ್ಮ

ಹಿಂದಿ ಎಕ್ಸಾಂ ಹಾಲ್ ಗೆ ನುಗ್ಗುತ್ತೇವೆ!

“..ವರ್ಷ ವರ್ಷ ಲಕ್ಷಾಂತರ ಮಕ್ಕಳನ್ನು ಹಿಂದಿ ಗುಲಾಮಗಿರಿಗೆ ಶಾಲಾ ಶಿಕ್ಷಣದ ಮೂಲಕ ತಳ್ಳುತ್ತಿರುವ ಎಸೆಸೆಲ್ಸಿ ಹಿಂದಿ ಎಕ್ಸಾಮ್ ನ ಈ ಸರ್ಕಾರ ರದ್ದುಪಡಿಸಲು ಸೂಕ್ತ ದಾಖಲೆ ಬಿಹಾರದ PWE ಕಾನೂನು..” ನಾವು Dravida ಕನ್ನಡಿಗರು ಚಳುವಳಿ ಮುಂದಾಳು ಅಭಿ ಒಕ್ಕಲಿಗ ಅವರ ಬರಹದಲ್ಲಿ

ಕೋಟಿ ಕೋಟಿ ಕನ್ನಡಿಗರ ಅಂತರಾಳದ ಹಲವಾರು ನೋವುಗಳಲ್ಲಿ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಹಿಂದಿ ಕಲಿಯಬೇಕಾಗಿರುವುದು ಕೂಡ ಸೇರಿದೆ. ಅವರೆಲ್ಲರೂ ಬೆರಳು ತೋರದೆ ಇರಬಹುದು, ಕೊರಳಾಗದೆ ಮೌನಕ್ಕೆ ಜಾರಿರಬಹುದು ಅವರೆಲ್ಲರ ಬದಲಿಯಾಗಿ ದುಡಿಯುತ್ತಿರುವ ಅಸಂಖ್ಯಾತ ಕನ್ನಡಪರ ಸಂಘಟನೆಗಳು ಕನ್ನಡ ಪರ ಚಳುವಳಿಗಾರರು ಮತ್ತು ಬೇರೆ ಬೇರೆ ಚಿಂತನೆಯ ಜನಪರ ಚಳುವಳಿಗಾರರು ಕನ್ನಡ ನಾಡಿನಲ್ಲಿ ಮೂರು ನುಡಿ ನೀತಿ ತೆಗೆದು ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಇರುವ ಎರಡು ನುಡಿ ನೀತಿ ಜಾರಿಗೆ ಬೆರಳು ಕೊರಳು ತೋರುತ್ತಲೆ ಬಂದಿದ್ದೇವೆ.

ಚಳುವಳಿಯ ಒಡನಾಡಿಗಳೆ ಇಂದಿನ ಸಿನಿಮಾಗಳಂತೆ 200-300 ವರ್ಷ ಹಿಂದಕ್ಕೆ ಹೋಗಿ ಸೆಟ್ಹಾಕಿ ಅದೇ ಅಡಗೂಲಜ್ಜಿ ಪುರಾಣ ಪುಂಗಲಿ ಕಥೆಗಳಾದ ರಾಮಾಯಣ ಮಹಾಭಾರತ ನೆನಪಿಸಿಕೊಳ್ಳುವ ಗೋಜನ್ನು ಬಿಟ್ಟು ಕೇವಲ 4-5 ವರ್ಷದ ಹಿಂದೆ ನಮ್ಮ ಚಳುವಳಿಗಳನ್ನು ನೆನೆದರೆ ಗೋಚರಿಸುವುದೇನೆಂದರೆ ಹಿಂದಿ ಹೇರಿಕೆ ವಿರುದ್ಧದ ನಮ್ಮೆಲ್ಲರ ಕಾಯಕಗಳಿಗೆ ಕೊರಳಾಗುತ್ತಿದ್ದ ಅಂದಿನ ಮಾಜಿ ಮುಖ್ಯಮಂತ್ರಿ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅದು ಟ್ವಿಟರ್ ಮೂಲಕವಾದರೂ ಸರಿ ಇಲ್ಲ ಮಡಿಲ ಮಾಧ್ಯಮಗಳ ಮೂಲಕವಾದರೂ ಸರಿ ವೇದಿಕೆ ಕಾರ್ಯಕ್ರಮಗಳಾದರು ಸರಿ. ಅಂತ ಸಿದ್ದರಾಮಯ್ಯನವರು ನಮ್ಮೆಲ್ಲರ ಚಳುವಳಿಗಳ ಪರಿಣಾಮದಿಂದ ಎರಡನೇ ಬಾರಿ ಮುಖ್ಯಮಂತ್ರಿಯಾಗಿ 3 ವರ್ಷ ಸಮೀಪಿಸುತ್ತಿದೆ ನಾನು ಆ ದಾಖಲೆ ಮುರಿದೆ ನಾನು ಈ ದಾಖಲೆ ಮಾಡಿದೆ ಎಂಬಂತೆ ಖುಷಿ ಖುಷಿಯಿಂದ ಓಡಾಡಿಕೊಂಡಿರುವ ಸಿದ್ದರಾಮಯ್ಯನವರು ಕನ್ನಡಪರ ಸಂಘಟನೆಗಳ ಕಾರ್ಯಕ್ರಮದಲ್ಲಿಯೆ ‘ನಾವು ಹಿಂದಿ ವಿರೋಧಿಸುವುದಿಲ್ಲ’ ಅಂದಿದ್ದು ಇವರು ಅಂದಿನ ನಮ್ಮೆಲ್ಲರ ಕಾಯಕಗಳಿಗೆ ಕೊರಳಾಗುತ್ತಿದ್ದದ್ದು ಕೇವಲ ಅಧಿಕಾರ ಪಡೆಯುವ ದುರಾಸೆಯಿಂದ ಎಂಬುದನ್ನು ಸಾಬೀತುಪಡಿಸುತ್ತದೆ.

ನಾವೆಲ್ಲರೂ ಅಂದು ಇಂದು ಮುಂದು ದುಡಿಯುತ್ತಿರುವುದು ಕನ್ನಡ ನಾಡು ನುಡಿ ಮತ್ತು ಎಲ್ಲಾ ರೀತಿಯ ಸಮಾನತೆ ಬೆಳೆಸಲೆ ವಿನಃ ವೈಯಕ್ತಿಕ ಅಧಿಕಾರಕ್ಕಾಗಿಯೋ ಇಲ್ಲ ವೈಯಕ್ತಿಕ ಹಣ ಸಂಪಾದನೆಗಾಗಿಯೋ ಇಲ್ಲ ವೈಯಕ್ತಿಕ ಜನಪ್ರಿಯತೆಗಾಗಿಯೋ ಅಲ್ಲವೇ ಅಲ್ಲ. ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗ ಎರಡು ನುಡಿ ನೀತಿ ಜಾರಿ ಮಾಡಿ ಎಂದು ತಮ್ಮ ವರದಿ ಕೊಟ್ಟು ಆರು ತಿಂಗಳುಗಳ ಮೇಲಾಗಿದೆ ಇನ್ನು ಕೂಡ ಅದನ್ನು ಜಾರಿ ಮಾಡದೆ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಎಕ್ಸಾಮ್ ಟೈಮ್ ಟೇಬಲ್ ನಲ್ಲಿ ಹಿಂದಿ ಎಕ್ಸಾಮ್ ಗು ದಿನಾಂಕ ಪ್ರಕಟಿಸಿರುವುದು ಕನ್ನಡ ವಿರೋಧಿ ಕೆಲಸವಲ್ಲದೆ ಬೇರೇನೂ ಅಲ್ಲ. ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ 1992 ರ ವರೆಗೂ ಹಿಂದಿ ಸಬ್ಜೆಕ್ಟ್ ಗೆ ಕೇವಲ 50 ಅಂಕಗಳಿಗೆ ಪರೀಕ್ಷೆ ಇತ್ತು ಆ ಸಂದರ್ಭದಲ್ಲಿ ಬಾಬರಿ ಮಸೀದಿ ಗಲಾಟೆ ಮತ್ತು ಕಾವೇರಿ ಗಲಾಟೆಯ ಗುಂಗಿಗೆ ಜನರನ್ನು ತಳ್ಳಿ 50 ರಿಂದ 100 ಅಂಕಗಳಿಗೆ ಹಿಂದಿ ಸಬ್ಜೆಕ್ಟ್ ನ ಪರೀಕ್ಷೆ ಬದಲಾಯಿಸಿ ಬಿಟ್ಟರು ಎಂಬ ವಿಚಾರವನ್ನು ದಾಖಲೆ ಸಮೇತ ಮಂಡಿಸಿದ ಮೇಲೆ ಎರಡು ನುಡಿ ನೀತಿ ಅಳವಡಿಕೆಗೆ ತಯಾರಿ ನಡೆಸಿದರು. ಇಲ್ಲೂ ಕೂಡ ಒಂದು ತಕರಾರು ತಂದಿಟ್ಟಿದ್ದಾರೆ ಅದೇನೆಂದರೆ, ನಾವುಗಳು ಕೇಳಿದಂತೆ ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಅಂತ ಮಾಡದೆ ತಾಯಿನುಡಿ ಮತ್ತು ಇಂಗ್ಲಿಷ್ ಮಾತ್ರ ಅಂತ ತಿಳಿಸಿದ್ದಾರೆ. ಬೇರೆ ಬೇರೆ ತಾಯಿನುಡಿಯ ಜನ ಅಂದಾಜು ಎರಡು ಕೋಟಿ ಇದ್ದಾರೆ ಕನ್ನಡ ನಾಡಿನಲ್ಲಿ. ಇರಲಿ, ಮೊದಲು ಎರಡು ನುಡಿ ನೀತಿ ಜಾರಿ ಮಾಡಿಸೋಣ ನಂತರ ನೆಲದ ನುಡಿಯಾದ ಕನ್ನಡ ಮೊದಲ ನುಡಿಯಾಗಿ ಕಡ್ಡಾಯ ಅಂತ ಮಾಡಿಸೋಣ.

ಇದೀಗ ಮತ್ತೊಂದು ದಾಖಲೆ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಟ್ಟಾಕುವ ಸಮಯ ಬಂದಿದೆ. ಆ ದಾಖಲೆ ಏನೆಂದರೆ ಬಿಹಾರದಲ್ಲಿ ಸಮಾಜವಾದಿ ಕರ್ಪೂರಿಯ ಠಾಕೂರ್ ರವರು ಶಿಕ್ಷಣ ಮಂತ್ರಿ , ಮುಖ್ಯಮಂತ್ರಿಯಾಗಿದ್ದವರು PWE ಪಾಸ್ ವಿಥೌಟ್ ಇಂಗ್ಲೀಷನ್ನು ಕಾನೂನು ಮಾಡಿ ಅಲ್ಲಿನ ಬಿಹಾರಿ ಜನಗಳನ್ನು ಬಿಹಾರಿ ಭಾಷೆ ಬಿಟ್ಟು ಹಿಂದಿ ಭಾಷೆಗೆ ಬಲಿಯಾಗುವಂತೆ ಮಾಡಿದವರು. ಆದರೆ ಅದನ್ನು ಬಿಂಬಿಸಿರುವುದು ಹೇಗೆಂದರೆ ಇವರು ಇಂಗ್ಲೀಷ್ ತೆಗೆದ ಕಾರಣ ತುಂಬಾ ಮಕ್ಕಳು ಶಾಲೆಗೆ ಬಂದರು ಬಡವರು ಹಳ್ಳಿಯವರು ದಲಿತರು ಹೆಣ್ಣು ಮಕ್ಕಳು ಅಂತ. ಅದು ಬಿಹಾರಿಗಳ ನೆಲ ಅವರ ನೆಲದ ನುಡಿ ಉಳಿಸಿಕೊಳ್ಳುವುದು ಬೆಳೆಸುವುದು ಅವರಿಗೆ ಬಿಟ್ಟುಬಿಡೋಣ. ಇಲ್ಲಿ ನಾವು ಗಮನಿಸಬೇಕಾದ ವಿಚಾರ ಏನಂದರೆ ಇಂಡಿಯಾ ಒಕ್ಕೂಟದಲ್ಲಿರುವ ಒಂದು ರಾಜ್ಯದಲ್ಲಿ PWE ಅಂತ ಕಾನೂನು ಮಾಡಲು ಸಾಧ್ಯವಿದೆ ಅಂದಮೇಲೆ ಅದೇ ಇಂಡಿಯಾ ಒಕ್ಕೂಟದಲ್ಲಿರುವ ಮತ್ತೊಂದು ರಾಜ್ಯದಲ್ಲಿ PWH ಪಾಸ್ ವಿಥೌಟ್ ಹಿಂದಿ ಅಂತ ಏಕೆ ಕಾನೂನು ಮಾಡಲು ಆಗುವುದಿಲ್ಲ? ಇವೆರಡು ರಾಜ್ಯಗಳು ಮಾತ್ರವಲ್ಲ ಎಲ್ಲಾ ರಾಜ್ಯಗಳು ಒಂದೇ ಉಪಾಯಗಳ ಅಡಿಯಲ್ಲಿ (ಸಂವಿಧಾನ ಅಡಿಯಲ್ಲಿ) ಇರೋದು ತಾನೇ.

ಈ ಬಿಹಾರದ ದಾಖಲೆಯನ್ನು ಬೇರೆ ಯಾರಿಗು ತೋರುವ ಅಗತ್ಯ ಇಲ್ಲ. ನೇರ ನೇರ ದಾಖಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖಕ್ಕೆ ಹಿಡಿಯಬೇಕಿದೆ. ಏಕೆಂದರೆ ಹಿಂದಿ ಸಬ್ಜೆಕ್ಟ್ ತೆಗೆದುಹಾಕಲು ಎಲ್ಲರ ಒಪ್ಪಿಗೆ ದೊರೆತಿದೆ ಇನ್ನೇನಿದ್ದರೂ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತಿಳಿಸಿದ್ದಾರೆ. ಹಿಂದಿ ಟೀಚರ್ ಗಳ ಲಾಬಿಯಿಂದ ಅದೇನೇನು ಲಾಭ ಪಡೆದಿದ್ದಾರೋ ಬಸವರಾಜ್ ಹೊರಟ್ಟಿಯವರು ಹಿಂದಿ ಸಬ್ಜೆಕ್ಟ್ ತೆಗೆದುಹಾಕಲು ಅಡ್ಡಗಾಲಾಗಿ ನಿಂತಿದ್ದಾರೆ. ಹೇಳಿ ಕೇಳಿ ಸಿದ್ದರಾಮಯ್ಯನವರು ಮತ್ತು ಹೊರಟ್ಟಿಯವರು ಚಡ್ಡಿ ದೋಸ್ತ್ ಗಳು, ಯೌವ್ವನದ ಕಾಲದಿಂದಲು.ಹೊರಟ್ಟಿಯವರು ಇತ್ತೀಚಿಗೆ ಕೋಮುವಾದಿ ಚಡ್ಡಿ ಬೇರೆ ತೊಟ್ಟವರು ಅಧಿಕಾರಕ್ಕಾಗಿ. ನಾನು ಸಮಾಜವಾದಿ ನಾನು ಅಹಿಯಿಂದ, ನಾನು ದಲಿತರಾಮಯ್ಯ, ನಾನು ಕನ್ನಡರಾಮಯ್ಯ ಇನ್ನು ಏನೇನೋ ಬಿರುದು ಬಾವಲಿಗಳ ತಮಗೆ ತಾವೇ ಕೊಟ್ಟುಕೊಂಡು ಸಿದ್ದರಾಮಯ್ಯನವರು
ಕೇವಲ ಅಧಿಕಾರಕ್ಕಾಗಿ ತಮ್ಮ ನಿಜವಾದ ಚಡ್ಡಿದೋಸ್ತ್ ಅಡ್ಡಗಾಲನ್ನು ದಾಟಿ ಹಿಂದಿ ಸಬ್ಜೆಕ್ಟ್ ತೆಗೆದಾಕಲು ಮುಂದಾಗಲಾರರು. ಇದೇನಿದ್ದರೂ ನಮ್ಮೆಲ್ಲರ ಹೋರಾಟದಿಂದಲೇ ಆಗಬೇಕಿದೆ.

ವರ್ಷ ವರ್ಷ ಲಕ್ಷಾಂತರ ಮಕ್ಕಳನ್ನು ಹಿಂದಿ ಗುಲಾಮಗಿರಿಗೆ ಶಾಲಾ ಶಿಕ್ಷಣದ ಮೂಲಕ ತಳ್ಳುತ್ತಿರುವ ಎಸೆಸೆಲ್ಸಿ ಹಿಂದಿ ಎಕ್ಸಾಮ್ ನ ಈ ಸರ್ಕಾರ ರದ್ದುಪಡಿಸಲು ಸೂಕ್ತ ದಾಖಲೆ ಬಿಹಾರದ PWE ಕಾನೂನು. ಕನ್ನಡ ನಾಡು ಬಿಟ್ಟು ಬೇರೆ ಕಡೆ ಕನ್ನಡ ಕನ್ನಡಿಗರು ಬೆಳೆಯಲು ನಮಗೆ ಇಂಗ್ಲೀಷ್ ಬೇಕೇ ವಿನಃ ಹಿಂದಿ ಬೇಕಾಗಿಲ್ಲ.ಆದುದ್ದರಿಂದ PWH ಕಾನೂನನ್ನು ಜಾರಿ ಮಾಡಿ 2026 ಮಾರ್ಚ್ ನಲ್ಲಿ ನಡೆಯುವ ಹಿಂದಿ ಸಬ್ಜೆಕ್ಟ್ ಎಕ್ಸಾಮ್ ಗೆ ಕಿಮ್ಮತ್ತಿಲ್ಲದಂತೆ ಮಾಡಬೇಕು ಕರ್ನಾಟಕ ಸರ್ಕಾರ ಅರ್ಥಾತ್ ಸಿದ್ದರಾಮಯ್ಯನವರು. ಇಲ್ಲವಾದರೆ ನುಗ್ಗೋಣ! ಎಲ್ಲಿಗೆ? ವಿಧಾನಸೌಧಕ್ಕೆ ಅಂದುಕೊಂಡಿರ?ಖಂಡಿತಾ ಅಲ್ಲ ಹಿಂದಿ ಎಕ್ಸಾಮ್ ದಿನ ಎಕ್ಸಾಮ್ ಹಾಲ್ಗಳಿಗೆ ನುಗ್ಗೋಣ. ಸುಮ್ಮನೆ ಹಿಂದಿ ಎಕ್ಸಾಮ್ ಬರಿಯೋ ಹಾಗಿಲ್ಲ ಹಂಗೆ ಪಾಸ್ ಮಾಡುತ್ತಾರೆ ಅನ್ನಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ, ಅವರ ಮುಖದಲ್ಲಿ ಮೂಡುವ ಮಂದಹಾಸವೆ ಕನ್ನಡದ ಬೆಳೆವಣಿಗೆಯ ಪ್ರತೀಕ.

ನಾವೆಲ್ಲರೂ ನೋಡಿರದ ಪೊಲೀಸು, ಕೇಸು, ಕೋರ್ಟು ಯಾವುದಾದರೂ ಇದಿಯಾ? ಕೊನೆಯದಾಗಿ ಮತ್ತೊಂದು ವಿಚಾರ ಬರುವ ಸಾಲಿನಿಂದ ಅಂದರೆ 2026-2027ರಿಂದ ಹಿಂದಿ ಸಬ್ಜೆಕ್ಟ್ ನ ಐವತ್ತು ಅಂಕಗಳಿಗೆ ಇಳಿಸುತ್ತಿದ್ದೇವೆ ಎಂದು ಈಗಾಗಲೇ ಅಧಿಕೃತ ಬಲ್ಲಮೂಲಗಳು ನಮಗೆ ಪಿಸುಮಾತಿನಲ್ಲಿ ತಿಳಿಸಿದ್ದಾರೆ, ನಿಮಗೂ ತಿಳಿಸುತ್ತಾರೆ. ನಾವು ಇದಕ್ಕೆ ಸಮಾಧಾನ ಆಗುವುದು ಬೇಡ ಸಂಪೂರ್ಣವಾಗಿ ಹಿಂದಿ ಸಬ್ಜೆಕ್ಟ್ ತೆಗೆದು ಬಿಸಾಕಲಿ ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಎಂಬ ಎರಡು ನುಡಿ ಅಳವಡಿಸಲಿ. ಅಲ್ಲಿಯ ವರೆಗೂ ವಿರಾಮಿಸುವುದು ಬೇಡ. ಈಗ ಬಿಹಾರದ ದಾಖಲೆಯನ್ನು ಸಿದ್ದರಾಮಯ್ಯನವರ ಮುಖಕ್ಕೆ ಬಿಸಾಡಿ ಕೇಳೋಣ ಬನ್ನಿ. ಬೆಲೆ ಕೊಡದಿದ್ದರೆ ಹಿಂದಿ ಎಕ್ಸಾಂ ಹಾಲ್ ಗೆ ನುಗ್ಗೋಣ.

✍️ ಅಬಿ ಒಕ್ಕಲಿಗ
ಮುಂದಾಳು,9686177118

Related Articles

ಇತ್ತೀಚಿನ ಸುದ್ದಿಗಳು

You cannot copy content of this page