ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿದಂತೆ, ಈವರೆಗೆ ಕರ್ನಾಟಕ ರಾಜ್ಯದ ಬಗ್ಗೆ ಬಿಜೆಪಿ ತೋರುತ್ತಿದ್ದ ಮಲತಾಯಿ ದೋರಣೆಯನ್ನು ಉಲ್ಲೇಖಿಸಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಾಜ್ಯಕ್ಕೆ ನಿರ್ದಿಷ್ಟ ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.
15ನೇ ಹಣಕಾಸು ಆಯೋಗ ಆದಾಯ ರಾಜ್ಯ ಮಲತಾಯಿ ಧೋರಣೆ ತೋರುತ್ತಿದೆ. ಜಿಎಸ್ಡಿಪಿ (GSDP) ಲೆಕ್ಕ ಹಾಕಲು ಹೊಸ ನಿಯಮ ಅನುಸರಿಸುತ್ತಿರುವ ಹಿನ್ನಲೆ ಇತರೆ ರಾಜ್ಯಗಳ GSDP ಸರಾಸರಿ ಶೇ. 9 ರಷ್ಟು ಇದೆ, ಕರ್ನಾಟಕವೂ ಶೇ. 30 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಪಾಲು ಶೇ. 4.2 ರಿಂದ 1.1 ಇಳಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮ್ ಅವರಿಗೆ ಆಗ್ರಹಿಸಿದ್ದಾರೆ.
14ನೇ ಹಣಕಾಸು ಆಯೋಗ ಪ್ರಕಾರ ಶೇ. 4.71 ರಷ್ಟಿತ್ತು. ಆದ್ರೆ, 15ನೇ ಹಣಕಾಸು ಆಯೋಗ ಪ್ರಕಾರ ಶೇ. 3.64 ಇದೆ. 2011-12ರ ಪ್ರಕಾರ ಐಟಿ ಕ್ಷೇತ್ರದಲ್ಲಿ ರಾಜ್ಯ ಅತ್ಯುತ್ತಮ ಬೆಳವಣಿಗೆ ಕಂಡಿದೆ. 14ನೇ-15ನೇ ಹಣಕಾಸು ಆಯೋಗ ತುಲನೆಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಒಟ್ಟು ಪಾಲಿನಲ್ಲಿ 37,011 ಕೋಟಿ ರೂ.ಗೆ ಕಡಿತವಾಗಿದೆ. 2020-21ರ ಆರ್ಥಿಕ ವರ್ಷ ಪ್ರಕಾರ 15ನೇ ಹಣಕಾಸು ಆಯೋಗವೂ 5,495 ಕೋಟಿ ರೂ.ಗೆ ಶಿಫಾರಸ್ಸು ಮಾಡಿತ್ತು ಎಂದು ಹೇಳಿದ್ದಾರೆ.
2021-26ರ ಹಣಕಾಸು ಆಯೋಗ 6,000 ಕೋಟಿ ರೂ. ಹಣವನ್ನು ಬೆಂಗಳೂರಿನ ನೀರಾವರಿ ಕಾಮಗಾರಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು. ಆದ್ರೆ, ಯಾವುದೇ ಅನುದಾನ ಕರ್ನಾಟಕ ಸರ್ಕಾರಕ್ಕೆ ಲಭಿಸಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಭಾರೀ ಹಿನ್ನಡೆಯಾಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು, ವಿಶೇಷ ಮತ್ತು ನಿರ್ದಿಷ್ಟ ಅನುದಾನ ಮೊದಲ ಆದ್ಯತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.