Home ಕೋಮುವಾದ ಉಮರ್ ಖಾಲಿದ್‌ಗೆ ನ್ಯಾಯಯುತ ವಿಚಾರಣೆ ನೀಡುವಂತೆ ಭಾರತಕ್ಕೆ ಯುಎಸ್ ಸಂಸದರ ಪತ್ರ

ಉಮರ್ ಖಾಲಿದ್‌ಗೆ ನ್ಯಾಯಯುತ ವಿಚಾರಣೆ ನೀಡುವಂತೆ ಭಾರತಕ್ಕೆ ಯುಎಸ್ ಸಂಸದರ ಪತ್ರ

0

ಈಶಾನ್ಯ ದೆಹಲಿ ಗಲಭೆಯ ‘ದೊಡ್ಡ ಪಿತೂರಿ’ ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರಿಗೆ ಅಂತರರಾಷ್ಟ್ರೀಯ ಕಾನೂನು ಮಾನದಂಡಗಳಿಗೆ ಅನುಗುಣವಾಗಿ ನ್ಯಾಯಯುತ ಮತ್ತು ಸಮಯೋಚಿತ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿ, ಅಮೆರಿಕದ ಎಂಟು ಸಂಸದರು ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ, ಹೌಸ್ ರೂಲ್ಸ್ ಕಮಿಟಿಯ ಶ್ರೇಯಾಂಕಿತ ಸದಸ್ಯ ಹಾಗೂ ಮಾನವ ಹಕ್ಕುಗಳ ಆಯೋಗದ ಸಹ-ಅಧ್ಯಕ್ಷ ಟಾಮ್ ಲ್ಯಾಂಟೋಸ್, ಮ್ಯಾಸಚೂಸೆಟ್ಸ್‌ನ 2ನೇ ಕ್ಷೇತ್ರದ ಡೆಮಾಕ್ರಟಿಕ್ ಸಂಸದ ಜಿಮ್ ಮೆಕ್‌ಗವರ್ನ್ ಸೇರಿದಂತೆ ಇತರ ಏಳು ಶಾಸಕರು, ಭಾರತದ ಅಮೆರಿಕ ರಾಯಭಾರಿ ವಿನಯ್ ಕ್ವಾತ್ರಾ ಅವರಿಗೆ ಈ ಪತ್ರ ರವಾನಿಸಿದ್ದಾರೆ.

ಪತ್ರದಲ್ಲಿ, ಡಿಸೆಂಬರ್ ತಿಂಗಳಲ್ಲಿ ಜಿಮ್ ಮೆಕ್‌ಗವರ್ನ್ ಮತ್ತು ಇತರ ಸಂಸದರು ಉಮರ್ ಖಾಲಿದ್ ಅವರ ಪೋಷಕರನ್ನು ಭೇಟಿ ಮಾಡಿದ್ದಾಗಿ ಉಲ್ಲೇಖಿಸಲಾಗಿದೆ. “ಈ ತಿಂಗಳ ಆರಂಭದಲ್ಲಿ ನಾನು ಉಮರ್ ಖಾಲಿದ್ ಅವರ ಪೋಷಕರನ್ನು ಭೇಟಿ ಮಾಡಿದ್ದೆ. ಪ್ರತಿನಿಧಿ ಜೇಮಿ ರಾಸ್ಕಿನ್ ಮತ್ತು ನಾನು, ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಜಾಮೀನು ಮತ್ತು ನ್ಯಾಯಯುತ, ಸಮಯೋಚಿತ ವಿಚಾರಣೆಯನ್ನು ನೀಡುವಂತೆ ನಮ್ಮ ಸಹೋದ್ಯೋಗಿಗಳೊಂದಿಗೆ ಒತ್ತಾಯಿಸುತ್ತಿದ್ದೇವೆ” ಎಂದು ಮೆಕ್‌ಗವರ್ನ್ ತಿಳಿಸಿದ್ದಾರೆ.

ಯುಎಸ್ ಸಂಸದರು ತಮ್ಮ ಪತ್ರದಲ್ಲಿ, “ಉಮರ್ ಖಾಲಿದ್ ಅವರನ್ನು ಯುಎಪಿಎ (UAPA) ಅಡಿಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲ ಜಾಮೀನು ಇಲ್ಲದೆ ಬಂಧನದಲ್ಲಿಟ್ಟಿರುವುದು, ಕಾನೂನಿನ ಮುಂದೆ ಸಮಾನತೆಯ ಅಂತರರಾಷ್ಟ್ರೀಯ ಮಾನದಂಡಗಳು, ಸರಿಯಾದ ಪ್ರಕ್ರಿಯೆ ಮತ್ತು ಅನುಪಾತತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಸ್ವತಂತ್ರ ಮಾನವ ಹಕ್ಕುಗಳ ತಜ್ಞರು ಎಚ್ಚರಿಸಿದ್ದಾರೆ” ಎಂದು ಹೇಳಿದ್ದಾರೆ.

“ಸಮಂಜಸವಾದ ಅವಧಿಯಲ್ಲಿ ವಿಚಾರಣೆ ನಡೆಯುವ ಹಕ್ಕು, ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ನಿರಪರಾಧಿ ಎಂದು ಪರಿಗಣಿಸಬೇಕಾದ ಮೂಲಭೂತ ಹಕ್ಕುಗಳನ್ನು ಭಾರತ ಎತ್ತಿಹಿಡಿಯಬೇಕು. ಖಾಲಿದ್ ಮತ್ತು ಇತರ ಸಹಆರೋಪಿಗಳ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಈ ಪತ್ರಕ್ಕೆ ಕಾಂಗ್ರೆಸ್ ಸದಸ್ಯ ಜೇಮಿ ರಾಸ್ಕಿನ್, ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್, ಸೆನೆಟರ್ ಪೀಟರ್ ವೆಲ್ಚ್, ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್, ಕಾಂಗ್ರೆಸ್ ಸದಸ್ಯೆ ರಶೀದಾ ತಾಲಿಬ್, ಕಾಂಗ್ರೆಸ್ ಸದಸ್ಯ ಜಾನ್ ಶಾಕೋವ್ಸ್ಕಿ ಮತ್ತು ಕಾಂಗ್ರೆಸ್ ಸದಸ್ಯ ಲಿಯೋಡ್ ಡಾಗೆಟ್ ಸಹಿ ಹಾಕಿದ್ದಾರೆ.

You cannot copy content of this page

Exit mobile version