Saturday, September 20, 2025

ಸತ್ಯ | ನ್ಯಾಯ |ಧರ್ಮ

“ಛತ್ರಪತಿ ಶಿವಾಜಿ ಮಹಾರಾಜ್” ಸಿನೆಮಾದಲ್ಲಿ ರಿಷಬ್ ಶೆಟ್ಟಿ: ಶಿವಾಜಿಯಂತೆ ರಿಷಬ್ ಒಬ್ಬ ಕನ್ನಡ ದ್ರೋಹಿ, ಮತಾಂದ ಎಂದ ನೆಟ್ಟಿಗರು

ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ನಿರ್ದೇಶನದಲ್ಲಿ, ರಿಷಬ್ ಶೆಟ್ಟಿ ನಾಯಕನಾಗಿ ಆಯ್ಕೆಯಾಗಿ “ಛತ್ರಪತಿ ಶಿವಾಜಿ ಮಹಾರಾಜ್” ಸಿನಿಮಾ ಘೋಷಣೆಯಾಗಿದೆ. ಪೋಸ್ಟರ್ ಬಿಡುಗಡೆ ಆಗುತ್ತಿದ್ದಂತೆ ರಿಷಬ್ ಶೆಟ್ಟಿ ಅವರಿಗೆ ಕನ್ನಡದ ನೆಟ್ಟಿಗರು ಕನ್ನಡ ದ್ರೋಹಿ ಎಂದು ಕಾಲೆಳೆದಿದ್ದಾರೆ.

ನಿರ್ದೇಶಕ ಸಂದೀಪ್ ಸಿಂಗ್ ಅವರು ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾಗೆ ರಿಷಬ್ ಶೆಟ್ಟಿಯೇ ಸರಿ ಎಂದು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಲ್ಲ ಮಾತುಕತೆಗಳು ಮುಗಿದಿದ್ದು ರಿಷಬ್ ಶೆಟ್ಟಿ ಕೂಡ ಓಕೆ ಎಂದು ಹೇಳಿದ ನಂತರ ಸ್ಯಾಂಪಲ್ ಗೆ ಎಂಬಂತೆ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಂದು ಕಡೆ ರಿಷಬ್ ಅಭಿಮಾನಿಗಳು ಭೇಷ್ ಎಂದರೆ, ಹಲವು ನೆಟ್ಟಿಗರು ಕನ್ನಡ ನೆಲಕ್ಕೆ ದ್ರೋಹ ಬಗೆದ ಶಿವಾಜಿ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

ಹಲವು ನೆಟ್ಟಿಗರು ಶಿವಾಜಿಗೆ ಪ್ರಾಣ ಭಿಕ್ಷೆ ನೀಡಿದ ಬೆಳವಡಿ ಮಲ್ಲಮ್ಮನ ಮಲ್ಲಮ್ಮನ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ, ಇನ್ನೂ ಕೆಲವರು ಮಲ್ಲಮ್ಮನ ಪಾತ್ರ ರಿಷಬ್ ಶೆಟ್ಟಿ ತಾಯಿಯೇ ನಿರ್ವಹಿಸಲಿ ಎಂದು ರಿಷಬ್ ಶೆಟ್ಟಿ ಕಾಲೆಳೆದಿದ್ದಾರೆ.

ಹಾಗೆಯೇ ಶಿವಾಜಿ ಮಹಾರಾಜ ಶೃಂಗೇರಿ ಮಠದ ಲೂಟಿ ಮಾಡಿದ ದೃಷ್ಯಗಳೇನಾದರೂ ಇದೆಯೇ ಎಂದು ಪ್ರಶ್ನೆ ಎತ್ತಿದ್ದಾರೆ. ಶಿವಾಜಿ ಕನ್ನಡ ನೆಲಕ್ಕೆ ಬಂದು ಗೋವುಗಳನ್ನು ಕದ್ದ ದೃಷ್ಯವೂ ಸೇರಿರಲಿ ಎಂದು ಹೇಳಿದ್ದಾರೆ.

ಹೀಗೆ ನೂರಾರು ಮಂದಿ ಈ ಸಿನೆಮಾ ಘೋಷಣೆ ವಿರುದ್ದ ದನಿ ಎತ್ತಿರುವುದಲ್ಲದೇ, ಇಂತಹ ನಾಡದ್ರೋಹಿ ಸಿನೆಮಾ ಒಪ್ಪಿಕೊಂಡ ರಿಷಬ್ ಶೆಟ್ಟಿ ಒಬ್ಬ ಮತಾಂದ, ಅಪ್ಪಟ ನಾಡದ್ರೋಹಿ ನಡೆಯ ವ್ಯಕ್ತಿ ಎಂದು ತರಾಟೆಗೆ ತಗೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page