Monday, June 17, 2024

ಸತ್ಯ | ನ್ಯಾಯ |ಧರ್ಮ

ಇಚ್ಛಾಶಕ್ತಿಯುಳ್ಳ ಕ್ರಾಂತಿಕಾರಿ ಹೆಣ್ಣು ಲೀಲಾ ರೈ

ಶ್ರೀಮತಿ ಲೀಲಾ ರೈ ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆ ಮತ್ತು ಕ್ರಾಂತಿಕಾರಿ ಹೆಣ್ಣು. ಭಾರತದ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ, ತಮ್ಮ ಜೀವನದ ಹನ್ನೆರಡು ವರ್ಷಗಳನ್ನು ಜೈಲಿನಲ್ಲಿ ಕಳೆದಂತಹ ದಿಟ್ಟ ಮಹಿಳೆ. ಆಕೆಯ ತ್ಯಾಗವು, ಆಕೆಯ ಸ್ನೇಹಿತರು ಮತ್ತು ಅವರ ಸುತ್ತಲಿನ ಜನರನ್ನು ರಾಷ್ಟ್ರದ ಸಲುವಾಗಿ ದುಡಿಯಲು ಪ್ರೇರೇಪಿಸಿತು. ಅವರು ಶೈಕ್ಷಣಿಕ ಉತ್ಕೃಷ್ಟತೆಯುಳ್ಳವರಾಗಿದ್ದ ಮತ್ತು ಶ್ರದ್ದೆಯುಳ್ಳ ವಿದ್ಯಾರ್ಥಿನಿಯಾಗಿದ್ದರು. 1930 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಲೀಲಾ ರೈ, ಒಬ್ಬ ವಿದ್ಯಾರ್ಥಿ ನಾಯಕಿಯೂ ಹೌದು.

ಅವರ ತಂದೆ ಬಂಗಾಳ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅವರೇನಾದರೂ ಬಯಸಿದ್ದರೆ, ತಮಗಿದ್ದ ಐಶಾರಾಮಿ ಸೌಕರ್ಯಗಳೊಂದಿಗೆ ಸುಖವಾದ ಜೀವನ ಕಳೆಯುತ್ತಿದ್ದರು. ಆದರೆ ಆಕೆ ಹಾಗೆ ಮಾಡಲಿಲ್ಲ. ಬದಲಾಗಿ ರಾಷ್ಟ್ರಕ್ಕಾಗಿ ಹೋರಾಡುವ  ದೃಢಸಂಕಲ್ಪ ಹೊಂದಿದ್ದರು.  ದೇಶದ ವಿಧವೆಯರ ಮತ್ತು ಅನಾಥರ ಕಷ್ಟಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದ ಹೃದಯ ಅವರದಾಗಿತ್ತು.  ರವೀಂದ್ರನಾಥ ಟ್ಯಾಗೋರ್ ಅವರಂತಹ ಮಹಾನ್ ಸಮಕಾಲೀನ ಸಮಾಜ ಸುಧಾರಕರಿಗೆ ಪತ್ರಗಳನ್ನು ಬರೆಯುವ ಮೂಲಕ ಸಂವಹನವನ್ನು ಪ್ರಾರಂಭಿಸಿದರು. ಢಾಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ, ಟ್ಯಾಗೋರ್ ಅವರು ಲೀಲಾ ರೈ ಅವರ ನಾಯಕತ್ವ ಗುಣವನ್ನು ‘ಪೂರ್ವದ ಮಹಿಳೆಯರಲ್ಲಿ ಅತ್ಯುತ್ತಮ ವ್ಯಕ್ತಿ’ ಎಂದು ಶ್ಲಾಘಿಸಿದ ಹೆಗ್ಗಳಿಕೆ ಲೀಲಾ ರೈ ಅವರದ್ದು.  ಟ್ಯಾಗೋರರುಶಾಂತಿನಿಕೇತನದಲ್ಲಿ ಮಹಿಳೆಯರ ತರಬೇತಿಯನ್ನು ಮುನ್ನಡೆಸಬೇಕೆಂದು  ಕೂಡ ಕೇಳಿಕೊಂಡಿದ್ದರು.

 ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸವನ್ನು ಪ್ರಾರಂಭಿಸಿದ ಲೀಲಾ ರೈ,  ಅದಕ್ಕಾಗಿಯೆ ʼದೀಪಾವಳಿ ಅಸೋಸಿಯೇಷನ್ʼ ಸಂಸ್ಥೆಯನ್ನು ಸ್ಥಾಪಿಸಿದರು. ಈ ಉದ್ದೇಶಕ್ಕಾಗಿ ನಿಷ್ಟಾಔಂತ ಸಹೋದ್ಯೋಗಿಗಳ ಬೆಂಬಲ ಪಡೆದು, ಢಾಕಾದಲ್ಲಿ ಮಹಿಳೆಯರಿಗಾಗಿ ಎರಡನೇ ಶಾಲೆಯನ್ನು ತೆರೆದರು. ತಾವೇ ಪ್ರಿನ್ಸಿಪಾಲ್ ಸಾರ‍ಥ್ಯ ಹೊತ್ತು, ಈ ಶಾಲೆಯನ್ನು ಮುನ್ನಡೆಸಿದರು ಮತ್ತು ಎಲ್ಲಾ ಆರ್ಥಿಕ ಜವಾಬ್ದಾರಿಯನ್ನು ತೆಗೆದುಕೊಂಡರು. ಇಲ್ಲಿ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳಿಗೆ ಹೊಲಿಗೆ ತರಬೇತಿ ಕೂಡ ನೀಡಲಾಯಿತು. ಅನಾಥ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿತು. ಢಾಕಾದಲ್ಲಿ ‘ದೀಪಾವಳಿ ಅಸೋಸಿಯೇಷನ್’ ಬೆಂಬಲದಿಂದ ಅನೇಕ ಶಾಲೆಗಳನ್ನು ಯಶಸ್ವಿಯಾಗಿ ನಡೆಸಿದರು. ಸಂಸ್ಥೆಯಿಂದ ವಾರ್ಷಿಕ ಪ್ರದರ್ಶನಗಳು ನಡೆದವು, ಅಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.

ಶ್ರೀಮತಿ ಲೀಲಾ ರೈ ಮಹಿಳಾ ಚಳವಳಿಯನ್ನು ಮುನ್ನಡೆಸುತ್ತಾ ತಮ್ಮ ಬದುಕನ್ನು ಮುನ್ನೆಡೆಸಿದರು. ಈ ಹಾದಿಯಲ್ಲಿ ಅವರ ನೇತೃತ್ವದಲ್ಲಿ ‘ಚತ್ರಿ ಸಿಂಗ್’ ಎಂಬ ಇನ್ನೊಂದು ಸಂಸ್ಥೆಯನ್ನು ಸ್ಥಾಪನೆಯಾಯಿತು.

1930 ರಲ್ಲಿ ಢಾಕಾ ಜಿಲ್ಲೆಯಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಮುನ್ನಡೆಸಿದರು. ಆಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದರು. 1931 ರಲ್ಲಿ ಜೈಲು ಸೇರುವ ಮೊದಲು, ಆಕೆ  ‘ಜೈ ಶ್ರೀ’ ಮಾಸಿಕದ (ಬಂಗಾಳಿಯಲ್ಲಿ) ಸಂಪಾದಕರಾಗಿದ್ದರು. ಈ ಮಾಸಿಕವನ್ನು 22 ಜೂನ್ 1942 ರಂದು ರಾಜ್ ಅವರು ನಿಷೇಧಿಸಿದರು ಮತ್ತು ಕಚೇರಿಯನ್ನು ಮುಚ್ಚಲಾಯಿತು. 1940 ರಲ್ಲಿ ನೇತಾಜಿಯವರ ಬಂಧನದ ನಂತರ, ಅವರು ಫಾರ್ವರ್ಡ್‌ ಬ್ಲಾಕ್‌ ಪತ್ರಿಕೆಯ ಸಂಪಾದಕಿಯಾದರು ಮತ್ತ‍ಸರ್ಕಾರವು ಅದನ್ನು ನಿಷೇಧಿಸುವವರೆಗೆ ಪತ್ರಿಕೆಯನ್ನು ಬದ್ಧತೆಯಿಂದ ಮುನ್ನೆಡೆಸಿದರು. ಅವರ ನಾಯಕತ್ವದ ಮಜಲುಗಳು ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ಆಕೆ ಲೆಜಿಸ್ಲೇಟಿವ್ ಕೌನ್ಸಿಲ್ ಸಮಿತಿಯ ಸದಸ್ಯರಾಗಿದ್ದರು ಮತ್ತು 1937 ರಲ್ಲಿ ನೇತಾಜಿ ಅವರು ರಚಿಸಿದ ರಾಷ್ಟ್ರೀಯ ಯೋಜನಾ ಸಮಿತಿಯ ಸದಸ್ಯರಾಗಿದ್ದರು. ಲೀಲಾರವರು ಕೌನ್ಸಿಲ್ ಮತ್ತು ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ  ನಿರಂತರವಾಗಿ ದನಿ ಎತ್ತುತ್ತಿದ್ದರು.

ಢಾಕಾ ಅವಿಭಜಿತ ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಲೀಲಾ ರೈ ಅವರು ಆ ಕಾಲದ ಅತ್ಯಂತ ಜನಪ್ರಿಯ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು, ಬ್ರಿಟಿಷರು ಅವರನ್ನು 1931-1938 ರವರೆಗೆ ವಿಚಾರಣೆಯಿಲ್ಲದೆ ಕಂಬಿಗಳ ಹಿಂದೆ ಇಡಬೇಕಾಯಿತು. 1940ರಲ್ಲಿ ಕಲ್ಕತ್ತಾದಲ್ಲಿ ನೇತಾಜಿ ನಡೆಸಿದ ಹಾಲ್ವೆಲ್ ಸ್ಮಾರಕ ತೆಗೆಯುವ ಚಳವಳಿಯ ಸಂದರ್ಭದಲ್ಲಿ, 1941ರಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು.

ಆಕೆ, 1942 ರಲ್ಲಿ ಕೊನೆಯ ಬಾರಿಗೆ ಬಂಧನವಾಗಿದ್ದರು ಮತ್ತು 1946 ರಲ್ಲಿ ಬಂಗಾಳದಲ್ಲಿ ಬಿಡುಗಡೆಯಾದ ಕೈದಿಗಳ ಕೊನೆಯ ಬ್ಯಾಡ್ಜ್ʼನಲ್ಲಿ ಬಿಡುಗಡೆ ಮಾಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು