Thursday, June 20, 2024

ಸತ್ಯ | ನ್ಯಾಯ |ಧರ್ಮ

ಅವರ್ನ ಬಿಟ್ಟು, ಇವರ್ನ ಬಿಟ್ಟು ಕೊನೆಗೆ ಲಿಂಬಾವಳಿ ಆಗ್ತಾರ ಬಿಜೆಪಿ ಸಾರಥಿ?

ಬೆಂಗಳೂರು: ಬಿಜೆಪಿಯ ಅಧ್ಯಕ್ಷ ಯಾರಾಗಬಹುದು ಎನ್ನುವ ಕೊನೆಯಿರದ ಪ್ರಶ್ನೆಗೆ ಈಗ ಇನ್ನೊಂದು ಉತ್ತರ ಮುನ್ನೆಲೆಗೆ ಬಂದಿದೆ.

ಈ ಬಾರಿ ಮುನ್ನೆಲೆಗೆ ಬಂದಿರುವ ಹೆಸರು ಅರವಿಂದ ಲಿಂಬಾವಳಿಯವರದು. ಹೌದು, ಸ್ಪರ್ಧೆಯಲ್ಲಿದ್ದ ಎಲ್ಲರನ್ನೂ ಮಕಾಡೆ ಮಲಗಿಸಿ ಈಗ ಲಿಂಬಾವಳಿ ಮುಂದಕ್ಕೆ ಬಂದಿದ್ದಾರೆ.

ಈಗ ಸ್ಪರ್ಧೆಯಲ್ಲಿ ಇರುವವರಲ್ಲಿ ಯಾರೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರೂ ಈಗಾಗಲೇ ಒಡೆದ ಮನೆಯಾಗಿರುವ ಬಿಜೆಪಿ ಇನ್ನಷ್ಟು ಚೂರಾಗುವ ಸಾಧ್ಯತೆಯನ್ನು ಮನಗಂಡ ಹೈ ಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗುತ್ತಿದೆ.

ಅನಂತಕುಮಾರ್ ಅವರ ಬಣದವರಾಗಿದ್ದ ಲಿಂಬಾವಳಿ RSS ಗೂ ಹತ್ತಿರದವರು. ಬಹುಶಃ ಇದು ಅವರ ಆಯ್ಕೆಯಲ್ಲಿ ಮುಖ್ಯ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಲಿಂಗಾಯತ ಬ್ರಾಹ್ಮಣ ಬಣಗಳ ತಿಕ್ಕಾಟವು ಮೇರೆ ಮೀರಿದ್ದು ಇದನ್ನು ನಿಭಾಯಿಸಲು ಸಾಧ್ಯವಾಗದ ಹೈ ಕಮಾಂಡ್ ಇವೆರಡೂ ಸಮುದಾಯಗಳ ನಾಯಕರನ್ನು ಬಿಟ್ಟು ಲಿಂಬಾವಳಿಯವರ ಮೊರೆ ಹೋಗಿದೆ.

ಅರವಿಂದ ಲಿಂಬಾವಳಿ ಅವರು ಬಿಜೆಪಿ ಸರ್ಕಾರದಲ್ಲಿ 4 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕರ್ನಾಟಕ ವಿಧಾನಸಭೆ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. 2008 ರಿಂದ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನವನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಹಾಗೆಯೇ ಹಲವು ವಿವಾದಗಳಿಗೆ ಒಳಗಾಗುತ್ತಲೇ ಬಂದಿದ್ದಾರೆ.

RSS, ABVP ಸಂಸ್ಥೆಗಳಲ್ಲೂ ಸಾಕಷ್ಟು ವರ್ಷಗಳ ಕಾಲ ಹಲವು ಸ್ಥಾನಗಳನ್ನು ನಿಭಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು