ಬ್ರಿಟನ್: ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಸೋಲಿಸಿ ಬ್ರಿಟನ್ ನ ಹೊಸ ಪ್ರಧಾನಿಯಾಗಿದ್ದಾರೆ.
ವಿವಾದಗಳ ಸರಣಿಯ ನಂತರ ಜುಲೈನಲ್ಲಿ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡಿದ್ದರು.
ಲಿಜ್ ಟ್ರಸ್ ಅವರನ್ನು ಮುಂದಿನ ಪ್ರಧಾನ ಮಂತ್ರಿ ಎಂದು ಹೆಸರಿಸಿದ ನಂತರ, ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ಆರ್ಥಿಕತೆಯನ್ನು ಬೆಳಸಲು ದಿಟ್ಟ ಯೋಜನೆಯನ್ನು ನೀಡುವುದಾಗಿ ಹೇಳಿದರು.
ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಓಟದಲ್ಲಿ ವಿಜೇತೆ ಎಂದು ಘೋಷಿಸಿದ ಕೂಡಲೇ, ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಲು ನನಗೆ ಗೌರವವಿದೆ ಎಂದು ಹರ್ಷವ್ಯಕ್ತಪಡಿಸಿದರು. ದೇಶವನ್ನು ಮುನ್ನೆಡೆಸಲು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪಕ್ಷದ ನಾಯಕರಿಗೆ ಲಿಜ್ ಟ್ರಸ್ ಧನ್ಯವಾದ ತಿಳಿಸಿದರು.