Monday, October 20, 2025

ಸತ್ಯ | ನ್ಯಾಯ |ಧರ್ಮ

ಮನೆಯ ರೀತಿಯಲ್ಲಿ ಸ್ಥಳೀಯ ಶಾಸಕ ಕೆಲಸ ಮಾಡಬೇಕು ಜೆಡಿಎಸ್ ಪ್ರತಿಭಟನೆಗೆ ನೈತಿಕತೆ ಇಲ್ಲ- ಪ್ರೀತಂ ಗೌಡ ಕಿಡಿ

ಹಾಸನ : ಹಾಸನಾಂಬ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ.

ನಗರದಲ್ಲಿ ಖಾಗೀ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬ ಉತ್ಸವದ ಪೂರ್ವಭಾವಿ ಸಭೆಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಅವರು ಭಾಗವಹಿಸದೇ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಸ್ಥಳೀಯ ಶಾಸಕನಾಗಿ ಉತ್ಸವವನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ನೋಡಿಕೊಳ್ಳಬೇಕಾದವರು ವಿದೇಶಿ ಪ್ರವಾಸ ಮುಗಿಸಿ ಉತ್ಸವದ ಹಿಂದಿನ ದಿನ ಮಾತ್ರ ಹಾಜರಾದರು. ಈಗ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದರು. ಉತ್ಸವದ ವೇಳೆ ಬೇಕಾದಷ್ಟು ಪಾಸ್‌ಗಳನ್ನು ಪಡೆದು ತಮ್ಮ ಕಾರ್ಯಕರ್ತರಿಗೆ ಹಂಚಿದಾಗ ಜಿಲ್ಲಾಡಳಿತ ಸರಿಯಾಗಿತ್ತು. ಈಗ ಮಾತ್ರ ಅದೇ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವುದು ಯಾವ ನೈತಿಕತೆಯಾಗಿದೆ? ಜನರ ಮುಂದೆ ಶಾಸಕರು ಈ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತ ಅಪಮಾನ ಮಾಡಿಲ್ಲ.

ನಿಜವಾದ ಅಪಮಾನ ಶಾಸಕರಿಂದಲೇ ಆಗಿದೆ. ಸ್ಥಳೀಯ ಶಾಸಕನಾಗಿ ಅವರು ಮೊದಲೇ ಆಗಮಿಸಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಅತಿಥಿಯಂತೆ ಬಂದು ಪಾಲ್ಗೊಂಡರು. ಇದು ಅವರ ಕರ್ತವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇನ್ನು ಹಾಸನಾಂಬೆ ದೇವಿ ಬಾಗಿಲು ತೆಗೆಯುವ ಮೊದಲು ಸಭೆ ನಡೆಸಿದಾಗ ಪಾಲ್ಗೊಳ್ಳಬೇಕಾಗಿತ್ತು. ಆದರೇ ವಿದೇಶ ಪ್ರವಾಸ ಮಾಡಿ ಗೆಸ್ಟ್ ರೀತಿಯಲ್ಲಿ ಬಾಗಿಲು ತೆಗೆಯುವ ದಿವಸದಂದು ಬಂದು ಹಾಸನಾಂಬ ಉತ್ಸವದಲ್ಲಿ ಪಾಲ್ಗೊಂಡು ನಂತರ ೧೦ ದಿನವಾದ ಮೇಲೆ ಭಾನುವಾರದಂದು ಬಂದು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ, ರಾತ್ರೋರಾತ್ರಿ ಮನಸ್ಸಿಗೆ ಅನ್ನಿಸಿರುವುದಕ್ಕೆ ಹಾಸನದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ! ಜಿಲ್ಲಾಧಿಕಾರಿಗಳನ್ನ ಮತ್ತು ಉಸ್ತುವಾರಿ ಸಚಿವರನ್ನು ದೂರುವುದು ಸುಲಭ, ಇವರನ್ನು ಆಗಾಗ್ಗ ಬದಲಾವಣೆ ಬೇರೆಡೆಗೆ ಆಗುತ್ತಿರುತ್ತಾರೆ. ಆದರೇ ಐದು ವರ್ಷಕ್ಕೆ ಒಬ್ಬ ಶಾಸಕನನ್ನು ಆಯ್ಕೆ ಮಾಡುತ್ತಾರೆ. ಗೌರವವನ್ನು ಕೇಳಿ ಪಡೆಯುವಂತದಲ್ಲ, ದುಡಿಮೆ ಮಾಡಿ ಪಡೆಯಬೇಕು. ಹಾಸನಾಂಬೆ ಬಗ್ಗೆ ಮಾಹಿತಿ ಪಡೆಯಲು ಎಷ್ಟು ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಭೇಟಿ ಮಾಡಿದ್ದೀರಿ!, ಏನು ಮನವಿ ಮಾಡಿದ್ದೀರಿ, ಡಿಸಿ ಜೊತೆ ಚರ್ಚಿಸಿದ್ದೀರಿ ಹೇಳಿ ಮೊದಲು. ಆಮೇಲೆ ಸ್ಪಂದಿಸಿಲ್ಲ ಗೌರವ ಕೊಟ್ಟಿಲ್ಲ ಎಂದರೇ ಪಕ್ಷತೀತವಾಗಿ ಇಡೀ ಹಾಸನದ ಜನ ನಿಮ್ಮ ಜೊತೆ ನಿಲ್ಲುತ್ತಾರೆ. ನಿಮ್ಮ ಕೆಲಸ ಆಗಬೇಕು ಎಂದಾಗ ಸರಕಾರದ ಎಲ್ಲಾ ಮಂತ್ರಿಗಳ ಬಳಿ ಹೋಗುತ್ತೀರಿ, ಸಂಜೀವಿನಿ ಬ್ಯಾಂಕಿನ, ಆಸ್ಪತ್ರೆಯ, ಸೌಹಾರ್ಧ ಬ್ಯಾಂಕಿನ ಸಮಸ್ಯೆ ಆದರೇ ಉಸ್ತುವಾರಿ ಸಚಿವರಗಳ ಮನೆಗೆ ಹೋಗಿ ನಿಮ್ಮ ವಯಕ್ತಿಕ ಕೆಲಸ ಎಲ್ಲಾ ಮಾಡಿಕೊಳ್ಳುತ್ತೀರಿ, ಹಾಸನಾಂಬ ಜಾತ್ರಾ ಮಹೋತ್ಸವ ಎಂದರೇ ಎಲ್ಲಾ ಮಾಡುತ್ತಾರೆ ನಾನು ಹೋಗಿ ಉದ್ಘಾಟನೆಗೆ ಮುಂದೆ ನಿಲ್ಲುವುದು ಬೇಜವಬ್ಧಾರಿತನ ತೋರಿಸುತ್ತದೆ. ಈಗಾಗಲೇ ನಿಮಗೆ ಮೂರನೇ ಜಾತ್ರಾ ಮಹೋತ್ಸವ. ನೀವು ಜವಬ್ಧಾರಿ ಅರಿಯದೇ ಈಗ ಗೆಸ್ಟ್ ರೀತಿ ನಡೆದುಕೊಂಡು ಗೌರವ ಕೊಡುತ್ತಿಲ್ಲ ಎಂದರೇ ಹಿರಿಯ ಸಚಿವರು ಅವರು ಬೆಳಿಗ್ಗೆ ೪ ಗಂಟೆಗೆ ಬಂದು ಹೋಗುತ್ತಿದ್ದಾರೆ. ನಮಗೆ ಕಾಂಗ್ರೆಸ್ ಎಂದರೇ ವಿರೋಧ ಪಕ್ಷ ಆದರೇ ಒಳ್ಳೆ ಕೆಲಸಕ್ಕೆ ನಾವು ಹೇಳುತ್ತಿದ್ದೇವೆ. ದರ್ಶನಕ್ಕೆ ಉತ್ತಮವಾಗಿ ಅವಕಾಶ ಮಾಡಿಕೊಡಲಾಗಿದ್ದರೂ ಆದರೇ ಇನ್ನು ಕೂಡ ದೇವಾಲಯದಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಪ್ರೀತಂ ಗೌಡ ಅವರ ಈ ತೀವ್ರ ಹೇಳಿಕೆಯಿಂದ ಹಾಸನ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು, ಹಾಸನಾಂಬ ಉತ್ಸವದ ಹಿನ್ನೆಲೆ ರಾಜಕೀಯ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page