Thursday, July 3, 2025

ಸತ್ಯ | ನ್ಯಾಯ |ಧರ್ಮ

ಸಾರ್ವಜನಿಕರ ದೂರು ವಿಚಾರಣೆಯಲ್ಲಿ ಅಧಿಕಾರಿಗಳ ಬಣ್ಣ ಬಯಲು ಸು‍್ಳು ಹೇಳಬೇಡಿ ಎಂದು ಗರಂ ಆದ ಲೋಕಾಯುಕ್ತರು

ಹಾಸನ : ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಅವರು ಹಲವು ವರ್ಷ ತಿಂಗಳಿನಿಂದ ಸಾರ್ವಜನಿಕರ ಕೆಲಸ ಮಾಡದ ದೂರುಗಳಲ್ಲಿ ತಹಸೀಲ್ದಾರ್, ವಿಲೆಜ್ ಅಕೌಂಟೆಂಟ್ ಹಾಗೂ ಇತರೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಉತ್ತರ ಕೊಡಲಾಗದೇ ತಡವರಿಸಿದಾಗ ಸುಳ್ಳನ್ನು ಮತ್ತೆ ಮತ್ತೆ ಹೇಳಬೇಡಿ ಎಂದು ಅವರ ಕೋಪಕ್ಕೆ ಗುರಿಯಾಗಿ ಸೂಚಿಸಿದ ಪ್ರಸಂಗ ನಡೆಯಿತು. ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಕುಂದು ಕೊರತೆಗಳ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರೊಂದಿಗೆ ಮತ್ತು ಎದುರುದಾರರುಗಳ ಸಭೆಯಲ್ಲಿ ಉಪಲೋಕಾಯುಕ್ತರು ಚನ್ನರಾಯಪಟ್ಟಣದ ಕಬ್ಬಾಳು ಗ್ರಾಮದ ಸಣ್ಣಪ್ಪ ಎಂಬುವರು ಖಾತೆ ಪಹಣಿ ಪೋಡಿ ಮಾಡಲು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ತಹಸಿಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳು ವಿಳಂಬ ಮಾಡಿರುವ ಬಗ್ಗೆ ಲೋಕಾಯುಕ್ತ ಅವರ ಗಮನಕ್ಕೆ ತಂದರು. ಈ ವೇಳೆ ಹಾಜರಿದ್ದ ತಹಸಿಲ್ದಾರ್ ನವೀನ್ ಕುಮಾರ್ ರವರು ಸಣ್ಣಪ್ಪ ಅವರ ಅರ್ಜಿಗೆ ಹಿಂಬರಹ ಬರೆಯದೆ ಸಹಿ ಹಾಕದೆ ಸೂಕ್ತ ಉತ್ತರ ನೀಡಲು ವಿಳಂಬ ಮಾಡಿರುವ ಬಗ್ಗೆ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು. ನಿಮಗೆ ತಹಸೀಲ್ದಾರ್ ಕೆಲಸ ಕೊಟ್ಟವರು ಯಾರು? ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲವೇ? ಅನುಭವ ಇಲ್ಲದೆ ಈ ರೀತಿ ಎಲ್ಲರನ್ನು ಕಚೇರಿಗೆ ಅಲೆಸುವುದು ಏಕೆ? ಸುಳ್ಳಿಗೆ ಮತ್ತೊಂದು ಸುಳ್ಳು ಹೇಳಬಾರದು ಎಂದು ಪ್ರಶ್ನಿಸಿದ ಅವರು ಮುಂದಿನ ಒಂದು ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಿ, ಯಾವ ಸೀಮೆಯವರು ನೀವು ಈ ಸಂಬಮಧ ಮೇಲ್ಮನವಿಗೆ ಸಲ್ಲಿಸಿ ಎಂದು ಈ ಪ್ರಕರಣಕ್ಕೆ ಅಂತ್ಯವಾಡಿದರು.


ಇದೆ ತಾಲೂಕಿನ ದಂಡಿಗನಹಳ್ಳಿಯ ರಂಗಮ್ಮ ಅವರು ತಾವು ಗೇಣಿ ನೀಡಿದ್ದ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿಕೊಡಲಾಗಿದೆ. ಎಂದು ಅರ್ಜಿ ಸಲ್ಲಿಸಿದ್ದರು. ಈ ವೇಳೆ ದಾಖಲೆ ಪರಿಶೀಲನೆ ನಡೆಸಿದ ಲೋಕಾಯುಕ್ತರು ಗೇಣಿ ನೀಡಿದ ನಂತರ ಅಗತ್ಯ ದಾಖಲೆಯನ್ನು ಒದಗಿಸಿಲ್ಲ ಹಾಗೂ ಅನುಭವದಲ್ಲಿ ಇರುವವರಿಗೆ ಕಾನೂನಿನಡಿ ಜಮೀನಿನ ಹಕ್ಕುದಾರರಾಗಿರುತ್ತಾರೆ ಆದ್ದರಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಭೂಮಿಯ ಹಕ್ಕನ್ನು ಸಾಬೀತುಪಡಿಸುವಂತೆ ತಾಕೀತು ಮಾಡಿದರು. ಸ್ಥಳ ಪರಿಶೀಲನೆ ನಡೆಸದೆ ಖಾತೆ ಮಾಡಿಕೊಟ್ಟಿದ್ದು ಏಕೆ ಎಂದು ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿ ಗಳನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಹೊಳೆನರಸೀಪುರದ ಹೊನ್ನೇನಹಳ್ಳಿಯ ರೈತರೋರ್ವರು ತಮ್ಮ ಜಮೀನಿನಲ್ಲಿ 58 ಗಂಧದ ಮರಗಳನ್ನು ಬೆಳೆದಿದ್ದು ಇದರಲ್ಲಿ 54 ಮರಗಳನ್ನು ಕಡಿದು, 719 ಕೆಜಿ ಗಂಧದ ತುಂಡುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತು. ಆದರೆ ಕೇವಲ 609 ಕೆಜಿ ಗಂಧದ ತುಂಡು ಇದೆ ಎಂದು ವರದಿ ದಾಖಲಿಸಿದ್ದಾರೆ. ಅಲ್ಲದೆ ಮರ ಕಡಿದಿರುವ ಸಂಬAಧ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ಅರ್ಜಿ ಹಾಕಿದ್ದರು. ಇದನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು ಎಫ್ ಐ ಅರ್ ವಜಾ ಮಾಡಲು ನಮಗೆ ಅಧಿಕಾರವಿಲ್ಲ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿ ವಜಾ ಮಾಡಿಕೊಳ್ಳಬೇಕಿದೆ. ಆದ್ದರಿಂದ ಲೋಕಾಯುಕ್ತ ಪೊಲೀಸರಿಂದ ಸ್ಥಳ ಪರಿಶೀಲನೆ ನಡೆಸಿ ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಹೇಮಾವತಿ ಪುನರ್ ಯೋಜನೆಯಡಿ ಜಮೀನು ಮಂಜೂರಾಗಿದ್ದರೂ ಖಾತೆ ಮಾಡಿಲ್ಲ. ಖಾತೆ ಬದಲಾವಣೆಯಲ್ಲಿ ಹೆಸರು ಅದಲು ಬದಲೂವಾಗಿದ್ದರೂ ಸರಿ ಮಾಡಿಲ್ಲ ಎಂದು ಕೆಲವರು ಮೇಲ್ಮನವಿಯನ್ನು ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ಎಂದು ಉಪ ಆಯುಕ್ತರು ಸೂಚಿಸಿದರು.


ಹಿಂದಿನ ಸಾಲಿನ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಪಾಂಡು ಅವರ ವಿರುದ್ಧ ಮಾಡಿರುವ ದೂರು ರದ್ದು ಪಡಿಸಿ ನೊಂದಾವಣಿ ಮಾಡಿಕೊಟ್ಟಿರುವ ಬಗ್ಗೆ ಉಪನಿರ್ದೇಶಕರ ಮೇಲೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ವ್ಯಕ್ತಿ ಓರ್ವ ಕೋರಿದ್ದರು. ವ್ಯಕ್ತಿಯೇ ದಾನ ಪತ್ರ ಮತ್ತು ನೊಂದಾವಣೆ ಆಗಿರುವುದನ್ನು ಒಪ್ಪಿಕೊಂಡಿದ್ದು, ಏನಾದರೂ ಇದು ಸುಳ್ಳು ಎಂಬುದು ಆದರೇ ಉಪನಿರ್ದೇಶಕರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಆದರೇ ನೊಂದಾವಣಿ ಆಗಿರುವುದು ತಿಳಿದಿರುವುದರಿಂದ ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದರು. ದೂರು ಕಾರ್ಯಕ್ರಮದಲ್ಲಿ ಬಹುತೇಕ ಪ್ರಕರಣಗಳನ್ನು ಮುಕ್ತಾಯಗೊಳಿಸಿದರು. ಕೆಲವೊಂದು ಕೇಸನ್ನು ಇತರೆ ಇಲಾಖೆ ಅಧಿಕಾರಿಗಳ ಪರಿಶೀಲನೆಗೆ ಹಾಗೂ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ದೂರು ದಾಖಲಿಸಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ಅಪರ ನಿಬಂಧಕರಾದ ಪೃಥ್ವಿರಾಜ್ ವೆರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ 02 ಸಹಾಯಕ ನಿಬಂಧಕರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ. ಶುಭವೀರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ. ದಾಕ್ಷಾಯಿಣಿ, ಸಿವಿಲ್ ನ್ಯಾಯಾಧೀಶರು ಹಾಗೂ ಉಪಯೋಕಾಯುಕ್ತ ರವರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲ, ಕರ್ನಾಟಕ ಲೋಕಾಯುಕ್ತದ ಹಾಸನ ವಿಭಾಗದ ಪೊಲೀಸ್ ಅಧಿಕ್ಷಕರಾದ ಪಿ.ವಿ. ಸ್ನೇಹ, ಸಿ.ಕೆ. ಹರೀಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page