Monday, February 3, 2025

ಸತ್ಯ | ನ್ಯಾಯ |ಧರ್ಮ

BBMP ಕಸದಲ್ಲಿ ಕೋಟಿ ಕೋಟಿ ಲೂಟಿ – ದಿನೇಶ್‌ ಗೂಂಡೂರಾವ್‌ ವಿರುದ್ಧ ದೂರು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ, ಪದೇ ಅವ್ಯವಹಾರ ಆರೋಪ ಕೇಳಿಬರುತ್ತಿವೆ. ಅದೇ ರೀತಿ ಇದೀಗ ಕಸ ವಿಲೇವಾರಿ ವಿಚಾರದಲ್ಲೂ ದುಡ್ಡು ನುಂಗುತ್ತಿರುವ ಆರೋಪ ಕೇಳಿ ಬಂದಿದೆ. ದಿನೇಶ್‌ ಗುಂಡೂರಾವ್‌ ಶಾಸಕರಾಗಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3 ಪಾಳಿಯಲ್ಲಿ ತ್ಯಾಜ್ಯ ವಿಲೇವಾರಿಯ ಕೆಲಸ ನಡೆಸುತ್ತಿರುವುದಾಗಿ ಸುಳ್ಳು ಹೇಳಿ, ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಹಣವನ್ನ ಲೂಟಿ ಹೊಡೆಯುತ್ತಿರುವ ಆರೋಪ ಕೇಳಿಬಂದಿದೆ.  ಈ ಕುರಿತು ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಇಲಾಖೆಯ ವಿಶೇಷ ಆಯುಕ್ತರಾಗಲೀ, ಮುಖ್ಯ ಅಭಿಯಂತರರಾಗಲೀ, ಅಧೀಕ್ಷಕ ಅಭಿಯಂತರರಾಗಲೀ ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಲೀ ನಿಜಕ್ಕೂ ಮಧ್ಯಾಹ್ನದ ಪಾಳಿ ಮತ್ತು ರಾತ್ರಿಯ ಪಾಳಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದೆಯೇ ? ಇಲ್ಲವೇ ? ಎಂಬ ಸತ್ಯವನ್ನು ಖುದ್ದಾಗಿ ಪರಿಶೀಲನೆ ಮಾಡದೆಯೇ, ವಂಚಕರು ಸೃಷ್ಟಿಸುತ್ತಿರುವ ನಕಲಿ ದಾಖಲೆಗಳಿಗೆ ಅನುಮೋದನೆಯನ್ನು ನೀಡಿ ಕೋಟ್ಯಾಂತರ ರೂಪಾಯಿ ಹಣವನ್ನು ಪ್ರತೀ ತಿಂಗಳು ಬಿಡುಗಡೆ ಮಾಡುತ್ತಿದ್ದಾರ ಎಂದು ಎನ್‌ಆರ್‌ ರಮೇಶ್‌ ಆರೋಪಿಸಿದ್ದಾರೆ.

ಬಿಜೆಪಿ ನಾಯಕ ಎನ್.ಆರ್. ರಮೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಲೆಕ್ಕವಾದರೆ, ಇತ್ತ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ತ್ಯಾಜ್ಯ ವಿಲೇವಾರಿಯನ್ನು 3 ಪಾಳಿ ಅಂದರೆ 3 ಶಿಫ್ಟ್ ಮೂಲಕ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ ಎನ್.ಆರ್. ರಮೇಶ್. ಈ ಬಗ್ಗೆ ಸೂಕ್ತ ತನಿಖೆಗೂ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page