Home ಬ್ರೇಕಿಂಗ್ ಸುದ್ದಿ ಕಾಡಾನೆಗೆ ಡಿಕ್ಕಿ ಹೊಡೆಯಲು ಯತ್ನ ಲಾರಿ ಚಾಲಕನಿಗೆ 5 ಸಾವಿರ ದಂಡ – ಅರಣ್ಯ ಇಲಾಖೆ

ಕಾಡಾನೆಗೆ ಡಿಕ್ಕಿ ಹೊಡೆಯಲು ಯತ್ನ ಲಾರಿ ಚಾಲಕನಿಗೆ 5 ಸಾವಿರ ದಂಡ – ಅರಣ್ಯ ಇಲಾಖೆ

ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯತ್ತ ಅಪಾಯಕಾರಿಯಾಗಿ ಲಾರಿಯನ್ನು ಚಲಾಯಿಸಿದ ಚಾಲಕನಿಗೆ ಅರಣ್ಯ ಇಲಾಖೆ 5,000 ರೂ. ದಂಡ ವಿಧಿಸಿದೆ.

ಘಟನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಚಾಲಕನನ್ನು ಪತ್ತೆಹಚ್ಚಿದ್ದು, ಕೇರಳದ ಮಲಪ್ಪುರಂ ಮೂಲದ ಜಿನ್‌ಶಾದ್ ಸಿ. ಎಂದು ಗುರುತಿಸಿದ್ದಾರೆ. ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಿದ್ದಕ್ಕಾಗಿ ಹಾಗೂ ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ವನ್ಯಜೀವಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅರಣ್ಯ ಇಲಾಖೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದೆ.

You cannot copy content of this page

Exit mobile version