Thursday, April 17, 2025

ಸತ್ಯ | ನ್ಯಾಯ |ಧರ್ಮ

ಲಾರಿ ಮುಷ್ಕರ ವಾಪಸ್; ಸರ್ಕಾರದೊಂದಿಗೆ ಮಾತುಕತೆ ಸಕ್ಸಸ್

ಡೀಸೆಲ್ ದರ, ಟೋಲ್ ಹೆಚ್ಚಳ, ಆರ್ ಟಿಓ ಕಿರುಕುಳ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೈಗೊಂಡಿದ್ದ ಲಾರಿ ಮುಷ್ಕರ ಅಂತೂ ರಾಜ್ಯ ಸರ್ಕಾರದ ಸಂಧಾನದ ಬಳಿಕ ಅಂತ್ಯವಾಗಿದೆ.

ಇಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕರೆದಿದ್ದ ಲಾರಿ ಮಾಲೀಕರ ಸಂಘ ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ನಡೆದ ಸಭೆಯಲ್ಲಿ ಮುಷ್ಕರ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆಯಿಂದ ನಡೆದ ಮೂರು ಸುತ್ತಿನ ಮಾತುಕತೆಯ ನಂತರ ಲಾರಿ ಮಾಲೀಕರು ಮುಷ್ಕರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ

ಇಂದಿನ ಸಭೆಯಲ್ಲಿ ಲಾರಿ ಮಾಲೀಕರ ಕೆಲ ಬೇಡಿಕೆಗಳನ್ನು ಈಡೇರಿಸೋದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂಬುದಾಗಿ ತಿಳಿದು ಬಂದಿದೆ. ಅದರಲ್ಲಿ ಟೋಲ್ ಗಳಲ್ಲಿ ಲಾರಿ, ಗೂಡ್ಸ್ ವಾಹನಗಳಿಗೆ ದರ ಫಿಕ್ಸ್ ಮಾಡಲು ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಕೆಲ ಬೇಡಿಕೆ ಈಡೇರಿಸೋದಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳೋ ಭರವಸೆಯನ್ನು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page