Saturday, June 15, 2024

ಸತ್ಯ | ನ್ಯಾಯ |ಧರ್ಮ

ಲವ್ – ಲಾಸ್ಟ್ ಆಂಡ್ ಫೌಂಡ್

ದಿನಕಳೆದಂತೆ ರಾಹುಲ್ ಗೆ ತಾನು ಎಷ್ಟು ಕಂಫರ್ಟ್ ಝೋನ್ ನಲ್ಲಿ ಇದ್ದೆ ಅನ್ನೋದರ ಅರಿವು ಆಗ್ತಾ ಬಂತು. ತನ್ನ ಕೋಣೆಯನ್ನು ಸಹ ಅವನಿಗೆ ದಿನಾ ಕ್ಲೀನ್ ಮಾಡೋಕೆ ಆಗ್ತಾ ಇರ್ಲಿಲ್ಲ. ಮೊದಲ ಬಾರಿ ಸಿರಿಯ ಹಾರ್ಡ್ ವರ್ಕ್ ನ ಬಗ್ಗೆ ಹೆಮ್ಮೆ ಅನ್ನಿಸಿತ್ತು. ವಾರ ಕಳೆಯುವ ಹೊತ್ತಿಗೆ ರಾಹುಲ್ ನ ಇಗೋ ಮತ್ತೆ ತಾನು ಗಂಡು, ತಾನು superior ಅನ್ನೋ pride ಕರಗಿ ಹೋಗಿತ್ತು – ಟೆಕ್ಕಿ ಡೈರೀಸ್ ನಲ್ಲಿ ಕಾವ್ಯಶ್ರೀ

Love isn’t something natural. Rather it requires discipline, concentration, patience, faith, and the overcoming of narcissism. It isn’t a feeling, it is a practice.

Eric Fromm

“ಆಕಾಂಕ್ಷಾ, ಸ್ವಲ್ಪ ಮಾತಾಡಬಹುದಾ ನಿಮ್ ಜೊತೆ?”

ಸಿರಿ, ನಮ್ ಟೀಮ್ ನ UX designer. ನಾವೆಲ್ಲಾ ಅವತ್ತು ಟೀ ಬ್ರೇಕ್ ನಲ್ಲಿ ಇದ್ದಾಗ ಬಂದು ಕೇಳಿದ್ದಳು.

ಆಕಾಂಕ್ಷ sure ಎಂದು ಟೀ ಕಪ್ ಟೇಬಲ್ ಮೇಲೆ ಇರಿಸಿ “ಪ್ಲೀಸ್ have a seat” ಎಂದಳು. 

ಸಿರಿ ಪಕ್ಕದ ಟೇಬಲ್ ನಲ್ಲಿದ್ದ ಖಾಲಿ ಚೇರ್ ತಗೊಂಡು ನಮ್ ಮುಂದೆ ಕುಳಿತುಕೊಂಡಳು.

ಮೊದಲು ಮಾತಾಡಲು ಸ್ವಲ್ಪ hessitant ಆಗೆ ಇದ್ದಳು. ಅವಳ ಮುಜುಗರ ನೋಡಿ ನಾವೆಲ್ಲ ಎದ್ದು ಹೊರಟಾಗ “it’s ok ಕೂತ್ಕೊಳ್ಳಿ please I know you people are team” ಎಂದಳು.

ಸಿರಿ ಮತ್ತು ರಾಹುಲ್ ನಮ್ ಟೀಮ್ ಮೆಂಬರ್ಸ್. Dubsmash, ಟಿಕ್ ಟಾಕ್ ಗಳನ್ನ ಮಾಡ್ತಾ ಮಾಡ್ತಾ close ಆಗಿದ್ದವರು.

ಸಿರಿಯದ್ದು ಇಲ್ಲೇ ಪಕ್ಕದ ತುಮಕೂರು ಆದ್ರೆ, ರಾಹುಲ್ ನದ್ದು ಹೃಷಿಕೇಶ್. 

ಲಾಕ್ ಡೌನ್ ನಲ್ಲಿ ಲಾಂಗ್ distance ಇದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿ ಮನೇಲಿ ದೊಡ್ಡ ಫೈಟ್ ನಡೆದು ಕಡೆಗೆ ಒಪ್ಪಿಸಿ ಮದುವೆ ಆಗಿದ್ದವರು.

Reception ನಲ್ಲು ಇವರು reels ಮಾಡೋದು ನಿಲ್ಲಿಸಿರಲಿಲ್ಲ.

ಈಗೆಲ್ಲಾ ಅದೆ ಟ್ರೆಂಡ್ ಅಲ್ವಾ….

ಕ್ಯೂಟೆಸ್ಟ್ ಕಪಲ್ ಅಂತಾನೇ ಎಲ್ರೂ ಕರೀತಾ ಇದ್ದಿದ್ದು. ಅವ್ರಿಬ್ರು ಇದ್ದಿದ್ದು ಹಾಗೇನೇ. ದಿನಾ ಒಂದೊಂದು ಇಲ್ಲ ಅಂದ್ರೆ ಎರಡು ಮೂರು reels ಅಂತೂ ಇದ್ದೇ ಇರೋದು.

ಇಂತಿದ್ದ ಸಿರಿ, ಇವತ್ತು ಆಕಾಂಕ್ಷ ಹತ್ರ ಅಡ್ವೊಕೇಟ್ suggestion ಕೇಳ್ತಾ ಇದಾಳೆ…

“ಆಕಾಂಕ್ಷ ನಂಗೆ ಒಬ್ಬ ಒಳ್ಳೆ ಡೈವೋರ್ಸ್ ಲಾಯರ್ ನ suggest ಮಾಡ್ತೀರಾ please?”

ಆಶ್ಚರ್ಯ ಆಯ್ತು. ಆದ್ರೂ ಇವಳಿಗೆ ಅಂತ ಏನ್ ಅಲ್ವಲ್ಲ ಅಂತ ಅನ್ನಿಸಿ, 

“Sure, actually ಹಿತಾ ಅಣ್ಣಾನೆ ಅಡ್ವೊಕೇಟ್. ನನ್ ಡೈವೋರ್ಸ್ handle ಮಾಡಿದ್ದು ಅವರೇ, but if am not nosy may I know to whom you are asking?’ ಎಂದು ಕೇಳಿದಳು ಆಕಾಂಕ್ಷ.

ಸ್ವಲ್ಪ ಹೊತ್ತು ಮೌನಕ್ಕೆ ಜಾರಿದ್ದ ಸಿರಿ ಕೊನೆಗೆ ಹೇಳಿದ್ದಳು, “ನಂಗೆ”.

ಇದೇನಾಯ್ತು?

ಎಷ್ಟು ಚೆನ್ನಾಗಿದ್ರಲ!

ಆಮೇಲೆ ನೆನಪಾಯ್ತು, ಇವ್ರಿಬ್ರು ಕಪಲ್ ವಿಡಿಯೋ ಮಾಡಿ ಸುಮಾರು ವಾರಗಳೇ ಆಗಿದ್ದವು. ಎಲ್ಲೋ ಬ್ರೇಕ್ ತಗೊಂಡಿದಾರೆ ಅಂತ ಅಂದುಕೊಂಡಿದ್ದೆ.

ಇದೇ ಅಲ್ವಾ virtual world ನಲ್ಲಿನ ಬದುಕು ಅಂದ್ರೆ, ನೀವು ಪೋಸ್ಟ್ ಮಾಡ್ಕೊಂಡು ಆಕ್ಟಿವ್ ಆಗಿದ್ರೆ ಜನ reaction ಮಾಡ್ತಾರೆ. ಅದೇ ನಿಲ್ಲಿಸಿದ್ರೆ ಮರೆತು ಮುಂದೆ ಸ್ಕ್ರಾಲ್ ಮಾಡ್ಕೊಂಡು ಹೋಗ್ತಾರೆ, ಅಲ್ಲಿ ಇನ್ಯಾರದ್ದೋ content ಇರುತ್ತೆ. ಅದಕ್ಕೆ reaction ಕೊಡ್ತಾ ನಿಮ್ಮನ್ನ ಮರೆತು ಹೋಗ್ತಾರೆ. 

“ಏನ್ ಹೇಳ್ತಾ ಇದ್ಯಾ ನೀನು” ಅಂತ ಕಣ್ಣು ಕಣ್ಣು ಬಿಟ್ಟು ನೋಡಿದ್ದಳು ಧ್ವನಿ.

ಆಗಿದ್ದಿಷ್ಟು, ಇವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆ ಆಗಿದ್ದರೇನೋ ನಿಜ. ಆದ್ರೆ lockdown ಮತ್ತು work from home ಇದ್ದ ಕಾರಣ ಇವರಿಬ್ಬರೂ ಮುದ್ದಿನ ಮರಿಗಳ ತರಹ ಇದ್ದರು. 

ಸ್ವಲ್ಪ ದಿನ ಸಿರಿಯ ಮನೆ ತುಮಕೂರು ನಲ್ಲಿ ಇದ್ದರೆ ಇನ್ನೂ ಸ್ವಲ್ಪ ದಿನ ಹೃಷಿಕೇಶ್ ನಲ್ಲಿ.

ಆದ್ರೆ ಹೆಚ್ಚು ಇರ್ತಾ ಇದ್ದಿದ್ದು ಸಿರಿಯ ಅಮ್ಮನ ಮನೆಯಲ್ಲಿ.

ಯಾವಾಗಾದ್ರು ಹೃಷಿಕೇಶಕ್ಕೆ ಹೋದಾಗಲೂ ಅಲ್ಲಿ ಕೆಲಸ ಇದ್ದದ್ದು ಅಷ್ಟಕ್ಕಷ್ಟೇ. ಸೈಟ್ ಸೀಯಿಂಗ್, reels ಇವುಗಳಲ್ಲೆ ಕಳೀತಾ ಇದ್ದಿದ್ದು. ಹಾಗಾಗಿ extended honeymoon period ಇಬ್ಬರದ್ದೂ. ರಾಹುಲ್ ತುಂಬಾ conservative familyಯಿಂದ ಬಂದವ. ಬಟ್ಟೆಗಳ ವಿಷಯದಲ್ಲಿ ಅಂತಹ prejudice ಇಲ್ಲದೆ ಇದ್ದರೂ ಮಿಕ್ಕೆಲ್ಲ ವಿಚಾರಗಳಲ್ಲಿ ಅವನು ತುಂಬಾ conservative.

ಹೀಗಿದ್ದ ಅವರು ಇದೇ ಮೊದಲ ಬಾರಿಗೆ ಇಬ್ಬರೇ ಬೆಂಗಳೂರಿನಲ್ಲಿ ವಾಸಿಸ್ತ ಇರೋದು. 

Atleast ಸಿರಿಗೆ ಇದ್ರ ಬಿಸಿ ತಟ್ಟಿದೆ. ಮದುವೆ ಆಗಲು ಬರೀ ಪ್ರೀತಿ ಒಂದೇ ಇದ್ದರೆ ಸಾಲದು ಜೊತೆಗೆ ಜವಾಬ್ದಾರಿ, ಒಬ್ಬರಿಗೊಬ್ಬರು ಗೌರವ ತೋರಿಸೋದು ಎಲ್ಲವೂ ಮುಖ್ಯ ಅಂತ.

ಸಿರಿಗೆ ಮುಖ್ಯ ತೊಂದರೆ ಏನಂದ್ರೆ, ರಾಹುಲ್ ನ  patriarchal ಮನಸ್ಥಿತಿ. ಅವನು ಬೆಳೆದು ಬಂದಿದ್ದ ಪರಿಸರದಲ್ಲಿ gender roles ಪ್ರಮುಖ ಪಾತ್ರ ವಹಿಸಿತ್ತು. ಅಂದ್ರೆ ಅವನು ಬೆಳೆದು ಬಂದಿದ್ದ ಪರಿಸರದಲ್ಲಿ ಗಂಡ bread winner ಆಗಿ ಮನೆಯ ಯಜಮಾನನಾಗಿ ಇರ್ತಾನೆ ಮತ್ತು ಹೆಣ್ಣು ಹೋಂ ಮೇಕರ್ ಆಗಿ ಮನೆ ಕೆಲಸವನ್ನ ನಿಭಾಯಿಸ್ತಾಳೆ.

ರಾಹುಲ್ ಹೊರ ನೋಟಕ್ಕೆ ಮಾಡರ್ನ್ ಹುಡುಗನ ತರ ಇದ್ದರೂ ಅವನು stereotype ಗೇನು ಹೊರತಾಗಿ ಇರ್ಲಿಲ್ಲ. 

ಅತಿ ಹೆಚ್ಚು ಇಂಟರ್ ಕಲ್ಚರ್ ವಿವಾಹಗಳಾಗೋದು ಐಟಿ ನಲ್ಲಿ. ಇಂಥಹ ಸಂದರ್ಭ ಗಳಲ್ಲಿ ಬಹುಪಾಲು ಕಷ್ಟ ಆಗೋದು ಹೆಣ್ಣು ಮಕ್ಕಳಿಗೆ.

ಒಂದು ಮದುವೆ ಅಂತ ಬಂದಾಗ ಅಲ್ಲಿ mutual respect ಅನ್ನೋದು ಇಲ್ಲ ಅಂದಾಗ ಅಲ್ಲಿ ಪ್ರೀತಿ ಸತ್ತು ಹೋಗುತ್ತೆ.

ಪ್ರೀತಿ ಮತ್ತೆ mutual respect ಎರಡೂ ಸಂಸಾರ ಅನ್ನೋ ಬಂಡಿಯ ಎರಡು ಚಕ್ರಗಳು. ಪತಿ ಪತ್ನಿಯರಿಬ್ಬರೂ ಸಮಾನ ಗೌರವಕ್ಕೆ ಪಾತ್ರರಾಗಬೇಕು.

ಸಿರಿ ಮತ್ತು ರಾಹುಲ್ ರ ವಿಚಾರದಲ್ಲಿ ಆಗಿದ್ದು ಏನಂದ್ರೆ, ರಾಹುಲ್ ಸಿರಿಯ ಜೊತೆ ಮನೆ ಕೆಲಸಗಳಲ್ಲಿ ಭಾಗಿ ಆಗಲ್ಲ. ಇಬ್ಬರೂ ವರ್ಕಿಂಗ್ ಪ್ರೊಫೆಷನಲ್ ಗಳೇ ಆಗಿರುವ ಕಾರಣ, ಸಿರಿಗೆ ಮನೆ ಮತ್ತು ಆಫೀಸ್ ನಿಭಾಯಿಸಲು ಕಷ್ಟ ಆಗಿದೆ. ಮನೆ ಕೆಲಸ ಎಲ್ಲಾದ್ರೂ ಹೋಗ್ಲಿ ತನ್ನ ಕೆಲಸ ಕೂಡ ಮಾಡ್ಕೊಳೋಕೆ ರಾಹುಲ್ ನಿಗೆ ಆಗಲ್ಲ. ಬೆಳಿಗ್ಗೆ ಎದ್ದಾಗ ಜ್ಯೂಸ್ ನಿಂದ ಹಿಡಿದು ರಾತ್ರಿ ಮಲಗೋವಾಗ ಹಾಲು ಕುಡಿಯುವ ವರೆಗೂ ಅವನಿಗೆ ಎಲ್ಲಾನೂ ಮಾಡಿ ಮುಂದೆ ಇಡಬೇಕು. ತನ್ನ shirt ಅನ್ನು iron ಮಾಡಿಕೊಳ್ಳಲು ಸಹ ಬರಲ್ಲ ಅವನಿಗೆ. ಬೆಳಿಗ್ಗೆ ಅವನು ಎದ್ದು morning run ಗೆ ಹೊರಡುವ ಮೊದಲು green tea, ಅವ್ನು running ಇಂದ ಬರುವ ಹೊತ್ತಿಗೆ ಸ್ನಾನದ ಮನೆನ ಸೆಟ್ ಮಾಡಿ ಇಟ್ಟಿರಬೇಕು, ಸ್ನಾನದಿಂದ ಬರುವ ಹೊತ್ತಿಗೆ ಅವ್ನ ಬಟ್ಟೆ iron ಮಾಡಿ ಇಟ್ಟಿರಬೇಕು. Ready ಆಗಿ ಬಂದ ತಕ್ಷಣ breakfast ಮತ್ತು bottle ನಲ್ಲಿ ಅವನು office ನಲ್ಲಿ ಕುಡಿಯೋಕೆ ಪ್ರೋಟಿನ್ ಶೇಕ್. ಅಲ್ಲದೇ ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ರೆಡಿ ಮಾಡಿ ಇವೆಲ್ಲ ಮಾಡುವ ಜೊತೆಗೆ ಸಿರಿಯೂ ರೆಡಿ ಆಗಿ ಹೊರಡಬೇಕು. ಇದಿಷ್ಟು ಬೆಳಗಿನದ್ದಾದರೆ, ಸಂಜೆಯದ್ದು ಇನ್ನೊಂದು ಕತೆ. ಆಫೀಸ್ ನಿಂದ ಬಂದವನು ಅವ್ನ ಪಾಡಿಗೆ ಅವ್ನು ಗೇಮಿಂಗ್ ನಲ್ಲಿ ಬ್ಯುಸಿ ಆಗಿ ಹೋಗ್ತಾನೆ.

ಇದ್ರ ವಿಚಾರವಾಗಿ ಅನೇಕ ಸಲ ರಾಹುಲ್ ನೊಟ್ಟಿಗೆ ಮಾತಾಡಲು ಕುಳಿತಾಗೆಲ್ಲ ಆ ಮಾತುಕತೆ ಜಗಳದಲ್ಲಿ ಕೊನೆ ಆಗಿದೆ. ಇದರಿಂದ ರೋಸಿ ಹೋದ ಸಿರಿ ಕೊನೆಯ ಆಯ್ಕೆ ಎಂಬಂತೆ ಡೈವೋರ್ಸ್ ನ ಮೊರೆ ಹೋಗಲು ತೀರ್ಮಾನ ಮಾಡಿದ್ದಾಳೆ.

ಈ ರೀತಿಯ problem ಕೇವಲ gender roles ಗಳಲ್ಲಿ ಬರಲ್ಲ.

ಸಾಮಾನ್ಯವಾಗಿ cultural differences ಇರೋ ಸಂಬಂಧಗಳಲ್ಲಿ ಯಾವಾಗ್ಲೂ power imbalances ಆಗ್ತಾ ಇರುತ್ತೆ.

ಸೈಕಾಲಜಿಸ್ಟ್ Dr. Jean Baker Miller ಹೇಳುವಂತೆ, “power imbalances between partners can create distress, with the partner in the lower power position feeling devalued and helpless”

ಬಹಳಷ್ಟು ಸಲ ಈ ರೀತಿಯ power imbalances ಹೆಣ್ಣು ಮಕ್ಕಳು emotional ಮತ್ತು mental stress ಗೆ ಒಳಗಾಗೋಕೆ ಕಾರಣ ಆಗುತ್ತೆ. ಯಾಕೆ ಅಂದ್ರೆ ಆಕೆ ತನ್ನ career aspiration ಮತ್ತು cultural value ಗಳು ಎರಡನ್ನೂ balance ಮಾಡುವ ದರ್ದು ಇರುತ್ತೆ.

Bell Hooks ಹೀಗೆ ಹೇಳ್ತಾರೆ,

“When cultural differences create power imbalances, it is often women who suffer the most” ಅಂತ.

ಇಲ್ಲಿ ಬೆಲ್ ಹುಕ್ಸ್ ಹೇಗೆ ಹೆಣ್ಣು ಆಕೆಯ professional aspiration ನ ಜೊತೆಗೆ ಗೃಹಿಣಿ ಆಗಿಯೂ ಅವ್ಳ ಜವಾಬ್ದಾರಿ ಯನ್ನ ಬಿಡಬಾರದು ಅಂತ, societal pressure ಗೆ ಒಳಗಾಗ್ತಾಳೆ ಅಂತ ಹೈಲೈಟ್ ಮಾಡಿದ್ದಾರೆ.

ಇದಲ್ಲದೇ ವೆಜಿಟೇರಿಯನ್ ಆದ ರಾಹುಲ್ ಸಿರಿಯನ್ನು ಸಹ ತನ್ನ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಲು ಅವಳ ಮೇಲೆ ಪ್ರೆಶರ್ ಮಾಡಿದ್ದು, ಕಡೆಗೆ ಸಿರಿ ಅವನ ಮೇಲಿನ ಅತೀ ಪ್ರೀತಿಯಿಂದ ವೆಜಿಟೇರಿಯನ್ ಆಗಿ ಬದಲಾಗಿದ್ದಳು. ಇದೇ ಅಲ್ವಾ ನಮ್ಮಲ್ಲಿ ಆಗೋದು? ಹೆಣ್ಣು ಮದುವೆ ಆಗಿ ಹೋದ ಮೇಲೆ ತನ್ನ ಇಡೀ ಐಡೆಂಟಿಟಿ ಯನ್ನ ಬದಲಾಯಿಸಿಕೊಳ್ಳಬೇಕು ಅದಲ್ಲದೆ ತನ್ನ ಇಡೀ ಗತವನ್ನ ಮರೆತು ಬಿಡಬೇಕು. 

——-

ನಾನು -“ನಿಮ್ ಮನೇಲಿ ಏನ್ ಹೇಳ್ತಾರೆ ಇದ್ರ ಬಗ್ಗೆ?” 

ಸಿರಿ – ” ಮನೇಲಿ ಇದ್ರ ಬಗ್ಗೆ ಡಿಸ್ಕಸ್ ಮಾಡೋಕೆ ಇನ್ನೂ ಧೈರ್ಯ ಮಾಡಿಲ್ಲ”

ಆಕಾಂಕ್ಷ – “ಮೊದಲು ಅವ್ರ ಜೊತೆ ಮಾತಾಡಬೇಕಲ್ವಾ?”

ಸಿರಿ – ” ನಮ್ಮಿಬ್ಬರ ಪ್ರೀತಿಯ ಬಗ್ಗೆ ಹೇಳಿದಾಗ ಮನೇಲಿ ಕೇಳಿದ್ದ ಮೊದಲ ಪ್ರಶ್ನೆ ಇಷ್ಟು ಬೇಗ ನಿಂಗೆ ಮದುವೆ ಯಾಕೆ ಅಂತ, ನಮ್ ಮನೇಲಿ ತುಂಬಾ ಲಿಬರಲ್ ಇದ್ರು. ರಾಹುಲ್ ನ ಮನೇಲಿ ನನ್ನ ಒಪ್ಪಿಸೋದೇ ದೊಡ್ಡ ಸಾಹಸ ಆಗಿದ್ದು. ಅವ್ರ ಮನೇಲಿ urgent ಮಾಡಿದ್ದಕ್ಕೆ ನಾವು ಇಷ್ಟು ಬೇಗ ಮದುವೆ ಆಗಿದ್ದು. ನಂಗೆ ಹಿತಾ ಮುಂದೇನೆ ಈ ವಿಷಯ ಮಾತಾಡೋಕೆ hessitate ಆಗಿತ್ತು, ಯಾಕೆ ಅಂದ್ರೆ ನಾನು ನನ್ನ ಮತ್ತೆ ರಾಹುಲ್ ರ ನಡುವಿನ relationship ನ ಬಗ್ಗೆ ಹೇಳಿದಾಗ ನಮ್ಮಿಬ್ಬರ ಮದುವೆಯ ಬಗ್ಗೆ ಹೇಳಿದಾಗ ಹಿತಾ ಮೊದಲೇ ಹೇಳಿದ್ದರು, marriage ಅಂದ್ರೆ reels ಮಾಡೋ ಅಷ್ಟು ಸುಲಭ ಅಲ್ಲ, ಇನ್ನೊಂದ್ ಸಲ ಯೋಚನೆ ಮಾಡು ಅಂತ. ಯಾರೆಲ್ಲ ಎಷ್ಟೇ ಹೇಳಿದರೂ ನಾನು ಕೇಳಿರಲಿಲ್ಲ. I think I rushed. I am regretting for my actions now.”

ನಾನು – “hey never regret for your past actions they’re all situational. ಆ ಸಂದರ್ಭಕ್ಕೆ ಏನ್ ಬೇಕೋ ಆ ತೀರ್ಮಾನ ತಗೊಂಡ್ ಇರ್ತಿಯ. It’s ok ಒಂದ್ ಸಲ ಮನೇಲಿ ಮಾತಾಡು. ನಾವೂ ಇದೀವಿ ನಿನ್ ಜೊತೆ. ರಾಹುಲ್ ಬದಲಾಯಿಸೋಕೆ ಆಗದೇ ಇರುವಂತಹ ವ್ಯಕ್ತಿ ಏನಲ್ಲ.”

ಹೀಗೆ ಹೇಳಿದ್ದೆವು.

ಆದಿನ ಸಂಜೆ ನಾನು ಮತ್ತೆ ಆಕಾಂಕ್ಷ ಇಬ್ಬರು ಸಿರಿಯ ಜೊತೆ ಅವಳ ಮನೆಗೆ ಹೋದೆವು.

ನೇಹಾ ಮತ್ತೆ ಧ್ವನಿ ಇಬ್ಬರೂ ಧ್ವನಿಯ ಅಕ್ಕ ಚಿತ್ರಾಳ ಮದುವೆಯ ಶಾಪಿಂಗ್ ಗೆ ಹೋಗಿದ್ದರು.

ತನ್ನ manager ಮತ್ತು ಟೀಮ್ ಲೀಡ್ ಇಬ್ರೂ ಒಟ್ಟಿಗೆ ತನ್ನ ಮನೆಗೆ ದಾಳಿ ಮಾಡಿದ್ದು ರಾಹುಲ್ ಗೆ ಸ್ವಲ್ಪ ಶಾಕ್ ಆದರೂ ಸಾವರಿಸಿಕೊಂಡು ತನ್ನ ರೂಮಿಗೆ ಎದ್ದು ಹೊರಟ. 

ನಾನು “ರಾಹುಲ್ actually we are here to talk with you”

ರಾಹುಲ್: “with me? Why?”

ಆಕಾಂಕ್ಷ: “ನಿಂಗೆ ಗೊತ್ತಾ ಸಿರಿ was about to take an extreme step today?”

ರಾಹುಲ್: “what now?” 

ನಾನು: “ಆಕೆ ನಿಂಗೆ ಡೈವೋರ್ಸ್ ಕೊಡಬೇಕು ಅಂತ ಡಿಸೈಡ್ ಮಾಡಿದ್ದಾಳೆ “

ರಾಹುಲ್: ” what more I can expect from her? ಇಲ್ಲಿ ಶಿಫ್ಟ್ ಆದಾಗಿಂದ ಅವಳದ್ದು ಇದೆ ಕತೆ ಆಗಿದೆ. ದಿನಾ ಜಗಳ. ಇದನ್ನ ನಾನು ಯಾವಾಗಲೋ expect ಮಾಡಿದ್ದೆ “

ನಾನು: “don’t you think you too hold the share in this?”

ರಾಹುಲ್: “see ಹಿತಾ ನೀವು ನನ್ ಲೀಡ್ ಆಗಿರಬಹುದು that doesn’t mean you both have rights to interfere in my personal matter. ಸಿರಿ ಗೆ ಡೈವೋರ್ಸ್ ಬೇಕಿದ್ರೆ am not going to stop her. ಅವಳೇ ಈ ಲೆವೆಲ್ ಗೆ ಯೋಚನೆ ಮಾಡಿದ್ದಾಳೆ ಅಂತ ಅಂದ್ರೆ ಇನ್ನ ನಾನು ಗಂಡಸು ನಂಗೆನ್ ಕಡಿಮೆ.”

ನಾನು : “ಯಾವುದರಲ್ಲೂ ಕಡಿಮೆ ಇಲ್ಲ ಎಲ್ಲಾದ್ರಲ್ಲು ಹೆಚ್ಚೇ, ಅದಕ್ಕೆ ಇಲ್ಲಿ ವರೆಗೂ ಬಂದು ನಿಂತಿರೋದು ನೀನು, tell me one thing, can you survive without Siri for a week? Or without any other woman in your life?”

ರಾಹುಲ್: ” challenge ah I can”

ನಾನು: “ಸರಿ ಹಾಗಿದ್ರೆ ನೋಡ್ ಬಿಡೋಣ.. ಇವತ್ತಿಂದ ನೀನು ಯಾವುದಕ್ಕೂ ಸಿರಿ ಮೇಲೆ depend ಆಗಬಾರದು. Unless you put your efforts you don’t even have any rights to have food prepared by ಸಿರಿ challenge ah?”

ರಾಹುಲ್: “done”.

ನಮ್ಮ ಪ್ಲಾನ್ work ಆಗುವ ಎಲ್ಲಾ ಲಕ್ಷಣಗಳೂ ಕಂಡವು.

ಇವತ್ತು ಸಿರಿ ಡೈವೋರ್ಸ್ ಮಾಡಿದರೆ ನಾಳೆ ಇನ್ನೊಬ್ಬಳನ್ನು ಮದುವೆ ಆಗ್ತಾನೆ. ಅಲ್ಲಿಯೂ ಇದೆ ಕತೆ.

ವಾಸ್ತವವಾಗಿ ಅವರಿಬ್ಬರೂ ಒಬ್ಬರಿಗೊಬ್ಬರು ಅತಿ ಪ್ರೀತಿ ಇಟ್ಕೊಂಡ್ ಇರೋರು, ಪ್ರೀತಿ ಇರೋ ಕಡೆ ಇವೆಲ್ಲ ಕಾಮನ್, I thought Rahul deserve a second chance to change ಅಂತ. ಹಾಗಾಗಿ ಮಧ್ಯಾಹ್ನವೆ ಈ ಪ್ಲಾನ್ ಅನ್ನ ಹೊಸೆದಿದ್ದೆವು.

ಅಂದಿನಿಂದ ಸಿರಿ ಬೆಳಿಗ್ಗೆ ತನಗೆ ಬೇಕಾದ ಸಮಯಕ್ಕೆ ಎದ್ದು ತನ್ನ ರೂಮ್ ಕ್ಲೀನ್ ಮಾಡಿ ತನಗೆ ಮಾತ್ರ ಬ್ರೇಕ್ ಫಾಸ್ಟ್ lunch ಎಲ್ಲ ಸಿದ್ಧ ಮಾಡಿಟ್ಟುಕೊಂಡು office ಗೆ ಬರೋಳು. ಸಂಜೆ fooseball, ಟೇಬಲ್ ಟೆನ್ನಿಸ್ ಹೀಗೆ ಆಡುತ್ತಾ ನಿಧಾನವಾಗಿ ಮನೆಗೆ ಹಿಂದಿರುಗೋಳು.

ಈ ಮಧ್ಯೆ ಆಕೆ ತನ್ನ ರೀಲ್ ಗಳಲ್ಲಿ ಆದಷ್ಟು ಸಂಸಾರದಲ್ಲಿ ಹೇಗೆ mutual respect ಅನ್ನೋದು ಮುಖ್ಯ, ಹೇಗೆ gender roles ಗಳು ಹೆಣ್ಣು ಮಕ್ಕಳನ್ನ depression ಗೆ ದೂಡ್ತವೆ, ಹೇಗೆ cultural differences ಇರೋ ಸಂಬಂಧಗಳಲ್ಲಿ ಹೆಣ್ಣು ವಿಕ್ಟಿಮ್ ಆಗ್ತಾಳೆ ಇವನ್ನೆಲ್ಲ share ಮಾಡೋಕೆ ಶುರು ಮಾಡಿದ್ದಳು. ಇದರಿಂದ ವಾರ ಕಳೆಯೋದ್ರಲ್ಲಿ ಅವಳ follower ಗಳ ಸಂಖ್ಯೆ 90 ಸಾವಿರ ಮುಟ್ಟಿತ್ತು! 

ದಿನಗಳೆದಂತೆ ರಾಹುಲ್ ನಿಗೆ ತಾನು ಎಷ್ಟು ಕಂಫರ್ಟ್ ಝೋನ್ ನಲ್ಲಿ ಇದ್ದೆ ಅನ್ನೋದರ ಅರಿವು ಆಗ್ತಾ ಬಂತು. 

ತನ್ನ ರೂಮ್ ನ್ನು ಸಹ ಅವನಿಗೆ ದಿನಾ ಕ್ಲೀನ್ ಮಾಡೋಕೆ ಆಗ್ತಾ ಇರ್ಲಿಲ್ಲ. ಮೊದಲ ಬಾರಿ ಸಿರಿಯ ಹಾರ್ಡ್ ವರ್ಕ್ ನ ಬಗ್ಗೆ ಹೆಮ್ಮೆ ಅನ್ನಿಸಿತ್ತು. ಅಲ್ಲದೆ ಸಿರಿಯ content ಗಳಿಗೆ ಬರುತ್ತಿದ್ದ ಕಾಮೆಂಟ್ ಗಳು ಅವನಿಗೆ eye opener ಆಗಿದ್ದವು. ವಾರ ಕಳೆಯುವ ಹೊತ್ತಿಗೆ ರಾಹುಲ್ ನ ಇಗೋ ಮತ್ತೆ ತಾನು ಗಂಡು ತಾನು superior ಅನ್ನೋ pride ಕರಗಿ ಹೋಗಿತ್ತು.

ಸಿದ್ಧಾರ್ಥ್ ಮುಖರ್ಜೀ ಹೀಗೆ ಹೇಳ್ತಾರೆ

“Relationships, marriages are ruined where one person continues to learn, develop, and grow, and the other person stands still.”

ಮದುವೆ ಅನ್ನುವ ಇನ್ಸ್ಟಿಟ್ಯೂಷನ್ ನಲ್ಲಿ ಸಮಾನತೆ ಮತ್ತೆ mutual respect ಅನ್ನೋದು ಇಲ್ಲ ಅಂದಾಗ ಈ ರೀತಿಯ fail over ಗಳು ಆಗ್ತವೆ.

ಅಂದು ಭಾನುವಾರ ನನ್ನ ವಾಟ್ಸಪ್ ಗೆ ಎರೆಡು notification ಗಳು ಬಂದಿದ್ದವು. ಒಂದು ಸಿರಿಯಿಂದ, ಅವಳು ಮತ್ತು ರಾಹುಲ್ ಇಬ್ಬರೂ ಒಟ್ಟಿಗೆ ಮಾಡಿದ್ದ ರೀಲ್. ಈ ಸಲ ಪಾಪ್ಯುಲರ್ ಹಾಡುಗಳಿಗಲ್ಲ, ಬದಲಿಗೆ gender equality ಯ ಬಗ್ಗೆ, ನೋಡಿ ಖುಷಿ ಆಗಿತ್ತು.

ಇನ್ನೊಂದು ಸೆಂಥಿಲ್ ನಿಂದ “can we meet tonight I need help” ಅಂತ.

——

“Hey Senthil am sorry if am late” ಎನ್ನುತ್ತಾ ನನಗಾಗಿ ಆಗಲೇ ಬಂದು wait ಮಾಡ್ತಾ ಇದ್ದ ಸೆಂಥಿಲ್ ನನ್ನ ನೋಡಿದೆ.

ಅರೇ ಇದೇನಿದು ಹೀಗಾಗಿದಾನೆ! ತುಂಬಾ dull ಆಗಿದ್ದ ಸೆಂಥಿಲ್.

ಅವನ ತಂಗಿಯ ಮದುವೆ ಒಂದು ತಿಂಗಳ ಹಿಂದೆ ಅಷ್ಟೇ ನಡೆದಿತ್ತು, ಕೊಯಂಬತ್ತೂರ್ ನಲ್ಲಿ. ಆಗಲೇ ಗೊತ್ತಾಗಿದ್ದು ಅಣ್ಣ ತಂಗಿಯರಿಬ್ಬರ ಸಾಧನೆ, ಸೆಂಥಿಲ್ ಮತ್ತು ಮಿತ್ರಾ ಇಬ್ಬರೂ ಊಟಿ ಮತ್ತು ಕೊಯಂಬತ್ತೂರ್ ನಡುವೆ ಇರುವ ಮೇಟುಪಾಲ್ಯಂ ನ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಇವ್ರ ಕುಟುಂಬದಲ್ಲಿ ಇವರಿಬ್ಬರೇ ಮೊದಲು ಹೈಸ್ಕೂಲ್ ದಾಟಿ college ಗೆ ಹೋಗಿರೋದು. ಅದರಲ್ಲೂ ಇಬ್ಬರೂ ಟಾಪರ್ ಗಳು.

ಸೆಂಥಿಲ್ MTech from ಐಐಟಿ ಆದರೆ, ಮಿತ್ರಾ gynecologist. ಇಬ್ಬರೂ ಈಗ ತಮ್ಮ ಕಮ್ಯುನಿಟಿ ಯ ಮಕ್ಕಳು higher education ಮಾಡೋಕೆ ಪ್ರೋತ್ಸಾಹ ಕೊಡ್ತಾರೆ.

Free medical camps, scholarship ಹೀಗೆ ತಮ್ಮ ಜನ ಮುನ್ನೆಲೆಗೆ ಬರಲಿ ಅಂತ ಅವರಿಬ್ಬರೂ ಶ್ರಮ ಹಾಕ್ತಾ ಇರೋದು ಇವೆಲ್ಲ ನಮ್ಗೆ ಮಿತ್ರಾಳ ಮದುವೆಯಲ್ಲಿ ಗೊತ್ತಾಗಿದ್ದು.

ಎಲೆ ಮರೆ ಕಾಯಿಯಂತೆ ಇದ್ದನಲ್ಲ ಸೆಂಥಿಲ್ ಅಂತ ಖುಷಿ ಕೂಡ ಆಯ್ತು.

ಸೆಂಥಿಲ್ ನಮ್ಮದೇ ಟೆಕ್ ಪಾರ್ಕಿನಲ್ಲಿ ಇದ್ದ. ಇನ್ನೊಂದು ಕಂಪನಿ ಯಲ್ಲಿ work ಮಾಡ್ತಾ ಇರೋ ರಾಗಿಣಿ ಜತೆ ಲಿವಿನ್ ನಲ್ಲಿ ಇದ್ದವರು. ಮಿತ್ರಳ ಮದುವೆ ದಿನ ಸೆಂಥಿಲ್ ರಾಗಿಣಿ ಯನ್ನ ನಮಗೆಲ್ಲ ಪರಿಚಯ ಮಾಡಿಸಿದ್ದ.

“ರಾಗಿಣಿ ಹೇಗಿದ್ದಾಳೆ?” ಎಂದೆ

“We both broke up after Mithra’s wedding” ಎಂದ

“ಅವಳಿಗೆ ನನ್ನ ಕುಟುಂಬ ಬಳಗವನ್ನೆಲ್ಲ ನೋಡಿ ನನ್ ಜೊತೆ ಮುಂದುವರಿಯೋಕೆ ಇಷ್ಟ ಆಗಿಲ್ಲ”

ಎಂದ

ನಾನು -“ಅಂದ್ರೆ?” 

ಸೆಂಥಿಲ್ – “ನಾವಿಬ್ರೂ ಈ ವರ್ಷ ಮದುವೆ ಆಗೋಣ ಅಂತ ಇದ್ವಿ, ನನ್ background ಅವಳಿಗೆ ಗೊತ್ತಿಲ್ಲದೆ ಏನ್ ಇರ್ಲಿಲ್ಲ. ಅವಳು lake cleaning activity ನಲ್ಲಿ ನಂಗೆ propose ಮಾಡಿದಾಗಲೇ ನನ್ನ ಮತ್ತೆ ನನ್ನ ಜನರ ಬಗ್ಗೆ ಹೇಳಿದ್ದೆ. ಮಿತ್ರಾಳ ಜೊತೆ ಕ್ಲೋಸ್ ಆಗೆ ಇದ್ದಳು. ಅದೇನಾಯ್ತೋ ಮಿತ್ರಾ ಮದುವೆ ಮುಗಿಸಿ ಬಂದ ಮೇಲೆ ನೇರವಾಗಿ ಹೇಳಿ ಬಿಟ್ಟಳು our relationship doesn’t work.

Marriage ಆದ್ಮೇಲೆ ನಮ್ಮಿಬ್ಬರ ಮಧ್ಯೆ definitely ತೊಂದರೆ ಆಗುತ್ತೆ. ನಮ್ ಫ್ಯಾಮಿಲಿ ಒಪ್ಪೋದು ಡೌಟ್ ಅಂತ ಹೇಳಿ ಅವತ್ತೇ move out ಆದಳು “

ಹೀಗೆ ಹೇಳ್ತಾ ಇದ್ದಾಗ ಸೆಂಥಿಲ್ ನ ಕಣ್ಣಿಂದ ನೀರು ಜಿನುಗಿದ್ದು ಕಾಣದೇ ಇರಲಿಲ್ಲ.

ಅಷ್ಟು ವರ್ಷ ಜೊತೆಗಿದ್ದು ಹೀಗೆ ಏಕಾ ಏಕೀ ಬಿಟ್ಟು ಹೋದದ್ದು ನನಗೂ ಆಶ್ಚರ್ಯ ತರಿಸಿತ್ತು. ಸಮಾಧಾನ ಮಾಡೋಕೆ ಪದಗಳು ಬರ್ಲಿಲ್ಲ.

ಅವನ ಕೈ ನ ಮೇಲೆ ಮೆಲ್ಲಗೆ ತಟ್ಟಿ “you fought lot of obstacles this too shall pass ನಿಂಗೆ ಒಳ್ಳೆ ಸಂಗಾತಿ ಸಿಗ್ತಾರೆ” ಅಂತ ಹೇಳ್ದೆ.

ಆಗ ಅವನು, “ನಾವು ಎಷ್ಟೇ ಮುಂದುವರಿದರೂ ನಮ್ಮನ್ನ ಈಗಲೂ ಹೊರಗೆ ಇರಿಸಿ ನೋಡೋದು ಇನ್ನೂ ಬಿಟ್ಟಿಲ್ಲ ಅಲ್ವಾ…

ನಾನು ಇಷ್ಟೆಲ್ಲಾ ಓದಿ senior manager ಆಗಿರೋದಕ್ಕೆ ನೀನು ಇವತ್ತು ನನ್ ಜೊತೆ ಫ್ರೆಂಚ್ ಫ್ರೈಸ್ ಅನ್ನ share ಮಾಡ್ತಾ ಇರೋದು, ನಾನೊಬ್ಬ ಸಾಮಾನ್ಯ ಹಳ್ಳಿಗ ಆಗಿದ್ದಿದ್ರೆ ಬಹುಶಃ ನಾನು ಕಿತ್ತು ಕೊಟ್ಟ ಜೇನನ್ನು ಸಹ ನನ್ ಹತ್ರ ಕೊಂಡುಕೊಳ್ತಾ ಇರ್ಲಿಲ್ಲ…” ಹೀಗೆ ಹೇಳಿದ್ದಾಗ ಅದಾಗಲೇ ಒಳಗೆ ಎಳೆದುಕೊಂಡಿದ್ದ chilled virgin mojito ಲಾವಾ ದಂತೆ ನನ್ನ ಗಂಟಲನ್ನು ಸುಟ್ಟಿತ್ತು.

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

ಇದನ್ನೂ ಓದಿhttps://peepalmedia.com/he-said-she-said/ http://ಹಿ ಸೆಡ್ ಶಿ ಸೆಡ್

Related Articles

ಇತ್ತೀಚಿನ ಸುದ್ದಿಗಳು