Home ಬ್ರೇಕಿಂಗ್ ಸುದ್ದಿ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಗಾಗಿದೆ ಈ ಸರ್ಕಾರ – ಕುಮಾರಸ್ವಾಮಿ

ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಗಾಗಿದೆ ಈ ಸರ್ಕಾರ – ಕುಮಾರಸ್ವಾಮಿ

0

ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತೀವ್ರ ವ್ಯಂಗ್ಯವಾಡಿದ್ದಾರೆ. ಸರ್ಕಾರದ ಸ್ಥಿತಿಯನ್ನು ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಹಾಡಿಗೆ ಹೋಲಿಸಿರುವ ಅವರು, ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ. ಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

“ಸರ್ಕಾರದಲ್ಲಿ ಅವರ ಮಾತು ನಡೆಯುತ್ತಿದೆಯೋ ಇಲ್ಲವೋ ನನಗೇನು ಗೊತ್ತು. ಸಿದ್ದರಾಮಯ್ಯ ಅವರ ಭಾವನೆಯನ್ನು ಅವರು ಹೇಳಿದ್ದಾರೆ. ಆದರೆ ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತು. ಹಿಂದಿನ ಕಾಲದಲ್ಲಿ ಜಾಗಟೆ ಹೊಡೆದುಕೊಂಡು ಹೋಗುತ್ತಿದ್ದರು. ಈ ಸರ್ಕಾರವೂ ಅದೇ ರೀತಿಯಾಗಿದೆ. ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಹಾಡಿನ ಹಾಗೆ ಈ ಸರ್ಕಾರದ ಸ್ಥಿತಿ ಆಗಿದೆ,” ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

You cannot copy content of this page

Exit mobile version