ಸಿಡಿಎಸ್ ನೂತನ ಮುಖ್ಯಸ್ಥರಾಗಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಚೌಹಾಣ್‌ ನೇಮಕ

ಜನರಲ್ ಬಿಪಿನ್ ರಾವತ್ ಅವರ ನಿಧನದ ಬಳಿಕ 9 ತಿಂಗಳಿಂದ ಖಾಲಿ ಇದ್ದ ಸೇನಾಪಡೆಗಳ ಮುಖ್ಯಸ್ಥರ (CDS) ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.

ಚೌಹಾಣ್ ಅವರು ಸೇನಾ ವ್ಯವಹಾರಗಳ ಇಲಾಖೆ, ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್, PVSM, UYSM, AVSM, SM, VSM, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದು ಸದ್ಯ ನಿವೃತ್ತಿಯಾಗಿದ್ದಾರೆ. ಈಗ ಅವರನ್ನು CDS ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಆಗಿ ನೇಮಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು