Friday, April 25, 2025

ಸತ್ಯ | ನ್ಯಾಯ |ಧರ್ಮ

ದೇಹದಾರ್ಡ್ಯ ಸ್ಪರ್ಧೆಯಲ್ಲಿ ಎಂ.ಎಸ್. ಮಧುಗೆ ಮಿಸ್ಟರ್ ಪವರ್ ಸ್ಟಾರ್ 2025 ಟೈಟಲ್

ಹಾಸನ : ಕೆಲ ದಿನಗಳ ಹಿಂದೆ ಅರಕಲಗೂಡಿನಲ್ಲಿ ನಡೆದ ಹಾಸನ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಅರಕಲಗೂಡಿನ ಎಂ.ಎಸ್. ಪವರ್ ಜೆಮ್‌ನ ಎಂ.ಎಸ್. ಮಧು, ಮಿಸ್ಟರ್ ಪವರ್ ಸ್ಟಾರ್ -2025 ಬಿರುದು ಪ್ರಶಸ್ತಿ ಪಡೆದುಕೊಂಡರು.ಒ.ಎಂ.ಎಸ್. ಪವರ್ ಜಿಮ್ ಅರಕಲಗೂಡು, ಹಾಸನ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಸಂಸ್ಥೆ, ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಸಂಸ್ಥೆ, ಇವರ ವತಿಯಿಂದ ಅರಕಲಗೂಡಿನಲ್ಲಿ ನಡೆದ ಹಾಸನ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ಸ್ನಾಯುವಂತ ಬಿರುದನ್ನು ಹಾಸನದ ಎಂ.ಜೆ. ಫಿಟೈಸ್ ಜಿಮ್‌ನ ಗುಲ್ಬಂ ಖಾನ್ ಪಡೆದುಕೊಂಡರೆ. ಅತ್ಯುತ್ತಮ ಪ್ರದರ್ಶನಕಾರ ಬಿರುದನ್ನು ಅರಕಲಗೂಡು ಎಂ.ಎಸ್. ಜಿಮ್‌ನ ಲೋಕೇಶ್ ಕೆ.ಜೆ. ಪಡೆದುಕೊಂಡರು. ಎಂ.ಟಿ. ಕೃಷ್ಣಗೌಡ, ಕ್ಲಾಸಿಕ್ 2025 ಬಿರುದನ್ನು ಹಿರಿಸಾವೆಯ ಮಾರುತಿ ಫಿಟೈಸ್ ಜಿಮ್‌ನ ವಿ. ಅಶ್ವಿನ್ ಪಡೆದುಕೊಂಡರು. ಈ ಸ್ಪರ್ಧೆಯ ಉದ್ಘಾಟನೆಯನ್ನು ಕಾಂಗ್ರೆಸ್ ನಾಯಕರದ ಶ್ರೀ ಎಂ.ಟಿ. ಕೃಷ್ಣಗೌಡರು ನೆರವೇರಿಸಿದರು. ರಾಜ್ಯ ಬಾಡಿ ಬಿಲ್ಡರ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿ. ಮೋಹನ್ ಕುಮಾರ್, ಗೌರವ ಕಾರ್ಯದರ್ಶಿಗಳಾದ ಶ್ರೀ ವೆಂಕಟೇಶ್ ಖಜಾಂಚಿಗಳಾದ ಶ್ರೀ ರಾಜಶೇಖರ್‌ರಾವ್ ಸಹ ಕಾರ್ಯದರ್ಶಿ ಶ್ರೀನಿವಾಸ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಿರುದು, ಪ್ರಶಸ್ತಿ, ಬಹುಮಾನಗಳನ್ನು ಜಿಲ್ಲಾ ಆದಾಯ ತೆರಿಗೆ ಆಯುಕ್ತರು, ಶ್ರೀ ಚನ್ನಕೇಶವರವರು ವಿತರಣೆ ಮಾಡಿದರು. ಬೆಂಗಳೂರಿನ ಹಿರಿಯ ದೇಹ ದಾರ್ಡ್ಯ ಪಟು ಶ್ರೀ ವೆಂಕಟೇಶ್ವರ ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಜಿಮ್‌ಗಳಿಂದ 40 ದೇಹ ದಾರ್ಡ್ಯಪಟುಗಳು ಭಾಗವಹಿಸಿದ್ದು, ಎತ್ತರ ವಿಭಾಗಗಳಲ್ಲಿ ಈ ಕೆಳಕಂಡವರು ವಿಜಯಿಗಳಾಗಿರುತ್ತಾರೆ.


ಫಲಿತಾಂಶ : ಗುಂಪು 1 ಶಾರ್ಟ್ ಕ್ಲಾಸ್ ನಲ್ಲಿ :- ಅಶ್ವಿನ್ ವಿ. ಮಾರುತಿ ಫಿಟೈಸ್, ಹಿರಿಸಾವೆ, ಲೋಹಿತ್ ಕುಮಾರ್, ಭರತ್ ಫಿಟೈಸ್ ಆಲೂರು, ಸಾಗರ್, ಕೆ.ಕೆ. ಫ್ರೆಂಡ್ಸ್ ಜಿಮ್, ಹೊಳೆನರಸೀಪುರ ಗುಂಪು 2 ಮೀಡಿಯಂ ಕ್ಲಾಸ್ ನಲ್ಲಿ :-ಲೋಕೇಶ್ ಕೆ.ಜೆ. ಎಂ.ಎಸ್. ಪವರ್, ಜಿಮ್, ಅರಕಲಗೂಡು 2) ಅಜಿತ್ ಜಿ. ಮಹಾವೀರ್ ಪವರ್ ಫಿಟೈಸ್, ಚನ್ನರಾಯಪಟ್ಟಣ 3) ರವಿಕಿರಣ್ ಎಸ್.ಕೆ. ಮಾರುತಿ ಫಿಟೈಸ್, ಹಿರಿಸಾವೆ, ಗುಂಪು 3 ಟಾಲ್ ಕ್ಲಾಸ್ ನಲ್ಲಿ :- ಮಧು ಎಂ.ಎಸ್, ಎಂ.ಎಸ್ ಪವರ್ ಜಿಮ್ ಅರಕಲಗೂಡು, ಶಾಬಾದ್ ಖಾನ್, ಫ್ರೆಂಡ್ಸ್ ಜಿಮ್, ಹೊಳೆನರಸೀಪುರ, ಪ್ರೇಮ್‌ಕುಮಾರ್ ಎಚ್.ಎಂ. ಫ್ರೆಂಡ್ಸ್ ಜಿಮ್, ಹೊಳೆನರಸೀಪುರ, ಗುಂಪು 4 ರಲ್ಲಿ ಸೂಪರ್ ಟಾಲ್ ಕ್ಲಾಸ್ ಗುಲ್ಬಂ ಖಾನ್ ಎಂ. ಜೆ. ಫಿಟೈಸ್ ಹಾಸನ., ಕೃಷ್ಣ ವಿ, ಎಂ.ಎಸ್. ಪವರ್ ಜಿಮ್, ಅರಕಲಗೂಡು, ರವಿಕುಮಾರ್ ಸಿ.ಜಿ, ಫಿಟೈಸ್ ಚನ್ನರಾಯಪಟ್ಟಣ ಪಡೆದುಕೊಂಡರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page