ಎಂ.ಶಿವಲಿಂಗೇಗೌಡ್ರೇ ಅಭಿವೃದ್ಧಿ ಅಂದರೆ ಏನು ಗೊತ್ತಾ – ಎಚ್‌. ಡಿ. ರೇವಣ್ಣ

ಹಾಸನ: ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌. ಡಿ. ರೇವಣ್ಣ ಅವರು ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ. ಎಂ.ಶಿವಲಿಂಗೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಕಾಂಗ್ರೆಸ್ ಗೆಲ್ಲಿಸುತ್ತೀನಿ ಅಂತಾನೆ. ಮೊದಲು ಅವನ ಅರಸೀಕೆರೆ ನೋಡಿಕೊಳ್ಳಲಿ, ಆಮೇಲೆ ಏಳಕ್ಕೆ ಏಳು ನೋಡೋಣ,” ಎಂದು ಏಕವಚನದಲ್ಲೇ ಟೀಕಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಸವಾಲ್

ರೇವಣ್ಣ ಅವರು, “ನಾನು ಅಭಿವೃದ್ಧಿಗೆ ಅಡ್ಡಗಾಲು ಹಾಕಲ್ಲ. ಅಭಿವೃದ್ಧಿ ಅಂದರೆ ಏನು ಗೊತ್ತಾ? ಜಲ್ಲಿ, ಇಟ್ಟಿಗೆ, ಎಂ-ಸ್ಯಾಂಡ್, ಇಂಟರ್ ಲಾಕ್—all ಅವನತ್ತೇ ತಗೋಬೇಕು ಅನ್ನೋದು ಅಭಿವೃದ್ಧಿಯಾ?” ಎಂದು ಪ್ರಶ್ನಿಸಿದರು.

“ಅವನ ಹೆಂಡತಿ ಹೆಸರಿನಲ್ಲಿ ಕ್ರಷರ್ ಇದೆ. ಇವನದ್ದು ಏನೇನು ಬಂಡವಾಳ ಗೊತ್ತಿದೆ. ಕಾಲ ಬಂದಾಗ ಎಲ್ಲ ಹೇಳುತ್ತೀನಿ,” ಎಂದು ಎಚ್ಚರಿಕೆ ನೀಡಿದರು.

ಲೋಕಾಯುಕ್ತ ತನಿಖೆ ವಿಚಾರ

“ಹೊಳೆನರಸೀಪುರಕ್ಕೆ ಮಾತ್ರ ಲೋಕಾಯುಕ್ತ ಕಳ್ಸಿದ್ರು. ತನಿಖೆ ಮಾಡಲಿ. ಯಾರು ತಪ್ಪು ಮಾಡಿದ್ರು ಅನುಭವಿಸಿಕೊಳ್ಳಲಿ,” ಎಂದು ಹೇಳಿದರು.

ರಾಜಕೀಯ ಸವಾಲು

“ಎಲ್ಲಿದ್ದವನನ್ನು ಕರೆದುಕೊಂಡು ಬಂದು ಎಂಎಲ್‌ಎ ಮಾಡಿದ್ದು ದೇವೇಗೌಡರು. ಮೂರು ಬಾರಿ ಎಂಎಲ್‌ಎ ಮಾಡ್ದೆ. ಇವನಿಗೆ ಯಾರು ಕೇರ್ ಮಾಡ್ತಾರೆ?” ಎಂದು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು