Wednesday, November 19, 2025

ಸತ್ಯ | ನ್ಯಾಯ |ಧರ್ಮ

ʼಮಡಿಕೇರಿ ಚಲೋʼ ದಿನಾಂಕ ಮುಂದೂಡಿಕೆ: ಡಾ.ಎಚ್.ಸಿ.ಮಹಾದೇವಪ್ಪ

ಮಡಿಕೇರಿ: ಆಗಸ್ಟ್‌ 26 ರಿಂದ ಕೈಗೊಳ್ಳಬೇಕಿದ್ದ ʼಮಡಿಕೇರಿ ಚಲೋʼವನ್ನು ಕೊಡಗು ಜಿಲ್ಲಾಡಳಿತ ಹೇರಿರುವ ನೀಷೇದಾಜ್ಞೆಯಿಂದಾಗಿ ಮುಂದೂಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ. ಮಹಾದೇವಪ್ಪ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್‌ 18 ರಂದು ಕೊಡುಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ತೋರಿಸಿ, ಘೋಷಣೆ ಕೂಗಿ, ಸಾರ್ವಕರ್‌ ಚಿತ್ರ ತೋರಿಸಿ, ಅವರ ಕಾರಿನ ಮೇಲೆ ಮೊಟ್ಟೆ ಎಸೆಯುವತಂಹ ಕೃತ್ಯ ಜರುಗಲು ಅವಕಾಶ ಮಾಡಿಕೊಟ್ಟ ಕೊಡಗು ಜಿಲ್ಲಾಡಳಿತ, ಇದೀಗಾ ಯಾವುದೇ ಕಾರಣವಿಲ್ಲದೆ ನೀಷೇದಾಜ್ಞೆ ಹೇರಿರುವುದು ಅಸಂವಿಧಾನತ್ಮಕ ನಡೆ ಎಂದು ಟೀಕಿಸಿದ ಅವರು ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಗುಡುಗಿದರು.

ಜಿಲ್ಲಾಡಳಿತ ಹೇರಿರುವ ನಿಷೇದಾಜ್ಞೆ ಮುಗಿದ ಬಳಿಕ ಮಡಿಕೇರಿ ಚಲೋ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page