Tuesday, July 22, 2025

ಸತ್ಯ | ನ್ಯಾಯ |ಧರ್ಮ

“ಮಹಾಘಟಬಂಧನ್” ಸೂಚನೆ ನೀಡಿದ ಬಿಹಾರ ರಾಜಕೀಯ.!

ಹಲವು ವರ್ಷಗಳ ಬಿಜೆಪಿ ಸಖ್ಯದಲ್ಲಿ ಇದ್ದ JDU ಪಕ್ಷ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಿನಾಮೆಯಿಂದ NDA ತೊರೆದು ಹೊರಬಂದಿದೆ. ಸಧ್ಯ ಬಿಹಾರ ಈಗ ರಾಜಕೀಯ ವಿಶ್ಲೆಷಕರ ಕೇಂದ್ರಬಿಂದುವಾಗಿದ್ದು ಬಿಜೆಪಿ ತನ್ನ ಮುಂದಿನ ನಡೆಯ ಬಗ್ಗೆ ಮೌನ ವಹಿಸಿದೆ. ನಿತೀಶ್ ಕುಮಾರ್ ಈಗಾಗಲೇ RJD ಪಕ್ಷದ ನಾಯಕರಾದ ತೇಜಸ್ವಿ ಯಾದವ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ, ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಆಯ್ಕೆ ಅಗಲಿದ್ದಾರೆ. ಹೊಸ ಸರ್ಕಾರದ ಸ್ಪೀಕರ್ ಹುದ್ದೆಗೆ RJD ಆಯ್ಕೆ ಮಾಡುವ ಸಂಭವವಿದೆ. ಜೊತೆಗೆ ತೇಜಸ್ವಿ ಯಾದವ್ ಮಾತನಾಡಿ ಸರ್ಕಾರ ರಚನೆ, ಖಾತೆ ಹಂಚಿಕೆ, ಜವಾಬ್ದಾರಿ ನಿರ್ವಹಣೆ ಇವೆಲ್ಲಾ ವಿಚಾರಗಳ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಹಂತದಲ್ಲಿ JDU ಮತ್ತು RJD ಮೈತ್ರಿ ಸರ್ಕಾರ ರಚನೆಯಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಕೂಡಾ ಬಿಹಾರದಲ್ಲಿ ಬಿಜೆಪಿಯೇತರ ಯಾವುದೇ ಪಕ್ಷದ ಸರ್ಕಾರ ರಚನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದೆ.

ಈ ನಡುವೆ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (RLJP) ತಾವು ಯಾವುದೇ ರಾಜಕೀಯ ಬದಲಾವಣೆ ನಡೆಸುತ್ತಿಲ್ಲ. ನಾವು NDA ಯೊಂದಿಗೇ ನಮ್ಮ ಮೈತ್ರಿ ಮುಂದುವರೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಬಿಹಾರದಲ್ಲಿನ ಮಹತ್ತರ ರಾಜಕೀಯ ಬೆಳವಣಿಗೆ ಬಗ್ಗೆ ಸಮಾಜವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪೂರಕವಾಗಿ ಮಾತನಾಡಿದ್ದು ಇದೊಂದು ಸ್ವಾಗತಾರ್ಹ ಬೆಳವಣಿಗೆ, ಮುಂದಿನ ದಿನಗಳಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಇರುವ ಒಂದೊಂದೇ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎನ್ನುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ “ಮಹಾಘಟಬಂಧನ್” ಬಗೆಗಿನ ಸೂಚನೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page