Wednesday, November 20, 2024

ಸತ್ಯ | ನ್ಯಾಯ |ಧರ್ಮ

ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ

ಇಂದು ಬುಧವಾರ ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಿಗೆ ಹಾಗೂ ಜಾರ್ಖಂಡ್‌ನ‌ 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜಾರ್ಖಂಡ್ ರಾಜ್ಯಕ್ಕೆ ಇದು ಎರಡನೇ ಹಂತದ ಮತದಾನ ಆಗಿದ್ದು, ನವೆಂಬರ್ 13 ರಂದು 48 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಈಗಾಗಲೇ ಸೋಮವಾರವೇ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇನ್ನೇನು ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.

ಎರಡೂ ರಾಜ್ಯದಲ್ಲೂ ಚುನಾವಣೆಗೆ ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಾರ್ಖಂಡ್ ನ 12 ಜಿಲ್ಲೆಗಳಲ್ಲಿ ಮತದಾನ ನಡೆಯಬೇಕಿದೆ, 12 ಜಿಲ್ಲೆಗಳ ನಿಯಂತ್ರಣ ಕೊಠಡಿಗಳಲ್ಲಿ, ಸಂಪೂರ್ಣ ಪ್ರಕ್ರಿಯೆಯ ಮೇಲೆ ನಿಗಾ ಇಡಲಾಗಿದೆ.

ಹಾಗೆಯೇ ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ರಾಜ್ಯದ 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯದ 9.70 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಬಿಜೆಪಿ 148, ಕಾಂಗ್ರೆಸ್‌ 103, ಶಿವಸೇನೆ (ಉದ್ಧವ್‌ ಬಣ) 89, ಶಿವಸೇನೆ (ಶಿಂಧೆ ಬಣ) 80, ಎನ್‌ಸಿಪಿ (ಎಸ್‌ಪಿ ಬಣ) 87, ಎನ್‌ಸಿಪಿ (ಎಪಿ ಬಣ) 53 ಹಾಗೂ ಪಕ್ಷೇತರ ಎಲ್ಲಾ ಸೇರಿದಂತೆ ಒಟ್ಟಾರೆ 4,136 ಅಭ್ಯರ್ಥಿಗಳು 228 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ.

ಉಬಯ ರಾಜ್ಯಗಳ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 5 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page