Monday, June 17, 2024

ಸತ್ಯ | ನ್ಯಾಯ |ಧರ್ಮ

ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಭಾರತೀಯ ವಿದ್ಯಾರ್ಥಿಗಳ ನೆಚ್ಚಿನ ರಾಷ್ಟ್ರನಾಯಕರು: ಸಮೀಕ್ಷೆ

ಬ್ರೈನ್ಲಿ ಆನ್‌ ಲೈನ್‌ ಕಲಿಕಾ ವೇದಿಕೆ ನಡೆಸಿದ ಸಮೀಕ್ಷೇಯೊಂದರಲ್ಲಿ, ಮಹಾತ್ಮ ಗಾಂಧಿ ಮತ್ತು ಭಗತ್‌ ಸಿಂಗ್‌ ಭಾರತೀಯ ವಿಧ್ಯಾರ್ಥಿಗಳ ನೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿದ್ದಾರೆ. ಈ ಮೂಲಕ ಶೇ 89% ವಿಧ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇನ್ನಷ್ಟು ತಿಳಿಯಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಈ ಆಗಸ್ಟ್‌ 15 ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದು ಅಮೃತಮಹೋತ್ವವನ್ನು ಆಚರಿಸಿಕೊಂಡಿತು. ಹೀಗಾಗಿ ಈ ದಿನವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರ ಧೀರ ತ್ಯಾಗದ ಸಂಕೇತವಾಗಿ ಗುರುತಿಸಲಾಗಿದೆ.

75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ  ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ,  ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾರತೀಯ ವಿಧ್ಯಾರ್ಥಿಗಳು  ಎಷ್ಟು ತಿಳಿದಿದ್ದಾರೆಂದು ತಿಳಿಯಲು ಸಮೀಕ್ಷೇ ನಡೆಸಿತು.ಹೀಗಾಗಿ ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಒಟ್ಟು 5.5 ಕೋಟಿಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಬಳಕೆದಾರರ ನೆಲೆಯನ್ನು ಹೊಂದಿದೆ ಎಂದು ಸಮೀಕ್ಷೇಯಲ್ಲಿ ತಿಳಿಸಲಾಗಿದೆ.

ಈ ಸಮಿಕ್ಷೇಯನ್ನು ರಾಷ್ಟ್ರಪಿತನಿಂದ ಪ್ರಾರಂಭಿಸಿದ್ದು,  ಮಹಾತ್ಮ ಗಾಂಧಿಯವರು 41% ಮತಗಳನ್ನು ಗಳಿಸುವ ಮೂಲಕ ಅತ್ಯಂತ ನೆಚ್ಚಿನ ಮತ್ತು ಸ್ಪೂರ್ತಿದಾಯಕ ರಾಷ್ಟ್ರೀಯ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಇತಿಹಾಸದಲ್ಲಿ ಗಮನಾರ್ಹ ಅಧ್ಯಾಯವಾಗಿ ಉಳಿದಿರುವ ಗಾಂಧಿ ಅವರು ಅವರ ಅಹಿಂಸೆ ಮತ್ತು ಬಲವಾದ ನಾಯಕತ್ವದ ತತ್ತ್ವಶಾಸ್ತ್ರಕ್ಕಾಗಿ ಪ್ರಶಂಸಿಸಲ್ಪಟ್ಟಿದ್ದಾರೆ.

ನಂತರದ ಸ್ಥಾನವನ್ನು ಯುವ ಕ್ರಾಂತಿಕಾರಿ ಭಗತ್ ಸಿಂಗ್ 32% ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಭಾರತೀಯ ಇತಿಹಾಸದಲ್ಲಿ ಅವರ ದಂಗೆಗಳು ಗಮನಾರ್ಹ ಅಧ್ಯಯನಗಳಾವಿವೆ. 
ಸಮೀಕ್ಷೆ ಏಕೆ ನಡೆಸಲಾಯಿತು?
"ಬ್ರೈನ್ಲಿ ಸಮೀಕ್ಷೆಯು ಇಂದು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಸ್ತುತತೆಯನ್ನು ಅಳೆಯುವ ಪ್ರಯತ್ನಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕರುಗಳು ಹೇಗೆ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು, ಇಂತಹ ನಾಯಕರ ಬಗ್ಗೆ ವಿಧ್ಯಾರ್ಥಿಗಳಲ್ಲಿ ಎಷ್ಟು ಅರಿವು ಇದೆ ಎಂಬುದನ್ನು ತಿಳಿಯುವುದಕ್ಕೆ ಈ ಸಮೀಕ್ಷೆ ಎಂದು ಬ್ರೈನ್ಲಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ನರಸಿಂಹ ಜಯಕುಮಾರ್ ಹೇಳಿದರು.
ನಮ್ಮ ಸಂಶೋಧನೆಯು ವಿದ್ಯಾರ್ಥಿಗಳು ನಮ್ಮ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆಂದು ತೋರಿಸುತ್ತದೆ ಆದರೆ ಮಾಹಿತಿ ವಿತರಣೆಯಲ್ಲಿ ಅಂತರಗಳಿವೆ, ಅದನ್ನು ಉತ್ತಮವಾಗಿ ತಿಳಿಸಬೇಕಾಗಿದೆ" ಎಂದು ಹೇಳಿದರು.
ಇಂದು, ಭಾರತವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 550 ಮಿಲಿಯನ್‌  ಜನರಿಗೆ ನೆಲೆಯಾಗಿದೆ, ಇದು ವಿಶ್ವದಾದ್ಯಂತ ಯುವ ಜನಸಂಖ್ಯೆಯಲ್ಲಿ ಅತಿ ಹೆಚ್ಚು ವಿಸ್ತಾರ ಹೊಂದಿದೆ. ಅವರೇ ನಮಗೆ ಉತ್ತಮ ನಾಳೆಯನ್ನು ಸ್ಕ್ರಿಪ್ಟ್ ಮಾಡುತ್ತಾರೆ. ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಅವರು ಈ ರಾಷ್ಟ್ರವನ್ನು ನಿರ್ಮಿಸಲು ಮಾಡಿದ ತ್ಯಾಗ ಮತ್ತು ನಾಗರಿಕರಾಗಿ ನಾವು ಅನುಭವಿಸುವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿದಿರಬೇಕು ಎಂದು ಜಯಕುಮಾರ್ ತಿಳಿಸಿದರು. 
ಸಮೀಕ್ಷೆಯ ಮುಖ್ಯಾಂಶಗಳು
1) ಸಮೀಕ್ಷೆಯಲ್ಲಿ 59% ವಿದ್ಯಾರ್ಥಿಗಳು 75 ನೇ ವರ್ಷದ ಸ್ವಾತಂತ್ರ್ಯದ ಬಗ್ಗೆ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಭಾರತದಂತಹ ಐತಿಹಾಸಿಕ ಅಪ್ರತಿಮ ರಾಷ್ಟ್ರಕ್ಕಾಗಿ, ಮುಂದಿನ ಪೀಳಿಗೆಗೆ, ಭಾರತದ ರಾಷ್ಟ್ರೀಯ ವೀರರ ಬಗ್ಗೆ ಮತ್ತು ಅವರು ಸ್ವಾತಂತ್ರ್ಯವನ್ನು ತರಲು ಏನೇಲ್ಲಾ ಹೋರಾಟ ಮಾಡಿದರು ಎಂದು ತಿಳಿಸಬೇಕು ಎಂಬುದು ಈ ಸಮೀಕ್ಷೆಯ ಮುಖ್ಯ ಅಂಶವಾಗಿತ್ತು.
2) 50% ವಿದ್ಯಾರ್ಥಿಗಳು  ಜ್ಞಾನದ ಪ್ರಾಥಮಿಕ ಮೂಲ ಶಾಲೆಗಳು  ಎಂದು ಪ್ರತಿಪಾದಿಸಿದರೆ, ಆದಾಗ್ಯೂ ಕೇವಲ 13% ವಿದ್ಯಾರ್ಥಿಗಳು ಅವರು ಮನೆಯಲ್ಲಿ ಅಥವಾ ಅವರ ಪೋಷಕರಿಂದ ಕಲಿತಿದ್ದಾರೆ ಎಂದು ಹೇಳಿದರು. ಆದರೆ ಇನ್ನುಳಿದ 17% ವಿದ್ಯಾರ್ಥಿಗಳು  ಆನ್‌ಲೈನ್ ಮೂಲಕ ರಾಷ್ಟ್ರನಾಯಕರ ಬಗ್ಗೆ ಮಾಹಿತಿ ಹುಡುಕಾಡಿದ್ದು ಬ್ರೈನ್ಲಿ ಸಂಶೋಧನೆಗೆ ಕಾರಣವಾಗಿದೆ.
3) ಮಹಾತ್ಮ ಗಾಂಧಿಯವರ 'ಮಾಡು ಇಲ್ಲವೇ ಮಡಿ' ಎಂಬುದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸಿದ ಜನಪ್ರಿಯ ಯುದ್ಧದ ಕೂಗು. ಅವರು ಅದನ್ನು ರೂಪಿಸಿದ ಬಂಡಾಯದ ಬಗ್ಗೆ ಕೇಳಿದಾಗ, 50% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕ್ವಿಟ್ ಇಂಡಿಯಾ ಚಳುವಳಿಗೆ ಸರಿಯಾಗಿ ಮತ ಹಾಕಿದ್ದಾರೆ. ಈ ಮೂಲಕ ಇನ್ನೂ 50% ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಹೆಚ್ಚು ಅರಿವಿಲ್ಲ ಎಂದು ತಿಳಿಯುತ್ತದೆ. 
4) ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 47% ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧೈರ್ಯ ಮತ್ತು ನಿರ್ಭಯತೆಗಾಗಿ 'ಭಾರತದ ಉಕ್ಕಿನ ಮನುಷ್ಯ' ಎಂದು ಕರೆಯುತ್ತಾರೆ ಎಂದು ತಿಳಿದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 
5) 89% ಜನರು ಭಾರತ ಮತ್ತು ಅದರ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ಪೀಳಿಗೆಗೆ ಭಾರತದ ಇತಿಹಾಸ ಮತ್ತು ವೈಭವವನ್ನು ಮನೆಗೆ ತರಲು ಏನು ಮಾಡಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಲು ಮಹತ್ವದ ಅವಕಾಶವಾಗಿದೆ.
ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವಿನ ಕೊರತೆ
ಬ್ರೈನ್ಲಿ ಸಮೀಕ್ಷೆಯು ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಂವಿಧಾನದ ಬಗ್ಗೆ ಸೀಮಿತ ಅರಿವನ್ನು ಬಹಿರಂಗಪಡಿಸಿದೆ. ಆದಾಗ್ಯೂ ಕೇವಲ 22% ವಿದ್ಯಾರ್ಥಿಗಳಿಗೆ ಮಾತ್ರ ಮತಂಗನಿ ಹಜ್ರಾ ಬಗ್ಗೆ ತಿಳಿದಿತ್ತು, ಅವರ ನೆನಪಿಗಾಗಿ ಕೋಲ್ಕತ್ತಾದಲ್ಲಿ ಮಹಿಳಾ ಕ್ರಾಂತಿಕಾರಿಯ ಮೊದಲ ಪ್ರತಿಮೆಯನ್ನು ನಿರ್ಮಿಸಲಾಯಿತು. ಅಲ್ಲದೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕ್ರಮದಲ್ಲಿ ಭಾರತೀಯ ನಾಗರಿಕರಿಗೆ ನಿಗದಿಪಡಿಸಿದ ಮೂಲಭೂತ ಹಕ್ಕುಗಳ ಬಗ್ಗೆ 40% ಕ್ಕಿಂತ ಕಡಿಮೆ ಜನರು ತಿಳಿದುಕೊಂಡಿದ್ದರು ಎಂದು ಸಮೀಕ್ಷೇ ಮುಖ್ಯಾಂಶದಲ್ಲಿ ಗುರುತಿಸಲಾಗಿದೆ. 

Related Articles

ಇತ್ತೀಚಿನ ಸುದ್ದಿಗಳು