Thursday, July 31, 2025

ಸತ್ಯ | ನ್ಯಾಯ |ಧರ್ಮ

ಮಹಿಳಾ ಏಷ್ಯಾಕಪ್‌ 2022 : ದಾಖಲೆಯ 7ನೇ ಟ್ರೋಪಿ ಗೆದ್ದ ಭಾರತ ತಂಡ

ದೆಹಲಿ : ಇಂದು ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾಕಪ್‌ 2022 ಟೂರ್ನಿ ಫೈನಲ್ಸ್‌ನಲ್ಲಿ ಭಾರತ ಮಹಿಳಾ ತಂಡವು ಶ್ರೀಲಂಕಾ ವಿರುದ್ದ ಭರ್ಜರಿ ಪ್ರದರ್ಶನ ನೀಡಿದೆ. 8 ವಿಕೆಟ್‌ಗಳಿಂದ ಗೆಲುವನ್ನು ಸಾಧಿಸಿದ್ದು, ದಾಖಲೆಯ 7ನೇ ಮಹಿಳಾ ಏಷ್ಯಾಕಪ್‌ ಟ್ರೋಫಿಯನ್ನು ಭಾರತದ ಮುಡಿಗೇರಿಸಿದ್ದಾರೆ.

ಶನಿವಾರದಂದು ಸೈಲಟ್‌ ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ಕ್ರಿಕೆಟ್‌ ತಂಡ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಏಷ್ಯಾಕಪ್‌ 2022 ಟೂರ್ನಿಯ ಕೊನೆಯ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್‌ ತಂಡ ಶ್ರೀಲಂಕಾ ಮಹಿಳಾ ಕ್ರಿಕೆಟ್‌ ತಂಡದ ವಿರುದ್ದ 8 ವಿಕೆಟ್‌ಗಳಿಂದ ಮಣಿಸಿ ದಾಖಲೆಯ 7ನೇ ಟ್ರೋಫಿಯನ್ನು ಭಾರತದ ಮಹಿಳಾ ತಂಡ ತಮ್ಮದಾಗಿಸಿಕೊಂಡಿದ್ದಾರೆ.

ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಶ್ರೀಲಂಕಾ ತಂಡ ಒಂಭತ್ತು ವಿಕೆಟ್ ನಷ್ಟಕ್ಕೆ ಕೇವಲ 65 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಬೌಲರ್ ಗಳ ಮೊನಚಾದ ದಾಳಿಗೆ ಶ್ರೀಲಂಕಾ ಆಟಗಾರರು ಪೆವಿಲಿಯನ್ ಗೆ ಪೆರೇಡ್ ಮಾಡಿದರು. ಭಾರತದ ಪರ ರೇಣುಕಾ ಸಿಂಗ್ ಕೇವಲ 5 ರನ್ ನೀಡಿ ಮೂರು ವಿಕೆಟ್ ಪಡೆದರು. ಸ್ನೇಹ ರಾಣಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಗಳಿಸಿದರು.

ಶ್ರೀಲಂಕಾ ಮೊತ್ತ ಬೆನ್ನಟ್ಟಿದ ಭಾರತ ವನಿತೆಯರು ಕೇವಲ 8.3 ಓವರ್ ಗಳಲ್ಲಿ ಗುರಿ ಮುಟ್ಟಿದರು. ಸ್ಮೃತಿ ಮಂದಾನ 25 ಎಸೆತಗಳಲ್ಲಿ ಬಿರುಸಿನ 51 ರನ್ ಗಳಿಸಿದರು.

ರೇಣುಕಾ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page