Thursday, June 27, 2024

ಸತ್ಯ | ನ್ಯಾಯ |ಧರ್ಮ

ಮಹಿಷ ದಸರಾ ಆಚರಿಸಿಯೇ ಸಿದ್ಧ: ಚೀರನಹಳ್ಳಿ ಲಕ್ಷ್ಮಣ್

ಮೈಸೂರು: ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಮಹಿಷ ದಸರವನ್ನು ಆಚರಿಸಿಯೇ ಸಿದ್ಧ ಎಂದು ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಹಾಗೂ ಸಮಾಜಿಕ ಕಾರ್ಯಕರ್ತರಾದ ಲಕ್ಷ್ಮಣ್‌ ಚೀರನಹಳ್ಳಿ ತಿಳಿಸಿದ್ದಾರೆ.

ಸರಕಾರವು ಮಹಿಷಾ ದಸರಾ ಆಚರಣೆ ಮತ್ತು ಇದಕ್ಕೆ ವಿರುದ್ಧವಾಗಿ ಬಿಜೆಪಿ ಸಂಸದ ಪ್ರತಾಪ್‌ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮುಂಡಿ ಬೆಟ್ಟ ಚಲೋ ಎರಡೂ ಕಾರ್ಯಕ್ರಮಗಳಿಗೆ ಸಮ್ಮತಿ ನಿರಾಕರಿಸಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಷ ದಸರಾ ಆಯೋಜಕರು ಇಂದು ಮಂಡ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಏರ್ಪಡಿಸಿದ್ದರು.

ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ್‌, “ನಮ್ಮ ದ್ರಾವಿಡ ಸಂಸ್ಕೃತಿಯ ನಾಶದ ಮೂಲಕ ತನ್ನ ವೈಭವವನ್ನು ಗಟ್ಟಿಗೊಳಿಸುವಂತಹ ವೈಧಿಕ ಆರ್ಯರ ಮರವಾಗಿ ವಕಾಲತ್ತು ವಹಿಸುವ ಸಂಸದ ಪ್ರತಾಪ ಸಿಂಹರವರ ಚೀರಾಟದ ವಿಚಾರ ಸರಣಿಗೆ ಆಧಾರಗಳಿಲ್ಲ. ಮೈಸೂರೆಂಬ ಪದವು ʼಮಹಿಷ ಶೂರನʼ ಊರುಎಂದಾಗಿದೆ. ಮಹಿಷನ ಊರು ಮೈಸೂರು ಇದರಲ್ಲಿ ಗೊಂದಲಗಳಿಲ್ಲ, ಮೈಸೂರಿನ ಮಹಾಜರು ಮಹಿಷನ ಪ್ರತಿಮೆ ನಿರ್ಮಾಣ ಮಾಡಿರುವುದೇ ಇದಕ್ಕೆ ಸಾಕ್ಷಿ ಮುಂದುವರೆದು ಹೇಳುವುದಾದರೆ ಮಹಿಷನ ಊರಿನ ಮೈಸೂರಿನಲ್ಲಿ ದೊಡ್ಡಗಡಿಯಾರದ ಶಂಕುಸ್ತಾಪನೆಯಲ್ಲಿ ಮಹರಾಜರೇ ಶಿಲನ್ಯಾಸದಲ್ಲಿ ಬರೆಯಿಸಿ ಸಮರ್ಥನೆ ಒದಗಿಸಿರುವುದು ಅತಿ ದೊಡ್ಡ ಸಾಕ್ಷಿಯಾಗಿರುತ್ತದೆ.” ಎಂದರು.

ಮುಂದುವರೆದು ಮಾತನಾಡಿದ ಅವರು “ಮಹಿಷನ ಬಗ್ಗೆ ಜಾನಪದ ಹಿನ್ನೆಲೆಯಲ್ಲಿಯೂ ಕೂಡ ಈ ನಾಡು ಮಹಿಷನಿಗೆ ಸೇರಿದ್ದು ಎನ್ನಲು ಸಾಕಷ್ಟು ಚಾರಿತ್ರಿಕ ಹಿನ್ನೆಲೆಯ ದಾಖಲೆಗಳಿವೆ, ದ್ರಾವಿಡ ನಾಡಿನಲ್ಲಿ ಮಹಿಷನ ಉತ್ಸವಗಳು ಹಿಂದೆಯು ನಡೆಯುತ್ತಿದ್ದವು. ಮುಂದೆಯೂ ಕೂಡ ನಡೆಯುತ್ತದೆ. ಇಂತಹ ಚಾರಿತ್ರಿಕ ಹಿನ್ನೆಲೆ ಗೊತ್ತಿರದ ಮೈಸೂರಿನ ಸಂಸದ ಪ್ರತಾಪ ಸಿಂಹರ ಮಹಿಷ ದಸರಾ ವಿರೋಧ, ತರ್ಕಕ್ಕೆ ಆಚಾರ ವಿಚಾರಗಳಿಗೆ ಯಾವುದೇ ಆಧಾರಗಳಿಲ್ಲ, ಇದರಿಂದ ಅವರು ವಿನಾಕಾರಣ ಕುಪಿತರಾಗಿ ನಮ್ಮ ಸಂವಿಧಾನಿಕ ಸಂಸದ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಅಸಂವಿಧಾನಿಕವಾಗಿ, ಅನಾಗರೀಕವಾಗಿ ವರ್ತಿಸುತ್ತಿರುವದು ಬಂಡನೀಯ, ಜಾನಪದ ಮತ್ತು ಚರಿತ್ರೆಯ ಗಂದಗಾಳಿ ಗೊತ್ತಿಲ್ಲದ, ದ್ರಾವಿಡ ಸಂಸ್ಕೃತಿಯ ಅರಿವು ಇರದ ದಡ್ಡ ಸಂಸದ ಪ್ರತಾಪ ಸಿಂಹನಿಗೆ ಪ್ರತಿದಿನ ಛೀಮಾರಿ ಹಾಕಲು ಸಿದ್ಧರಿದ್ದೇವೆ.” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೌಡಿಯಂತೆ ವರ್ತಿಸುತ್ತಿರುವ ಸಂಸದರನ್ನು ಸರ್ಕಾರವು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ವೇದಿಕೆಯ ಸದಸ್ಯರು ಆಗ್ರಹಿಸಿದ್ದಾರೆ. ಈ ನಡುವೆ ಮಹಿಷ ದಸರಾ ವಿಷಯದಲ್ಲಿ ಸಂಸದ ಪ್ರತಾಪ್‌ ಸಿಂಹ ವರ್ತನೆಯನ್ನು ಬಿಜೆಪಿ ನಾಯಕರೂ ಖಂಡಿಸಿ ಹೇಳಿಕೆ ನೀಡಿದ್ದು, ʼಮಹಿಷ ದಸರಾ ಕುರಿತು ಹೇಳಿಕೆ ನೀಡಲು ಪ್ರತಾಪ ಸಿಂಹ ಯಾರು?ʼ ಎಂದು ಕೇಳಿದ್ದಾರೆ.

ಸರಕಾರ ಅನುಮತಿ ನೀಡಲಿ, ನೀಡದಿರಲಿ ನಾವು 13ನೇ ತಾರೀಖಿನಂದು ಮಹಿಷ ದಸರಾವನ್ನು ಆಚರಿಸುತ್ತೇವೆ ಎಂದು ಅವರು ವಿಶ್ವಾಸದಿಂದ ನುಡಿದಿದ್ದಾರೆ.

ಅಂದು ಬೆಳಗ್ಗೆ ಮಂಡ್ಯದಿಂದ ಮೈಸೂರಿಗೆ ಸಾವಿರಾರು ಜನರು ಬೈಕಿನಲ್ಲಿ ಮೆರವಣಿಗೆ ಹೋಗಲಿದ್ದು, ನಂತರ ಮಹಿಷ ದಸರಾ ಆಚರಿಸಲಿದ್ದೇವೆ ಎಂದು ಅವರು ತಿಳಿಸಿದರು. ಅದೇ ದಿನ ಬೆಳಗ್ಗೆ ಮೆರವಣಿಗೆ ಹೊರಡುವ ಮೊದಲು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗಿರುವ ಅಂಬೇಡ್ಕರ್‌ ಮೂರ್ತಿಗೆ ಮಾಲೆ ಹಾಕುವುದರೊಂದಿಗೆ ಮೆರವಣಿಗೆ ಆರಂಭಗೊಳ್ಳಲಿದೆ.

ಪತ್ರಿಕಾಗೋಷ್ಟಿಯಲ್ಲಿ ಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಎಂ.ವಿ.ಕೃಷ್ಣ, ನರಸಿಂಹಮುರ್ತಿ, ದೇವರಾಜ್‌ಕೊಪ್ಪ, ಶಂಕರ್‌ಗುರು, ಮಹಮ್ಮದ್ ತಾಹೇರ್ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು