ನನ್ನ ಮೇಲೆ ಮೊಟ್ಟೆ ಎಸೆದು ದಾಳಿ ಮಾಡಿದವರು ಬಿಜೆಪಿಗೆ ಸೇರಿದವರು: ಮಹುವಾ ಮೊಯಿತ್ರಾ ಆರೋಪ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ ಸರ್ಕಾರ ರಚಿಸಿದ ದಿನದಿಂದಲೂ ಆ ರಾಜ್ಯದಲ್ಲಿ ರಾಜಕೀಯ ದಾಳಿಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಪ್ರತಿಪಕ್ಷ ಟಿಎಂಸಿ (TMC) ಪಕ್ಷದ ಪ್ರಮುಖ ನಾಯಕರನ್ನೇ ಗುರಿಯಾಗಿಸಿಕೊಂಡು ಈ ದಾಳಿಗಳು ಮುಂದುವರಿದಿವೆ. ಈಗಾಗಲೇ ತೃಣಮೂಲ ಕಾಂಗ್ರೆಸ್‌ನ ಮುಖ್ಯ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಕೆಲವು ಮಾಜಿ ಮಂತ್ರಿಗಳ ಮೇಲೆ ದೈಹಿಕ ದಾಳಿಗಳು ನಡೆದಿವೆ. ಇದೀಗ ತಾಜಾ ಬೆಳವಣಿಗೆಯಾಗಿ ಮಹಿಳಾ ಸಂಸದೆ ಮಹುವಾ ಮೊಯಿತ್ರಾ ಅವರ ಮೇಲೆ ದಾಳಿ ನಡೆಸಲಾಗಿದೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಅಂಗಡಿಯೊಂದರ ಬಳಿ ಟಿಎಂಸಿ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದಾಗ ಕೆಲವರು ಅವರ ಮೇಲೆ ಕೋಳಿಮೊಟ್ಟೆಗಳಿಂದ ದಾಳಿ ನಡೆಸಿದ್ದಾರೆ. ತಮ್ಮ ಮೇಲೆ ದಾಳಿ ನಡೆದಿರುವ ವಿಷಯವನ್ನು ಮಹುವಾ ಅವರೇ ಸ್ವತಃ ದೃಢಪಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರೇ ಈ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಇದು ಬಂಗಾಳ ಪೊಲೀಸರ ವೈಫಲ್ಯ ಎಂದು ಅವರು ಕಿಡಿಕಾರಿದ್ದಾರೆ. ಮಹುವಾ ಮೊಯಿತ್ರಾ ಅವರ ಆರೋಪಗಳಿಗೆ ಬಿಜೆಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

Related Articles

ಇತ್ತೀಚಿನ ಸುದ್ದಿಗಳು