Tuesday, September 16, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಹುವಾ ಮೊಯಿತ್ರಾ

ಹೊಸದೆಹಲಿ: ಲೋಕಸಭೆಯಿಂದ ಉಚ್ಛಾಟನೆಗೊಂಡ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಕೊನೆಗೂ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಅವರು ಸಂಸದರಾಗಿದ್ದಾಗ ಅವರಿಗೆ ದೆಹಲಿಯಲ್ಲಿ ಮಂಜೂರಾಗಿದ್ದ ಕಟ್ಟಡವನ್ನು ತೆರವು ಮಾಡುವಂತೆ ಅಧಿಕಾರಿಗಳು ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಎಸ್ಟೇಟ್ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಗೆ ತಲುಪಿದ್ದಾರೆ. ಆದರೆ ಈಗಾಗಲೇ ನಿವಾಸವನ್ನು ಖಾಲಿ ಮಾಡಲಾಗಿದೆ ಎಂದು ಆಕೆಯ ವಕೀಲ ಶದನ್ ಫರಾಸತ್ ಹೇಳಿದ್ದಾರೆ. ಕಳೆದ ಡಿಸೆಂಬರ್ 8ರಂದು ಮೊಯಿತ್ರಾ ಅವರ ಲೋಕಸಭಾ ಸದಸ್ಯತ್ವ ರದ್ದಾಗಿತ್ತು. ಈ ಕಾರಣದಿಂದ ತನಗೆ ವಹಿಸಿರುವ ಅಧಿಕೃತ ಕಟ್ಟಡವನ್ನು ಇದೇ ತಿಂಗಳ 7ರೊಳಗೆ ಪೂರ್ಣಗೊಳಿಸುವಂತೆ ಈ ಹಿಂದೆಯೇ ನೋಟಿಸ್‌ ನೀಡಲಾಗಿತ್ತು. ಆದರೆ ಈ ಕುರಿತು ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಎಸ್ಟೇಟ್ ನಿರ್ದೇಶನಾಲಯ ಕ್ರಮ ಕೈಗೊಂಡಿದೆ.

ಶುಕ್ರವಾರ ಬೆಳಿಗ್ಗೆ, ಅಧಿಕಾರಿಗಳ ತಂಡವು ಟೆಲಿಗ್ರಾಫ್ ಲೇನ್‌ನಲ್ಲಿರುವ ಮಹುವಾ ಅವರ 9 ಬಿ ನಿವಾಸವನ್ನು ತಲುಪಿತು. ಆದರೆ ಮೊಯಿತ್ರಾ ಈಗಾಗಲೇ ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಆಕೆಯ ವಕೀಲ ಫರಸತ್ ಹೇಳಿದ್ದಾರೆ. ಯಾವುದೇ ಬಲವಂತದ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ಬಂಗಲೆಯ ಕೀಗಳನ್ನು ಡಿಇಒ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page