Thursday, October 9, 2025

ಸತ್ಯ | ನ್ಯಾಯ |ಧರ್ಮ

ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ?

ಬೆಂಗಳೂರು : ರಾಜ್ಯ (State) ಸರ್ಕಾರವು (Govt) ಅನ್ನಭಾಗ್ಯ ಯೋಜನೆಯಲ್ಲಿ (Anna Bhagya Scheme) ಮಹತ್ವದ ಬದಲಾವಣೆಯನ್ನು (Changes) ಮಾಡಿದೆ.

ಹೌದು..ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್ ಒಂದನ್ನು ನೀಡಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಈಗ ‘ಇಂದಿರಾ ಆಹಾರ ಕಿಟ್’ ವಿತರಿಸಲು ನಿರ್ಧರಿಸಲಾಗಿದೆ. ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದಲ್ಲಿ ಆಹಾರ ಕಿಟ್‌ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಇನ್ನು ಮುಂದೆ ಕುಟುಂಬ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಜೊತೆಗೆ ಕುಟುಂಬಕ್ಕೆ ಒಂದು ಆಹಾರ ಕಿಟ್‌ ಸಿಗಲಿದೆ.

ಈ ಕುರಿತು ಸಚಿವ ಹೆಚ್‌ಕೆ ಪಾಟೀಲ್‌ ಮಾಹಿತಿ ನೀಡಿದ್ದು,  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಪರ್ಯಾಯವಾಗಿ “ಇಂದಿರಾ ಆಹಾರ ಕಿಟ್” ವಿತರಿಸಲು ಸಂಪುಟ ಅನುಮೋದನೆ ನೀಡಿದೆ. 61.19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

5 ಕೆ.ಜಿ ಅಕ್ಕಿಯ ಜೊತೆಗೆ ಈ ಕಿಟ್ ಅನ್ನು ನೀಡಲಾಗುವುದು. ಈ ಹಿಂದೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲು ನೀಡಲಾಗುತ್ತಿದ್ದ ಹಣದ ಬದಲಿಗೆ ತೊಗರಿಬೇಳೆ – 2 ಕೆ.ಜಿ, ಅಡುಗೆ ಎಣ್ಣೆ – 1 ಕೆ.ಜಿ, ಸಕ್ಕರೆ – 1 ಕೆ.ಜಿ ಹಾಗೂ ಉಪ್ಪು – 1 ಕೆ.ಜಿಯ ಕಿಟ್ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಕುಟುಂಬ ಸದ್ಯರಿಗೆ ತಲಾ 10 ಕೆಜಿ ಅಕ್ಕಿ ಸಿಗುತ್ತಿದ್ದ ಕಾರಣ ದುರ್ಬಳಕೆಯಾಗುತ್ತಿತ್ತು. ಹೀಗಾಗಿ ಅಕ್ಕಿ ದುರ್ಬಳಕೆ ತಡೆಯುವುದು ಕೂಡ ಇದರ ಒಂದು ಉದ್ದೇಶವಾಗಿದೆ.   ಅಲ್ಲದೇ ಅನ್ನ ಭಾಗ್ಯ ಯೋಜನೆ ಅಕ್ಕಿ ಕಳ್ಳ ಸಾಗಾಟವಾಗುತ್ತಿದ್ದ ಕಾರಣಕ್ಕೂ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ ಎಂದರು.

ಇನ್ನು ಕುಟುಂಬಗಳಲ್ಲಿ 5 ಜನ ಇದ್ದರೆ 50 ಕೆ.ಜಿ ಅಕ್ಕಿ ತಿಂಗಳಿಗೆ ಬರುತ್ತಿತ್ತು. ಇದು ಕುಟುಂಬಗಳಿಗೂ ಹೊರೆಯಾಗುತ್ತಿತ್ತು. ಸದ್ಯ ಇತರೆ ದಿನಸಿ ಸಾಮಗ್ರಿ ಒಳಗೊಂಡ ಕಿಟ್‌ ನೀಡುತ್ತಿರುವುದು ಫಲಾನುಭವಿಗಳಿಗೂ ಅನುಕೂಲವಾಗಲಿದೆ. ರಾಜ್ಯದಲ್ಲಿ ಒಟ್ಟು 1.26 ಕೋಟಿ ಪಡಿತರ ಕಾರ್ಡ್‌ಗಳಿದ್ದು, 4.49 ಕೋಟಿ ಜನ ಅನ್ನಭಾಗ್ಯದ ಫಲಾನುಭವಿಗಳಿದ್ದಾರೆ.

ಈ ಮೊದಲು ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ಘೋಷಣೆ ಮಾಡಿತ್ತು. ಆರಂಭದಲ್ಲಿ ಅಕ್ಕಿ ದಾಸ್ತಾನು ಲಭ್ಯವಿಲ್ಲ ಎಂದು 10 ಕೆಜಿ ಪೈಕಿ 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿ ಕುಟುಂಬದ ಯಜಮಾನರ ಖಾತೆಗೆ ಜಮೆ ಮಾಡುತ್ತಿತ್ತು. ಆ ಬಳಿಕ ಅಕ್ಕಿ ದಾಸ್ತಾನು ಲಭ್ಯವಾದ ಹಿನ್ನೆಲೆ ತಲಾ 10 ಕೆಜಿ ನೀಡುತ್ತಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page