ಇಂದಿನ ದಿನಗಳಲ್ಲಿ ಸೀಲಿಂಗ್ ಫ್ಯಾನ್ ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕಾದ ಸಾಧನವಾಗಿದೆ. ಬಡವರಿಂದ ಹಿಡಿದು ಮೇಲ್ವರ್ಗದವರವರೆಗೂ ಪ್ರತಿಯೊಬ್ಬರ ಮನೆಯಲ್ಲೂ ಸೀಲಿಂಗ್ ಫ್ಯಾನ್ ಇದ್ದೇ ಇರುತ್ತದೆ.
ಒಂದು ದಿನ ಕರೆಂಟ್ ಇಲ್ಲದೆಯೋ ಅಥವಾ ಇನ್ಯಾವುದೋ ಕಾರಣದಿಂದಲೋ ಫ್ಯಾನ್ ನಿಂತರೆ… ಪರದಾಡುವ ಸ್ಥಿತಿ ನಮ್ಮದಾಗಿರುತ್ತದೆ. ಆದರೆ ಕೆಲವೊಮ್ಮೆ ಫ್ಯಾನ್ ಜೋರಾಗಿ ತಿರುಗದೆ ಹೋದಾಗ ನಮಗೆ ಬಹಳ ಕಿರಿಕಿರಿಯೆನ್ನಿಸುತ್ತದೆ. ಅದರಿಂದ ಗಾಳಿಯೇ ಬರುತ್ತಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿದ್ರೆಯಂತೂ ದೂರದ ಮಾತು.

ಆದರೆ.. ಫ್ಯಾನ್ ನಿಧಾನವಾಗಿ ತಿರುಗಲು ಮುಖ್ಯ ಕಾರಣವೆಂದರೆ ಅದರ ರೆಕ್ಕೆಗಳ ಮೇಲೆ ಸಂಗ್ರಹವಾಗುವ ಧೂಳು. ದಿನದಿಂದ ದಿನಕ್ಕೆ ಸ್ವಲ್ಪಮಟ್ಟಿಗೆ ರೆಕ್ಕೆಗಳ ಮೇಲೆ ನೆಲೆಗೊಳ್ಳುವ ಧೂಳು ಹಲವಾರು ದಿನಗಳ ನಂತರ ಪದರಗಳಂತೆ ಆಗುತ್ತದೆ.
ಇದು ಫ್ಯಾನ್‌ನ ವೇಗಕ್ಕೆ ಅಡ್ಡಿಯಾಗುತ್ತದೆ. ರೆಕ್ಕೆಗಳ ಮೇಲೆ ಭಾರ ಹೆಚ್ಚಾದಾಗ ಫ್ಯಾನ್ ನಿಧಾನವಾಗಿ ತಿರುಗುತ್ತದೆ. ಪರಿಣಾಮವಾಗಿ, ಫ್ಯಾನ್ ರೆಗ್ಯುಲೇಟರನ್ನು 5ರ ಸ್ಪೀಡಿಗೆ ತಿರುಗಿಸಿದರೂ ಸಹ ಸ್ಪೀಡಾಗಿ ತಿರುಗೋದೇ ಇಲ್ಲ.
ಅಂದ ಹಾಗೆ ಈ ಸಮಸ್ಯೆಗೆ ಒಂದು ಪರಿಹಾರವಿದೆ… ಈ ಸಮಸ್ಯೆಯನ್ನು ಚಿಟಿಕೆಯಲ್ಲಿ ಪರಿಹರಿಸಬಹುದು. ಸಾಮಾನ್ಯ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಬಳಸಿ ಫ್ಯಾನಿನ ಬ್ಲೇಡುಗಳನ್ನು ಸ್ವಚ್ಛಗೊಳಿಸಬಹುದು. ಇದನ್ನೂ ಮೀರಿ ನಿಮ್ಮ ಫ್ಯಾನ್ ಬ್ಲೇಡ್‌ಗಳು ಹೆಚ್ಚು ಕೊಳಕಾಗಿದ್ದರೆ ಕಾಸ್ಟಿಕ್ ಸೋಡಾವನ್ನು ಬಿಸಿ ನೀರಿಗೆ ಮಿಕ್ಸ್ ಮಾಡಿಕೊಂಡು ನೆನೆಸಿದ ಬಟ್ಟೆಯಿಂದ ಫ್ಯಾನನ್ನು ಕ್ಲೀನ್ ಮಾಡಿ.
ಹೀಗೆ ಮಾಡಿದಾಗ ನಿಮ್ಮ ಫ್ಯಾನ್ ತನ್ನ ವೇಗವನ್ನು ಹೆಚ್ಚಿಸಿಕೊಂಡು ನಿಮಗೆ ತಂಪಾದ ಗಾಳಿ ಕೊಡುತ್ತದೆ. ಫ್ಯಾನ್ ಮೊದಲಿನ ಸ್ಥಿತಿಗೆ ಬಂದು ನಿಮಗೆ ಮನಶಾಂತಿಯೂ ಸಿಗುತ್ತದೆ. ಇಂತಹ ಉತ್ತಮ ಗಾಳಿ ಪಡೆಯಲು ನಿಮಗೆ ಖರ್ಚಾಗುವುದು ಹೆಚ್ಚೆಂದರೆ 5 ರೂಪಾಯಿ ಮಾತ್ರ.