Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಳವಳ್ಳಿ ಅತ್ಯಾಚಾರ ಪ್ರಕರಣ : ಸಂಸದೆ ಸುಮಲತಾ ವಿರುದ್ದ ಸ್ಥಳೀಯರ ಆಕ್ರೋಶ

ಮಂಡ್ಯ : ಅಕ್ಟೋಬರ್‌ 11, 2022 ರಂದು ಮಳವಳ್ಳಿಯ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರದ ಸಾವನಪ್ಪಿದ್ದು, ರಾಜ್ಯದ್ಯಂತ ಈ ಹೋರಾಟ ನಡೆಸುತ್ತಿದ್ದರೂ ಮಂಡ್ಯ ಸಂಸದೆ ಸುಮಲತಾ ಮೌನವಾಗಿರುವ ಬಗ್ಗೆ  ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಳೆದ ಐದಾರು ದಿನಗಳ ಹಿಂದೆ ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುರ್ಘಟನೆ ನಡೆದಿತ್ತು. ಕೊಲೆ ಬಳಿಕ ಆಕೆಯ ಮೃತದೇಹವನ್ನು ನಿರ್ಮಾಣ ಹಂತದ ಕಟ್ಟಡದ ಸಂಪ್‌ ಒಳಗೆ ಎಸೆದಿರುವ ಅಮಾನವೀಯ ಘಟನೆ ಸಂಭವಿಸಿತ್ತು.

ಈ ಅಮಾನವೀಯ ಘಟನೆಯ ಕುರಿತು ಮಂಡ್ಯದ ಸ್ಥಳೀಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು , ಯುವಕರು, ಸಾಮಾಜಿಕ ಹೋರಾಟಗಾರು ಮತ್ತು ಸಂಘಟನೆಗಳೂ ಸೇರಿದಂತೆ ರಾಜ್ಯಾದ್ಯಂತ ಶಿಕ್ಷಕನು ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದರ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೀಗ ಮಂಡ್ಯದ ಸಂಸದರಾದ ಸುಮಾಲತಾ ನನಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಳವಳ್ಲಿಯ ಸ್ಥಳೀಯರು ʼಮಂಡ್ಯ ಸಂಸದರೇ ನಿಮ್ಮ ಕಣ್ಣಿಗೆ ಗಣಿಗಾರಿಕೆ ಮಾತ್ರ ಕಾಣೋದಾ..? ಮಳವಳ್ಳಿಯ ಪುಟ್ಟ ಬಾಲಕಿಯ ಸಾವು ನಿಮಗೆ ಕಾಣ್ತಾ ಇಲ್ವಾ..? ಬೇಗ ಮಳವಳ್ಳಿಗೆ ಬನ್ನಿʼ ಎಂದು ಸಂಸದೆ ಸುಮಲತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು