Tuesday, January 27, 2026

ಸತ್ಯ | ನ್ಯಾಯ |ಧರ್ಮ

ಮಳೆ ಅವಘಡ  ಜನ-ಜೀವನ  ಅಸ್ತವ್ಯಸ್ತ

ಬೆಂಗಳೂರು : ರಾಜ್ಯದಲ್ಲಿ ಭಾನುವಾರದಿಂದ  ಸತತ ಎರೆಡು ದಿನಗಳ ಕಾಲ  ಮಳೆ  ಸುರಿಯುತ್ತಿದೆ, ಈ ಕಾರಣ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು ಜನ ಜೀವನ  ಅಸ್ತವ್ಯಸ್ತಗೊಂಡಿದೆ.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ  ರಸ್ತೆಗಳು ಹಳ್ಳಗಳಂತಾಗಿದ್ದು, ಹಲವು ಕಡೆ ಜಿಲ್ಲೆಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

ಈ ಮಳೆಯಿಂದಾಗಿ  ರಾಮನಗರ, ಬಿಡದಿ, ಮಧುಗಿರಿ, ಹುಬ್ಬಳಿ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಸಾವುನೋವು ಉಂಟಾಗಿದ್ದು, ಜನರು ಕಂಬನಿ ಮಿಡಿದಿದ್ದಾರೆ.

ಬೆಂಗಳೂರು ನಗರದಲ್ಲಿ  (ಇಂದು) ಮಂಗಳವಾರವು ಕೂಡಾ ಭಾರಿ ಮಳೆಯಾಗುವ  ಸಾಧ್ಯತೆ ಇದ್ದು. ನಗರದ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ  ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ‘ಮಕ್ಕಳ ಸುರಕ್ಷತೆಗಾಗಿ ರಜೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page