Tuesday, September 3, 2024

ಸತ್ಯ | ನ್ಯಾಯ |ಧರ್ಮ

ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ; ಕೇಂದ್ರ ಪರಿಸರ ಖಾತೆಗೆ 13 ಅಂಶಗಳ ಪತ್ರ ಬರೆದ ‘ಮಲೆನಾಡು ಕರಾವಳಿ ಜನಪರ ಒಕ್ಕೂಟ’

ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆಗೆ ಬೇಸತ್ತಿರುವ ಮಲೆನಾಡು ಮತ್ತು ಕರಾವಳಿ ಭಾಗದ ರೈತ ಸಮುದಾಯ ಇದಕ್ಕೆ ಕುಮ್ಮಕ್ಕು ಕೊಡುವಂತೆ ಸಿದ್ದವಾದ ಕಸ್ತೂರಿ ರಂಗನ್ ವರದಿಯಿಂದ ಆಗಬಹುದಾದ ಮತ್ತಷ್ಟು ಅನಾಹುತಗಳಿಗೆ ತಲೆ ಕೆಡಿಸಿಕೊಂಡಿದೆ. ಬೆಳಗಾದರೆ ಸಾಕು ಅರಣ್ಯ ಇಲಾಖೆ ಯಾರ ಜಮೀನನ್ನು ಖುಲ್ಲಾ ಮಾಡಿಸಲು ಲಗ್ಗೆ ಇಡಲಿದೆ ಎಂಬ ಆತಂಕದಲ್ಲೇ ದಿನ ಕಳೆಯುವ ದುಸ್ಥಿತಿ ಬಂದೊದಗಿದೆ.

ಇತ್ತೀಚೆಗೆ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು “ಮಲೆನಾಡು ಕರಾವಳಿ ಜನಪರ ಒಕ್ಕೂಟ” ನಿರಂತರವಾಗಿ ಮಲೆನಾಡು ಭಾಗದಲ್ಲಿ ಸರಣಿ ಸಭೆಗಳನ್ನು ಮಾಡುತ್ತಾ ಜನಜಾಗೃತಿ ನಡೆಸುತ್ತಿದೆ. ಇದಕ್ಕೆ ಸರಿಯಾಗಿ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದ ಮಲೆನಾಡು ಭಾಗಗಳ ಒಳಗೊಂಡ ರೈತ ಸಂಘ ಮತ್ತು ವಿವಿಧ ಜನಪರ ಸಂಘಟನೆಗಳನ್ನು ಒಳಗೊಂಡ ಸಭೆ ನಡೆಸಿ ಗಂಭೀರವಾದ ನಿರ್ಣಯಕ್ಕೆ ಕೈ ಇಟ್ಟಿದೆ.

ವಿಶೇಷವಾಗಿ ಮಲೆನಾಡು ಭಾಗದ ಎರಡು ದೊಡ್ಡ ಮಠಗಳಾದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಮತ್ತು ಶೃಂಗೇರಿ ಆದಿಚುಂಚನಗಿರಿ ಜಗದ್ಗುರುಗಳು ಮಲೆನಾಡು ಜನಪರ ಒಕ್ಕೂಟದ ಹೋರಾಟಕ್ಕೆ ಜೊತೆ ನಿಂತು, ಮಲೆನಾಡ ರೈತ ಸಮುದಾಯಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಹೆಜ್ಜೆ ಇರಿಸುವುದಾಗಿ ಭರವಸೆ ನೀಡಿದ್ದಾರೆ.

ಹಾಗೆಯೇ ಶಾಸನ ಬದ್ಧವಾಗಿ ಸರ್ಕಾರದ ಮೂಲಕ ಆಗಬೇಕಾದಂತ ಎಲ್ಲಾ ರೀತಿಯ ಕಾನೂನು ಹಾಗೂ ಶಾಸನಗಳ ವಿಚಾರದಲ್ಲಿ ಈ ಭಾದಿತ ಪ್ರದೇಶಗಳಿಗೆ ಒಳಪಟ್ಟಂತ 36 ಶಾಸಕರನ್ನು ಒಟ್ಟುಗೂಡಿಸಿ ಅದರೊಟ್ಟಿಗೆ ಸಮಿತಿಯ ಹೋರಾಟಗಾರರು ಹಾಗೂ ಮಲೆನಾಡಿನ ಬಗ್ಗೆ ಸಂಪೂರ್ಣ ಜ್ಞಾನ ಇರುವ ವ್ಯಕ್ತಿಗಳನ್ನು ಬೆಂಗಳೂರಿನ ವಿಧಾನಸೌಧ ದಲ್ಲಿ ಸಭೆ ಮಾಡಿ ಅದರೊಟ್ಟಿಗೆ ಕಾನೂನು ಸಲಹೆಗಾರರನ್ನ ಕೂಡ ಸೇರಿಸಿಕೊಂಡು ಶಾಶ್ವತ ಪರಿಹಾರಕ್ಕೆ ಸರ್ವ ರೀತಿಯಲ್ಲಿ ಪ್ರಯತ್ನ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ಅದರ ಮುಂದುವರೆದ ಭಾಗವಾಗಿ ಈಗ ಕಸ್ತೂರಿ ರಂಗನ್ ಪುನಶ್ಚೇತನದ ಆಧಾರದ ಮೇಲೆ ಪಶ್ಚಿಮ ಘಟ್ಟದಲ್ಲಿನ ಪರಿಸರ-ಸೂಕ್ಷ್ಮ ವಲಯ ಪ್ರದೇಶದ 6 ನೇ ಕರಡು ಅಧಿಸೂಚನೆಯಲ್ಲಿ ಮಲೆನಾಡು ಪ್ರದೇಶವನ್ನು ಸೇರಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಮಲೆನಾಡು ಕರಾವಳಿ ಜನಪರ ಒಕ್ಕೂಟ ಮುಂದಾಗಿದೆ.

ಕಸ್ತೂರಿ ರಂಗನ್ ವರದಿಯ 6ನೇ ಅಧಿಸೂಚನೆಯ ಅಡಿಯಲ್ಲಿ ನಮ್ಮ ಪ್ರದೇಶವನ್ನು ಪರಿಸರ-ಸೂಕ್ಷ್ಮ ವಲಯವೆಂದು ಗುರುತಿಸಲು ನಾವು ಆಕ್ಷೇಪಿಸುತ್ತಿದ್ದೇವೆ ಎಂದು ಕೇಂದ್ರ ಪರಿಸರ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆಕ್ಷೇಪಣೆಗಳು:-
ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಉಪಗ್ರಹ ಚಿತ್ರಣವನ್ನು ಆಧರಿಸಿದೆ ಮತ್ತು ವಾಸ್ತವದ ವಾಸ್ತವಿಕ ಮತ್ತು ನೈಜ ಚಿತ್ರಣಕ್ಕೆ ವಿರುದ್ಧವಾಗಿದೆ. ಇದಲ್ಲದೆ ಪ್ರಾಯೋಗಿಕ ವರದಿ ನೀಡಲು ಸಮಿತಿಯು ನಮ್ಮ ಪ್ರದೇಶದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿಲ್ಲ.
ಹಳ್ಳಿಗಳ ಭೌಗೋಳಿಕ ಪ್ರದೇಶದ 20% ಕ್ಕಿಂತ ಹೆಚ್ಚು ಭಾಗವನ್ನು ಜೀವವೈವಿಧ್ಯ ಪರಿಸರ-ಸೂಕ್ಷ್ಮ ಪ್ರದೇಶ ಎಂದು ಸೇರಿಸಲಾಗಿದೆ, ಇದು ಅತ್ಯಂತ ಅವೈಜ್ಞಾನಿಕವಾಗಿದೆ.
ಘೋಷಿತ ಸೂಕ್ಷ್ಮ ಪ್ರದೇಶದ ಯಾವುದೇ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸಮೀಕ್ಷೆ ಇಲ್ಲ.
ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳು ಇರುವುದರಿಂದ ಹೊಸ ಮಾನದಂಡದ ಅಗತ್ಯವಿಲ್ಲ.
ಸೂಕ್ಷ್ಮ ಪ್ರದೇಶವೆಂದು ಘೋಷಿಸುವುದರಿಂದ ಗ್ರಾಮಸ್ಥರು ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮವನ್ನು ಕಸ್ತೂರಿ ರಂಗನ್ ವರದಿ ಪರಿಗಣಿಸಿಲ್ಲ.
ಸೂಕ್ಷ್ಮ ಪ್ರದೇಶದ ಘೋಷಣೆಯಿಂದ ಜಿಲ್ಲೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹಾನಿಯಾಗಲಿದ್ದು, ನೈಸರ್ಗಿಕ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತದೆ.
ಇದು ಉಪಗ್ರಹ ಆಧಾರಿತ ಸಮೀಕ್ಷೆಯಾಗಿರುವುದರಿಂದ, ಅರೆಕಾ, ಕಾಫಿ, ರಬ್ಬರ್, ತೆಂಗಿನ ತೋಟ ಮತ್ತು ಇತರ ಎಲ್ಲಾ ಕೃಷಿ ಮತ್ತು ಕೃಷಿ ತೋಟಗಾರಿಕಾ ಪ್ರದೇಶಗಳನ್ನು ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಹಾಗಾಗಿ ಹಾಗೆ ಮಾಡುವುದು ಸಹಜ ವಿರೋಧಾಭಾಸ.
ಘೋಷಿತ ಸೂಕ್ಷ್ಮ ಪ್ರದೇಶದಲ್ಲಿ ಹಸಿರೀಕರಣ ಪ್ರದೇಶದಿಂದ ಖಾಸಗಿ ವ್ಯಕ್ತಿಗಳು ಮತ್ತು ಅರಣ್ಯವಾಸಿಗಳ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಯ ಹಸಿರೀಕರಣ ಪ್ರದೇಶದ ಭೌತಿಕ ಸಮೀಕ್ಷೆಯಿಂದ ನೈಸರ್ಗಿಕ ಅರಣ್ಯ ಗಡಿಯನ್ನು ಗುರುತಿಸಲಾಗಿಲ್ಲ.
ಘೋಷಿತ ಗ್ರಾಮ ಪ್ರದೇಶದ ಸರ್ವೆ ನಂಬರ್ ಕೂಡ ಅವೈಜ್ಞಾನಿಕವಾಗಿ ವರದಿಯಾಗಿದೆ. ಅಲ್ಲದೇ ಮಲೆನಾಡಿನ ಗ್ರಾಮ ಮತ್ತು ಕುಗ್ರಾಮಗಳನ್ನು ಗುರುತಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಘೋಷಿತ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಮೂಲಭೂತವಾದ ಅವನತಿಯತ್ತ ಸಾಗಿದೆ. ನೀರು, ರಸ್ತೆ ಅಭಿವೃದ್ಧಿ ಇತ್ಯಾದಿ ಹಕ್ಕುಗಳು ಮತ್ತು ಎಲ್ಲಾ ಸಾಂಪ್ರದಾಯಿಕ ನಾಗರಿಕ ಸೌಕರ್ಯಗಳು ಇದರಿಂದ ಮಾನವ ಹಕ್ಕುಗಳು ಮತ್ತು ಬದುಕುವ ಹಕ್ಕಿನ ಉಲ್ಲಂಘನೆಯಾಗುತ್ತದೆ.
ಕಸ್ತೂರಿ ರಂಗನ್ ವರದಿಯು ಸಾಂಪ್ರದಾಯಿಕ ಕೃಷಿ ಮತ್ತು ತೋಟ ಆಧಾರಿತ ಕೈಗಾರಿಕಾ ಚಟುವಟಿಕೆಗಳನ್ನು ಗುರುತಿಸಲು ವರದಿ ವಿಫಲವಾಗಿದೆ.
ಪ್ರದೇಶವನ್ನು ಇಎಸ್‌ಎ ಎಂದು ಘೋಷಿಸುವ ಕುರಿತು ರಾಜ್ಯಗಳ ಸಲಹೆಗಳನ್ನು ಮರು ಪರಿಶೀಲಿಸಲು ಭಾರತ ಸರ್ಕಾರವು ಐಎಎಸ್ ಅಧಿಕಾರಿ ಸಂಜಯ್ ಕುಮಾರ್ (ನಿವೃತ್ತ) ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ನಾವು ಕಲಿತಿದ್ದೇವೆ, ಆದಾಗ್ಯೂ ಸಮಿತಿಯ ಸದಸ್ಯರು ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ ಪ್ರದೇಶ ಅಥವಾ ಪ್ರತಿಕ್ರಿಯೆ ಪಡೆಯಲು ಜನರೊಂದಿಗೆ ಮಾತನಾಡಿ.
ಸ್ಥಳೀಯ ಪ್ರತಿನಿಧಿಯನ್ನು ಒಳಗೊಂಡಿರುವ ಹೊಸ ತಜ್ಞರ ಸಮಿತಿಯನ್ನು ರಚಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ವರದಿಯನ್ನು ಏಕಪಕ್ಷೀಯ ಮತ್ತು ಪೂರ್ವಾಗ್ರಹ ಎಂದು ಪರಿಗಣಿಸಲಾಗುತ್ತದೆ ಎಂದು ಒಕ್ಕೂಟ ಕೇಂದ್ರ ಪರಿಸರ ಇಲಾಖೆಗೆ ಪತ್ರ ಬರೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page