Thursday, June 20, 2024

ಸತ್ಯ | ನ್ಯಾಯ |ಧರ್ಮ

ಮಾಲಿನ್ಯ ತಡೆ ನಿಯಮ ಧಿಕ್ಕರಿಸಿದ ಉದ್ಯಮಗಳು: ಬೈಕಂಪಾಡಿಯಲ್ಲಿ ಪ್ರತಿಭಟನೆ

ಮಂಗಳೂರು: ಮಾಲಿನ್ಯ ತಡೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಕಾರ್ಖಾನೆಗಳು ಮತ್ತು ಎಸ್‌ ಇ ಜಡ್‌ ವಿರುದ್ಧ ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ಇಂದು ಬೃಹತ್‌ ಪ್ರತಿಭಟನೆ ನಡೆಸಿತು.

ಫಲ್ಗುಣಿ ನದಿ ಸಹಿತ ಸುತ್ತಲ ಗ್ರಾಮಗಳ ನೆಲ ಜಲವ‌ನ್ನು ವಿಷಮಯಗೊಳಿಸುತ್ತಿರುವ, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ MRPL, sez, ಅದಾನಿಯ ವಿಲ್ಮಾ, ಬಾಬಾ ರಾಮದೇವ್ ಮಾಲಕತ್ವದ ರುಚಿಗೋಲ್ಡ್ ಮತ್ತಿತರ ಕೈಗಾರಿಕೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಲಾಯಿತು.

ಜೋಕಟ್ಟೆ, ಕಳವಾರು ವ್ಯಾಪ್ತಿಯಲ್ಲಿ 27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರಿ ಆದೇಶ ಧಿಕ್ಕರಿಸುತ್ತಿರುವ MRPLಗೆ ಬೀಗ ಜಡೆಯಲು ಒತ್ತಾಯಿಸಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮುಂಗಾರು ಜಂಕ್ಷನ್ ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂಭಾಗ ನೆರೆದು ಪ್ರತಿಭಟನೆ ನಡೆಸಿದರು.

ಡಿವೈಎಫ್‌ ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಸೇರಿದಂತೆ ನಾಗರಿಕ ಸಮಿತಿಯ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು