Home ದೆಹಲಿ ಕ್ಷೇತ್ರ ಮರುವಿಂಗಡಣೆ ಮತ್ತು ಸಂಸತ್ ಅಧಿವೇಶನ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ, ಸರ್ವಪಕ್ಷ ಸಭೆಗೆ...

ಕ್ಷೇತ್ರ ಮರುವಿಂಗಡಣೆ ಮತ್ತು ಸಂಸತ್ ಅಧಿವೇಶನ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ, ಸರ್ವಪಕ್ಷ ಸಭೆಗೆ ಆಗ್ರಹ

0

ಕ್ಷೇತ್ರ ಮರುವಿಂಗಡಣೆ (Delimitation), ಸಂಸತ್ತಿನ ಮುಂಗಾರು ಅಧಿವೇಶನದ ಮುಕ್ತಾಯದಲ್ಲಿ (prorogation) ಆಗುತ್ತಿರುವ ವಿಳಂಬ ಹಾಗೂ ಸಂಭವನೀಯ ವಿಶೇಷ ಅಧಿವೇಶನದ ಕುರಿತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ನಿನ್ನೆ ಸಂಜೆ ದೂರದರ್ಶನ ಸಂದರ್ಶನವೊಂದರಲ್ಲಿ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಬಗ್ಗೆ ಪ್ರಸ್ತಾಪಿಸಿರುವುದನ್ನು ಉಲ್ಲೇಖಿಸಿರುವ ಖರ್ಗೆ, ಈ ನಿರ್ಧಾರವನ್ನು ಮುಂದುವರಿಸುವ ಮುನ್ನ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕೆಂದು ಒತ್ತಾಯಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸರ್ಕಾರದ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು ಮತ್ತು ಅಂತಹ ಪ್ರಸ್ತಾವನೆಗಳನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳಿಗೆ ವಿವರವಾಗಿ ಅಧ್ಯಯನ ಮಾಡಲು ಸಾಕಷ್ಟು ಸಮಯ ನೀಡಬೇಕು ಎಂದು ಅವರು ಈ ಹಿಂದಿನ ಜುಲೈ 16 ರ ಪತ್ರದ ಮನವಿಯನ್ನು ಪುನರುಚ್ಚರಿಸಿದ್ದಾರೆ.

ಈ ವಿಷಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದು ತಿಳಿಸಿರುವ ಅವರು ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:

  1. ಲೋಕಸಭೆಯ ಹಾಲಿ ಸಂಖ್ಯಾಬಲವಾದ 543 ಸ್ಥಾನಗಳನ್ನು ಮುಂದಿನ 25 ವರ್ಷಗಳವರೆಗೆ ಹಾಗೆಯೇ ಮುಂದುವರಿಸಬೇಕು.
  2. ಲೋಕಸಭೆಯಲ್ಲಿ ಹಾಲಿ ಇರುವ ರಾಜ್ಯವಾರು ಸ್ಥಾನಗಳ ಬಲವನ್ನೂ ಮುಂದಿನ 25 ವರ್ಷಗಳವರೆಗೆ ಮುಂದುವರಿಸಬೇಕು.
  3. 2029 ರ ಲೋಕಸಭಾ ಚುನಾವಣೆಯಿಂದಲೇ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು (1/3) ಮೀಸಲಾತಿಯನ್ನು ಜಾರಿಗೆ ತರಬೇಕು.

ಇದು ದೇಶಕ್ಕೆ ಅತ್ಯಂತ ಮಹತ್ವದ ವಿಷಯವಾಗಿದ್ದು, ಏಪ್ರಿಲ್ 16 ಮತ್ತು 17 ರಂದು ಯತ್ನಿಸಿದಂತೆ ಏಕಪಕ್ಷೀಯವಾಗಿ ಅಥವಾ ಬಲವಂತವಾಗಿ ನಿರ್ಧಾರಗಳನ್ನು ಹೇರಲು ಪ್ರಯತ್ನಿಸಬಾರದು ಎಂದು ಖರ್ಗೆ ಪ್ರಧಾನಿಯವರನ್ನು ಆಗ್ರಹಿಸಿದ್ದಾರೆ.

You cannot copy content of this page

Exit mobile version