ಮಾಜಿ ಸಿಎಂ ಜಗನ್ ಮೋಹನ್‌ ರೆಡ್ಡಿ ಕಾರಿಗೆ ಸಿಲುಕಿ ವ್ಯಕ್ತಿ ಸಾವು

ವಿಜಯವಾಡ: ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಾಹನಕ್ಕೆ ಸಿಲುಕಿ ವೈಎಸ್‌ಆರ್‌ಸಿಪಿ ಕಾರ್ಯಕರ್ತನೊಬ್ಬ ಕೊನೆಯುಸಿರೆಳೆದ ಘಟನೆ ಬುಧವಾರ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜಗನ್ ಮೇಲೆ ಹೂವುಗಳನ್ನು ಸುರಿಸಲು ಪ್ರಯತ್ನಿಸುತ್ತಿದ್ದಾಗ ಜಾರಿಬಿದ್ದು ವಾಹನದ ಮುಂದೆ ಬಿದ್ದು 55 ವರ್ಷದ ಚೀಲಿ ಸಿಂಗಯ್ಯ ಮರಣಹೊಂದಿದ್ದಾರೆ. ಅಧಿಕಾರಿಗಳ ಪ್ರಕಾರ, ವಾಹನದ ಮುಂಭಾಗದ ಬಲ ಚಕ್ರ ಆ ವ್ಯಕ್ತಿಯ ಕುತ್ತಿಗೆಯ ಮೇಲೆ ಹರಿದಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಗನ್ ಅವರನ್ನು ಹುಚ್ಚೆದ್ದು ಸ್ವಾಗತಿಸಲು ಮುಂದಾಗಿದ್ದರಿಂದಾಗಿ ಈ ಘಟನೆ ಸಂಭವಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಸಿಂಗಯ್ಯ ವೆಂಗಲಾಯಪಲೆಂ ಗ್ರಾಮದ ನಿವಾಸಿಯಾಗಿದ್ದು, ಜಗನ್ ಅವರನ್ನು ಹೂವುಗಳಿಂದ ಸ್ವಾಗತಿಸಲು ಹೋಗಿದ್ದರು.

Related Articles

ಇತ್ತೀಚಿನ ಸುದ್ದಿಗಳು