Tuesday, June 18, 2024

ಸತ್ಯ | ನ್ಯಾಯ |ಧರ್ಮ

ʼಮನ್‌-ಕಿ-ಬಾತ್‌ʼ ನಲ್ಲಿ ನಿಮ್ಮ ಅಭಿಪ್ರಾಯಗಳಿಗೂ ಅವಕಾಶ : ನರೇಂದ್ರ ಮೋದಿ

ನವದೆಹಲಿ : ಸೆಪ್ಟಂಬರ್‌ 25 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ʼಮನ್‌-ಕಿ-ಬಾತ್‌ʼ ಕಾರ್ಯಕ್ರಮಕ್ಕೆ ಸ್ವತಃ ಜನಗಳೇ ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.

1800–11-7800 ನಂಬರ್‌ಗೆ ಕರೆ ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಬಹುದು. ಸೆಪ್ಟಂಬರ್‌ 23ರ ವರೆಗೆ ಕರೆಗಳನ್ನು ಸ್ವೀಕರಿಸಲಾಗುವುದು ಎಂದು ರಾಜ್ಯ ಬಿಜೆಪಿ ಸರ್ಕಾರ ಟ್ವೀಟ್‌ ಮಾಡುವ ಮುಖಾಂತರ ತಿಳಿಸಿದೆ.

ಹಾಗೆಯೇ ʼನಿಮ್ಮ ಇನ್ ಪುಟ್‌ ಗಳಿಗಾಗಿ ನಾನು ಎದುರು ನೋಡುತ್ತಿರುವೆʼ ಎಂದು ಸ್ವತಃ ಮೋದಿಯವರೇ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು