Thursday, December 5, 2024

ಸತ್ಯ | ನ್ಯಾಯ |ಧರ್ಮ

ಕಡಲೆ ಹಾಗೂ ಜೋಳದಲ್ಲಿ ಕೀಟ ಹಾಗೂ ರೋಗಗಳ ಬಾಧೆಯ ತಡೆಗಟ್ಟಲು ನಿರ್ವಹಣೆ ಕ್ರಮಗಳು

ಧಾರವಾಡ ಡಿಸೆಂಬರ 05: ಧಾರವಾಡ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ 1,81,595 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮುಖ್ಯ ಹಿಂಗಾರು ಬೆಳೆಗಾಳಾದ ಕಡಲೆ ಹಾಗೂ ಜೋಳದಲ್ಲಿ ಅಲ್ಲಲ್ಲಿ ಕೀಟ ಹಾಗೂ ರೋಗಗಳ ಬಾಧೆ ಕಂಡು ಬರುತ್ತಿದ್ದು ರೈತರು ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು.

ಕಡಲೆಯಲ್ಲಿ ಕಾಯಿ ಕೊರಕ (ಹೆಲಿಕೋವರ್ಪಾ) ನಿರ್ವಹಣೆ: ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ,ಮಂಡ್ಯಾಳ) ಹೊಲದ ತುಂಬೆಲ್ಲಾ ಚೆಲ್ಲಬೇಕು, ಇದ್ದರಿಂದ ಪಕ್ಷಿಗಳು ಆರ್ಕಷಿತಗೊಂಡು ಕೀಡೆಗಳನ್ನು ತಿನ್ನಲು ಪೋತ್ಸಾಹಿಸಿದಂತೆ ಆಗುತ್ತದೆ.

2 ಮಿ.ಲೀ. ಕ್ಲೋರಫೆನಾಪೈರ್ ಶೇ. 24 ಎಸ್.ಸಿ. ಅಥವಾ 0.075 ಮಿ.ಲೀ ಫ್ಲೂಬೆಂಡಿಯಾಮೈಡ್ 39.35 ಎಸ್.ಸಿ ಅಥವಾ ಕ್ಲೋರೆಂಟ್ರಿನಾಲಿಪ್ರೋಲ 18.5 ಎಸ್.ಸಿ., 0.15 ಮಿ. ಲೀ. ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ 5 ಎಸ್.ಜಿ. ಅಥವಾ 0.1 ಮಿ.ಲೀ. ಸ್ಪೈನೊಸ್ಯಾಡ್ 45 ಎಸ್.ಸಿ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.

ಜೋಳದಲ್ಲಿ ಫಾಲ್ ಸೈನಿಕಹುಳು ನಿರ್ವಹಣೆ: ಕೀಡೆಯ ನಿಯಂತ್ರಣಕ್ಕೆ ನೊಮೊರಿಯಾ ರಿಲೈಯೆ, ಮೆಟಾರೆಜಿಯಂ ಅನಿಸೋಪ್ಲೇ ಹಾಗೂ ಬ್ಯಾಸಿಲೆಸ್ ಥುರಿಂಜಿಯಸ್ಸಿಸ್ ನಂತಹ ಜೀವಾಣುಗಳನ್ನು ಬಳಸಿ ಯಶಸ್ವಿ ಹತೋಟಿಯನ್ನು ಮಾಡಬಹುದು.

ಬಿತ್ತನೆಗೆ ಮೊದಲು ಪ್ರತಿ ಕಿ.ಗ್ರಾಂ. ಬೀಜಕ್ಕೆ 5 ಮೀ. ಲೀ ಸೈಯಾಂಟ್ರಾನಿಲಿಪ್ರೋಲ್ ಶೇ. 19.8 + ಥೈಯೋಮಿಥಾಕ್ಸಾಮ್ 19.8 ಡಬ್ಲೂ.ಡಬ್ಲೂ.ಎಫ್.ಎಸ್ ಸಂಯುಕ್ತ ಕೀಟನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ತದನಂತರ ಬೆಳೆ 30 ದಿನಗಳಿದ್ದಾಗ ಕ್ಲೋರ್ಯಾಂಟ್ರನಿಲಿಪ್ರೋಲ್ @ 0.30 ಮೀಲೀ ಅಥವಾ ಸ್ಪೈನೊಟೆರ್ಯಾಮ್ 11.7%ಎಸ್.ಸಿ @ 0.50 ಮೀಲೀ ಕೀಟನಾಶಕವನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಬೆಳೆಯ ಸುಳಿಯ ಮೇಲೆ ಬೀಳುವಂತೆ ಸಿಂಪಡಿಸಬೇಕು. ಪುನಃ ಅವಶ್ಯವಿದ್ದಲ್ಲಿ 15 ದಿನಗಳ ಅಂತರದಲ್ಲಿ ಕೀಟನಾಶಕಗಳ ಮರುಸಿಂಪರಣೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page