Wednesday, July 2, 2025

ಸತ್ಯ | ನ್ಯಾಯ |ಧರ್ಮ

ನಾನು ಇರುವ ತನಕವೂ ದರ್ಶನ್‌ ನನ್ನ ಮಗನೇ- ಸುಮಲತಾ ಅಂಬರೀಷ್

ಮಂಡ್ಯನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ ಎಂದು ಬಿಜೆ‍ಪಿ ನಾಯಕಿ ಸುಮಲತಾ ಅಂಬರೀಷ್ ಹೇಳಿದರು.

ಇಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘‌ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಮೊದಲಿಗೆ ದರ್ಶನ್‌ ಆರೋಗ್ಯ ಸುಧಾರಿಸಬೇಕು.

ಅವರಿಗೆ ಸಾಕಷ್ಟು ಸವಾಲುಗಳಿವೆ. ಆದರೆ ಅವರು ಆರೋಪಮುಕ್ತರಾಗಿ ಹೊರಬರಲಿದ್ದಾರೆ ಎನ್ನುವ ನಂಬಿಕೆ ನನಗಿದೆʼ ಅವರು ಹೇಳಿದರು

ʼನಮ್ಮ ಸಂಬಂಧ ಮೊದಲಿನಂತೆಯೇ ಇದೆ. ನಾನು ಬದುಕಿರುವ ತನಕವೂ ದರ್ಶನ್‌ ಮಗನೇ ಆಗಿರುತ್ತಾನೆ. ಅವನಿಗೆ ಎಲ್ಲವೂ ಒಳ್ಳೆಯದಾಗಬೇಕು ಎನ್ನುವುದು ನನ್ನ ಬಯಕೆ. ನಿಜ ಹೊರಬಂದು ದರ್ಶನ್‌ ನಿರಪರಾಧಿಯೆನ್ನುವುದು ಸಾಬೀತಾಗಬೇಕು ಎನ್ನುವುದು ನನ್ನ ಆಸೆ” ಎಂದು ಸುಮಲತಾ ತಿಳಿಸಿದರು.

‘ದರ್ಶನ್‌ಗೆ ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿಗೆ ಇಷ್ಟವಿಲ್ಲ ಎನ್ನುವ ಮಾತು ನನ್ನ ಗಮನಕ್ಕೆ ಬಂದಿದೆ. ಸರ್ಜರಿಯಾದರೆ ಆರೋಗ್ಯ ಸುಧಾರಣೆಗೆ ತುಂಬ ಸಮಯ ಬೇಕಾಗುತ್ತದೆ. ದರ್ಶನ್‌ ಇಲ್ಲದ ಕಾರಣ ಸಿನಿಮಾ ರಂಗ ಸಾಕಷ್ಟು ನಷ್ಟ ಅನುಭವಿಸುತ್ತಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page