Thursday, June 13, 2024

ಸತ್ಯ | ನ್ಯಾಯ |ಧರ್ಮ

ಸೆ.28 | ಮಂಡ್ಯ ಕನ್ನಡ ಸಂಘದಿಂದ ಹಾಮಾನಾ ಪ್ರಶಸ್ತಿ ಪ್ರಧಾನ

ಮಂಡ್ಯ: ಕನ್ನಡದ ಪ್ರಸಿದ್ಧ ಜಾನಪದ ವಿದ್ವಾಂಸ, ಹಿರಿಯ ಅಂಕಣಕಾರ, ಮಾಜಿ ಕುಲಪತಿ, ಮೈಸೂರು ವಿ.ವಿ.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ದೀರ್ಘಕಾಲಿಕ ನಿರ್ದೇಶಕ. ಕನ್ನಡದ ಪ್ರಮುಖ ಚಿಂತಕ ಡಾ. ಹಾಮಾನಾ ಅವರ ನೆನಪಿನಲ್ಲಿ ಮಂಡ್ಯದ ಕರ್ನಾಟಕ ಸಂಘವು ನೀಡುವ ಡಾ. ಹಾಮಾನಾ ಪ್ರಶಸ್ತಿಯನ್ನು ಇದೇ ಸೆ.28ರಂದು ಪುರಸ್ಕೃತರಿಗೆ ನೀಡಿ ಸನ್ಮಾನಿಸಲಾಗುತ್ತಿದೆ.

ಕರ್ನಾಟಕ ಸಂಘವು ಶ್ರೀಯುತರ ಹೆಸರಿನಲ್ಲಿ ನಾಲ್ಕು ವಿವಿಧ ಪ್ರಕಾರಗಳಾದ ಭಾಷಾವಿಜ್ಞಾನ, ಅಂಕಣ ಬರಹ, ಜಾನಪದ ಹಾಗೂ ಕನ್ನಡ ಕಟ್ಟುವಿಕೆಯಲ್ಲಿ ದುಡಿದ ಓರ್ವ ಹಿರಿಯರಿಗೆ, ಓರ್ವ ಕಿರಿಯರಿಗೆ, ಪ್ರತಿವರ್ಷ ತಲಾ 50,000, 25,000 ರೂ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸುತ್ತಿದೆ.

ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು 28.09.2023 ಗುರುವಾರ ಬೆಳಿಗ್ಗೆ 11 ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನ ಕರ್ನಾಟಕ ಸಂಘದ ಆವರಣ, ಮಂಡ್ಯದಲ್ಲಿ ಸಂಘಟಕರು ಆಯೋಜಿಸಿದ್ದಾರೆ.

ಮಂಡ್ಯದ ಕರ್ನಾಟಕ ಸಂಘ 2023ನೇ ಸಾಲಿಗೆ ಕೊಡಮಾಡುವ ಡಾ.ಹಾಮಾನಾ ಪ್ರಶಸ್ತಿಯನ್ನು (ಅಂಕಣ ಸಾಹಿತ್ಯ ಹಿರಿಯ ಪ್ರಶಸ್ತಿ), 1953ರಲ್ಲಿ ಚಿತ್ರದುರ್ಗದಲ್ಲಿ ಜನಿಸಿ, ಬೆಂಗಳೂರಿನ ಪ್ರಖ್ಯಾತ ಎನ್‌ಜಿಇಎಫ್ ಕಾರ್ಖಾನೆಯಲ್ಲಿ ಭಾಷಾಂತರ ಹಾಗೂ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 75 ಕೃತಿಗಳ ಪ್ರಕಸಿರುವ ಹಾಗೂ ಕಥೆಗಾರ್ತಿಯಾಗಿ, ಕವಯಿತ್ರಿಯಾಗಿ, ಜಾನಪದ ತಜ್ಞೆಯಾಗಿ, ಅನುವಾದಕಿಯಾಗಿ, ಅಂಕಣಗಾರ್ತಿಯಾಗಿ ಹೆಸರು ಮಾಡಿರುವ ಡಾ. ಸಂಧ್ಯಾರೆಡ್ಡಿ ಪಡೆದಿದ್ದಾರೆ. ಸಂಘವು 50,000 ರೂ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸುತ್ತಿದೆ.

ಮಂಡ್ಯದ ಕರ್ನಾಟಕ ಸಂಘ 2023ನೇ ಸಾಲಿಗೆ ಕೊಡಮಾಡುವ ಡಾ.ಹಾಮಾನಾ ಪ್ರಶಸ್ತಿಯನ್ನು (ಅಂಕಣ ಸಾಹಿತ್ಯ ಯುವ ಪ್ರಶಸ್ತಿ) ತುಮಕೂರು ವಿಶ್ವವಿದ್ಯಾನಿಲಯದ ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ. ಅಲ್ಲಿನ ಪ್ರಸಾರಾಂಗದ ನಿರ್ದೇಶಕರಾಗಿ, ಡಿ.ದೇವರಾಜ ಅರಸು ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಣೆ. ಸಂಶೋಧನ ಪತ್ರಿಕೆ ಲೋಕಜ್ಞಾನದ ಸಂಪಾದಕ, ಕಲಾತತ್ವ ಕೋಶದ ನಾಲ್ಕು ಬೃಹತ್ ಸಂಪುಟಗಳ ಕನ್ನಡ ಅನುವಾದ, ಸಂಪಾದನೆ, ಸಂಶೋಧನೆ, ಪ್ರಕಟಣಾ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಡಾ.ನಿತ್ಯಾನಂದ ಬಿ.ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 25,000 ರೂ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ.

ಪ್ರೊ.ಬಿ.ಕೆ.ಚಂದ್ರಶೇಖರ್, ಡಾ.ಎನ್.ಎಸ್.ರಾಮೇಗೌಡ, ಶ್ರೀ ವಿವೇಕ ಹೆಗ್ಗಡೆ, ಶ್ರೀ ರಾಜಶೇಖರ ಪತಂಗೆ ಮೊದಲಾದವರು ಈ ಕಾರ್ಯಕರ್ಮದಲ್ಲಿ ಉಪಸ್ಥಿತರಿರಲಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು