Sunday, June 16, 2024

ಸತ್ಯ | ನ್ಯಾಯ |ಧರ್ಮ

ಆರ್.ಟಿ.ಐ: ಕೇಂದ್ರದ ಪೋರ್ಟಲ್ ನಿಂದ ಅನೇಕ ವರ್ಷಗಳ ಮಾಹಿತಿ ಕಾಣೆ!

ದೇಶದಲ್ಲಿ ಮಾಹಿತಿ ಆರ್.ಟಿ.ಐ (RTI – Right To Information Act) ಯ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಲಾಗುತ್ತಿದೆ, ಕೇಂದ್ರ ಸರ್ಕಾರದ RTIOnline ಪೋರ್ಟಲ್ ನಿಂದ ಹಿಂದಿನ ಲಕ್ಷಗಟ್ಟಲೆ ಆರ್‌ಟಿಐ ಅರ್ಜಿಗಳ ದಾಖಲೆಗಳು ಕಣ್ಮರೆಯಾಗಿವೆ ಎಂದು ದಿ ಹಿಂದೂ ವರದಿ ಮಾಡಿದೆ.

ಆರ್‌ಟಿಐಆನ್‌ಲೈನ್ ಎಂಬುದು ನಾಗರಿಕರು ಸಾರ್ವಜನಿಕ ಮಾಹಿತಿ ಹಾಗೂ ಕೇಂದ್ರ ಸರ್ಕಾರದ ದಾಖಲೆಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾದ ಪೋರ್ಟಲ್‌ ಆಗಿದ್ದು. ದಿ ಹಿಂದೂ ಇಬ್ಬರು ಆರ್‌ಟಿಐ ಕಾರ್ಯಕರ್ತರ ಅರ್ಜಿಗಳ ಮಾದರಿಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿ ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಎಂಬವರ ಅಕೌಂಟ್‌ ನಲ್ಲಿ 2022 ಕ್ಕಿಂತ ಹಿಂದಿನ ಮಾಹಿತಿಗಳನ್ನು ಅಳಿಸಿಹಾಕಿರುವುದು ಕಂಡು ಬಂದಿದೆ.

ಕೆಲವು ತಿಂಗಳುಗಳಿಂದ ಆರ್‌ಟಿಐ ಆನ್‌ಲೈನ್ ಪೋರ್ಟಲನ್ನು ಸರ್ಕಾರ ಉಪಯೋಗಿಸದೆ ಹೊಸಬರು ತಮ್ಮ ನೋಂದಣಿಯಾಗದಂತೆ ನಿಲ್ಲಿಸಿದೆ. ಬಳಸದ ಅಕೌಂಟ್‌ಗಳನ್ನು ತೆಗೆದುಹಾಕುವ ಎಚ್ಚರಿಕೆ ನೀಡಿದ್ದು, 2019 ರ ಮೊದಲು ಸಲ್ಲಿಸಲಾದ ಎಲ್ಲಾ ಆರ್‌ಟಿಐಗಳನ್ನು ಸರ್ವರ್‌ನಿಂದ ಅಳಿಸಲಾಗಿದೆ. ಆದರೆ ಯಾವುದೇ ಆರ್‌ಟಿಐ ಪೋರ್ಟಲ್ ಬಳಕೆದಾರರಿಗೆ ಇದರ ಬಗ್ಗೆ ಅಧಿಕೃತ ಸೂಚನೆ ನೀಡಲಾಗಿಲ್ಲ ಎಂದು ದಿ ವೈರ್‌ ವರದಿ ಮಾಡಿದೆ.

ಆರ್‌ಟಿಐಆನ್‌ಲೈನ್ ಪೋರ್ಟಲ್ ನಲ್ಲಿ 2013 ರಿಂದ 2022 ರವರೆಗೆ 58.3 ಲಕ್ಷ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಗೆ ಸಲ್ಲಿಸಲಾಗಿದೆ. ಅರ್ಜಿಗಳ ಸಂಖ್ಯೆಯು 2022 ರಲ್ಲಿ 12.6 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಸದ್ಯ RTIOnline ಪೋರ್ಟಲ್‌ ನಿಷ್ಕ್ರಿಯಗೊಂಡಿದ್ದು ಯಾವುದೇ ಅರ್ಜಿಗಳನ್ನು ಯಾವುದೇ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. (ಸಂಜೆ 4.30, 24-08-2023)

ಮಾಹಿತಿ ಹಕ್ಕು ಕಾಯಿದೆ, 2005 ಮಹತ್ವದ ಕಾನೂನಾಗಿದ್ದು, ಇದು ಪ್ರತಿಯೊಬ್ಬ ನಾಗರಿಕನಿಗೂ ಸಾರ್ವಜನಿಕ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕನ್ನು ನೀಡುತ್ತದೆ. ಈ ಮೂಲಕ ಈ ಕಾಯ್ದೆ ಆಡಳಿತ ಹಾಗೂ ಸರ್ಕಾರಕ್ಕೆ ಪಾರದರ್ಶಕತೆಯನ್ನು ನೀಡುತ್ತದೆ. ಆದರೆ 2014 ರ ನಂತರ ಆರ್.ಟಿ.ಐಯ ಕಾರ್ಯಕ್ಷಮತೆಯ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.

ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಅಂಗೀಕರಿಸಲಾಗಿರುವ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ (Digital Personal Data Protection Bill) ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರುತ್ತದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. ಈ ಹೊಸ ಡೇಟಾ ಬಿಲ್ ಸಾರ್ವಜನಿಕರ ಹಿತಾಸಕ್ತಿಯನ್ನು ಲೆಕ್ಕಿಸದೆ ಸರ್ಕಾರಿ ಏಜೆನ್ಸಿಗಳು ಯಾವುದೇ ರೀತಿಯ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು