Friday, August 22, 2025

ಸತ್ಯ | ನ್ಯಾಯ |ಧರ್ಮ

ಮ್ಯಾರಿಟಲ್‌ ರೇಪ್ ಪ್ರಕರಣ ವಿಚಾರಣೆಯಿಂದ ಹಿಂದಕ್ಕೆ ಸರಿದ ಸಿಜೆಐ

ಹೊಸದೆಹಲಿ: ಮ್ಯಾರಿಟಲ್‌ ರೇಪ್ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಬುಧವಾರ ಕೆಳಗಿಳಿದ್ದಾರೆ. ಅರ್ಜಿದಾರರು ಐಪಿಸಿಯ ಸೆಕ್ಷನ್ 375 ರ ಎರಡನೇ ನಿಬಂಧನೆಯನ್ನು ರದ್ದು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇವುಗಳ ಮೇಲಿನ ತನಿಖೆ ಸದ್ಯದಲ್ಲಿಯೇ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಪತ್ನಿಯ ಒಪ್ಪಿಗೆಯಿಲ್ಲದೆ ಗಂಡ ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಅತ್ಯಾಚಾರ ಪ್ರಕರಣವನ್ನು ದಾಖಲಿಸದೆ ವಿನಾಯಿತಿ ನೀಡುವುದು ಮಹಿಳಾ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಈ ಕುರಿತು ದೀಪಾವಳಿ ರಜೆಗೂ ಮುನ್ನವೇ ತೀರ್ಪನ್ನು ಪ್ರಕಟಿಸುವ ಭರವಸೆ ಇದೆ, ಆದರೆ ಸದ್ಯದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ ಎಂದು ಸಿಜೆಐ ಹೇಳಿದ್ದಾರೆ. ನಂತರ ಪೀಠ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು. ಸಿಜೆಐ ಚಂದ್ರಚೂಡ್ ಅವರು ಮುಂದಿನ ತಿಂಗಳು 11ರಂದು ನಿವೃತ್ತರಾಗಲಿದ್ದಾರೆ. ಅವರ ಅಧಿಕಾರಾವಧಿಯ ಕೊನೆಯ ಕೆಲಸದ ದಿನ ಮುಂದಿನ ತಿಂಗಳು 8ನೇ ತಾರೀಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page