Thursday, May 1, 2025

ಸತ್ಯ | ನ್ಯಾಯ |ಧರ್ಮ

ಟ್ವಿಟ್ಟರ್ ನಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಕಡಿತ ; ಉದ್ಯೋಗಿಗಳಿಂದ ಬಹಿರಂಗ ಪತ್ರ

ಟ್ವಿಟ್ಟರ್ ನ 44 ಶತಕೋಟಿ ಡಾಲರ್ ಶೇರನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಟ್ವಿಟ್ಟರ್ ನ್ನು ತನ್ನ ವಶಕ್ಕೆ ಪಡೆದ ಬಹುಕೋಟಿ ಉದ್ಯಮಿ ಎಲಾನ್ ಮಸ್ಕ್, ಈಗ ಟ್ವಿಟರ್‌ನಲ್ಲಿನ 7,500 ಉದ್ಯೋಗಿಗಳಿಗೆ ಶಾಕ್ ನೀಡಿದ್ದಾರೆ.

ಕಂಪನಿಯ ಅತ್ಯಧಿಕ ಶೇರನ್ನು ತನ್ನದಾಗಿಸಿಕೊಂಡ ಎಲಾನ್ ಮಸ್ಕ್ ಕಂಪನಿಯಲ್ಲಿರುವ ಶೇ 75% ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಟ್ವಿಟ್ಟರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 7,500 ಮಂದಿಯನ್ನು ಕೆಲಸದಿಂದ ತಗೆದ ಎಲಾನ್ ಮಸ್ಕ್ ಕೇವಲ 2,000 ಮಂದಿಯನ್ನು ಉಳಿಸಿಕೊಂಡಿದ್ದಾರೆ.

“ಸಂಸ್ಥೆಯಲ್ಲಿ ಈ ವರೆಗೆ ಹೆಚ್ಚು ನಕಲಿ ಖಾತೆಗಳು ಹೊಂದಿದ್ದು, ಸಂಸ್ಥೆಯ ಉನ್ನತ ಅಧಿಕಾರಿಗಳು ಇಲ್ಲಿಯವರೆಗೆ ನಮ್ಮನ್ನು ವಂಚಿಸುತ್ತಾ ಬಂದಿದ್ದಾರೆ. ಹಾಗಾಗಿ, ನಕಲಿ ಖಾತೆಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸಂಪೂರ್ಣ ಟ್ವಿಟ್ಟರ್ ನ್ನು ಮಾರ್ಪಾಡು ಮಾಡಲು ಯೋಚಿಸಲಾಗಿದೆ” ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.

ಟ್ವಿಟ್ಟರ್ ಉದ್ಯೋಗಿಗಳಿಗೆ ಕೆಲಸದಿಂದ ತಗೆದ ಬಗ್ಗೆ ಎಲಾನ್ ಮಸ್ಕ್ ಯೋಜನೆಯನ್ನು ಪ್ರತಿಭಟಿಸಿ ಎಲಾನ್ ಮಸ್ಕ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಗೆ ಬಹಿರಂಗ ಪತ್ರ ಬರೆದ ಅಲ್ಲಿನ ಉದ್ಯೋಗಿಗಳು ಪ್ರತಿಭಟನೆಯ ಬೆದರಿಕೆ ಹಾಕಿದ್ದಾರೆ. ಪ್ರತಿಭಟನಾ ಪತ್ರಕ್ಕೆ ಎಷ್ಟು ಮಂದಿ ಸಹಿ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

“ಟ್ವಿಟ್ಟರ್ ಈಗಾಗಲೇ ಒಂದು ಬಲಿಷ್ಠ ಸಾರ್ವಜನಿಕ ವೇದಿಕೆಯಾಗಿದೆ. ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಹಿತ ಕಾಪಾಡುವುದು ಸಂಸ್ಥೆಯ ಕರ್ತವ್ಯವಾಗಬೇಕು. ಆದರೆ ಸಂಸ್ಥೆ ಶೇ 75% ರಷ್ಟು ಉದ್ಯೋಗ ಕಡಿತ ಮಾಡುವ ಮೂಲಕ ಗ್ರಾಹಕರಿಗೆ ಬಹಿರಂಗ ಬೆದರಿಕೆ ಒಡ್ಡಿದೆ. ಇದರಿಂದ ಸಂಸ್ಥೆಗೆ ದೊಡ್ಡ ಮಟ್ಟದ ಸಮಸ್ಯೆ ಎದುರಾಗಬಹುದು. ಇದೊಂದು ಅಜಾಗರುಕ ನಿರ್ಧಾರ. ಇದು ನಮ್ಮ ಗ್ರಾಹಕರ ನಂಬಿಕೆಯನ್ನು ಘಾಸಿಗೊಳಿಸುತ್ತದೆ” ಎಂದು ಉದ್ಯೋಗಿಗಳು ಎಲಾನ್ ಮಸ್ಕ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ “ಟ್ವಿಟರ್‌ನಲ್ಲಿ ಕಾರ್ಮಿಕರಿಗೆ ಕೊಟ್ಟ ಬೆದರಿಕೆ ಟ್ವಿಟರ್‌ನ ಸಂಪೂರ್ಣ ಭವಿಷ್ಯಕ್ಕೆ ಕೊಟ್ಟ ಬೆದರಿಕೆಯಾಗಿದೆ. ಈ ಬೆದರಿಕೆಗಳು ಕೆಲಸಗಾರರಾದ ನಮ್ಮ ಮೇಲೆ ಗಂಭೀರ ಪ್ರಭಾವ ಬೀರುತ್ತವೆ ಮತ್ತು ಟ್ವಿಟರ್ ಕಾರ್ಯಾಚರಣೆಯ ನೈಜತೆಗಳೊಂದಿಗೆ ಮೂಲಭೂತ ಸಂಪರ್ಕ ಕಡಿತವನ್ನು ಪ್ರದರ್ಶಿಸುತ್ತವೆ. ಈ ಉದ್ಯೋಗ ಕಡಿತ ನಮ್ಮ ಜೀವನೋಪಾಯಕ್ಕೆ, ಅಗತ್ಯ ಆರೋಗ್ಯದ ವಿಚಾರಕ್ಕೆ ಮತ್ತು ಹೊರದೇಶಗಳಲ್ಲಿ ಕೆಲಸ ಮಾಡುವವರು ಕೆಲಸ ಮಾಡುವ ದೇಶದಲ್ಲಿ ಉಳಿಯುವ ಸಾಮರ್ಥ್ಯಕ್ಕೆ ಬೆದರಿಕೆ ಹಾಕಿದಂತಾಗಿದೆ. ನಿರಂತರ ಕಿರುಕುಳ ಮತ್ತು ಬೆದರಿಕೆಗಳ ವಾತಾವರಣದಲ್ಲಿ ನಾವು ನಮ್ಮ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ನಮ್ಮ ಕೆಲಸವಿಲ್ಲದೆ, ಟ್ವಿಟರ್ ಇಲ್ಲ.” ಎಂದು ಸಂಸ್ಥೆಯ ಆಡಳಿತ ಮಂಡಳಿಗೆ ಬರೆದ ಸುಧೀರ್ಘ ಪತ್ರದಲ್ಲಿ ಉಲ್ಲೇಖಗೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page