ಸೂಡಾನ್ ನಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದ ಹಳ್ಳಿಯೊಂದರಲ್ಲಿ ಈ ಬಾರಿ ಅನಾಹುತ ನಡೆದಿದ್ದು, ಇಡೀ ಗ್ರಾಮದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ ಎಂದು ತಿಳಿದು ಬಂದಿದೆ.
ಸುಡಾನ್‌ನ ಮರ್ರಾ ಪರ್ವತದ ಭಾಗದಲ್ಲಿ ಆಗಸ್ಟ್‌ನಲ್ಲಿ ಯಥೇತ್ಛವಾಗಿ ಮಳೆಯಾಗಿದೆ. ಇದರಿಂದಾಗಿ ಭೂಕುಸಿತ ಉಂಟಾಗಿ ಮರ್ರಾ ಪರ್ವತದ ತಪ್ಪಲಲ್ಲಿರುವ ತರಾಸಿನ್ ಗ್ರಾಮ ಸಂಪೂರ್ಣ ಕೊಚ್ಚಿಹೋಗಿದೆ. ವಿಪತ್ತು ನಿರ್ವಹಣೆಗೆ ಈಗ ಈ ಇಡೀ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಬಂಡುಕೋರರ ಗುಂಪು ವಿಶ್ವಸಂಸ್ಥೆಯ ನೆರವು ಕೇಳಿದೆ.
ಈ ಹಿಂದೆ 2018ರಲ್ಲಿ ಟೌಕೋಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದರು. ಆದರೆ, ಈಗ ಸುಡಾನ್‌ನ ಡಾರ್ಫುರ್ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಪರಿಣಾಮ 1,000ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.