ಕೈರೋ : ಕಳೆದ 17 ತಿಂಗಳಿನಿಂದ ಯುದ್ಧದಿಂದ ನಲುಗಿ ಹೋಗಿದ್ದ ಗಾಜಾ ಪಟ್ಟಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.
ಒಂದೆಡೆ ಸಾವಿರಾರು ಜನರ ಸಾವು, ಮತ್ತೊಂದೆಡೆ ಆಸ್ತಿಪಾಸ್ತಿ ನಾಶ, ಮತ್ತು ಕೈಯಲ್ಲಿ ಜೀವ ಹಿಡಿದುಕೊಂಡು ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡುತ್ತಿದ್ದಾರೆ, ಇನ್ನೊಂದೆಡೆ ತಿಂಗಳುಗಳಿಂದ ಇವುಗಳಿಂದ ಬೇಸತ್ತ ಪ್ಯಾಲೆಸ್ಟೀನಿಯನ್ನರು, ಯುದ್ಧವನ್ನು ಕೊನೆಗೊಳಿಸಲು ಮತ್ತು ಹಮಾಸ್ ಸಂಘಟನೆಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟವನ್ನು ಆರಂಭಿಸಿದ್ದಾರೆ
2007 ರಿಂದ ತಮ್ಮನ್ನು ಆಳುತ್ತಿರುವ ಹಮಾಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ಯಾಲೆಸ್ಟೀನಿಯನ್ನರು ಬೃಹತ್ ಪ್ರತಿಭಟನೆ ನಡೆಸಿದರು. ಯುದ್ಧಪೀಡಿತ ಉತ್ತರ ಪಟ್ಟಣವಾದ ಬೀಟ್ ಲೆಹಿಯಾದಲ್ಲಿ ನೂರಾರು ಪ್ರತಿಭಟನಾಕಾರರು ಫಲಕಗಳನ್ನು ಹಿಡಿದು ಹಮಾಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊಗಳು ಈಗ ವೈರಲ್ ಆಗುತ್ತಿವೆ.
ನಮಗೆ ಯುದ್ಧ ಬೇಡ, ಸಾವೂ ಬೇಡ. “ನಮ್ಮ ಮಕ್ಕಳ ರಕ್ತ ಅಗ್ಗವಲ್ಲ” ಎಂಬ ಫಲಕಗಳನ್ನು ಪ್ರದರ್ಶಿಸಿ, “ಹಮಾಸ್ ಹಿಂದೆ ಸರಿಯಬೇಕು” ಎಂಬಂತಹ ಘೋಷಣೆಗಳನ್ನು ಕೂಗಿದರು.