Tuesday, August 5, 2025

ಸತ್ಯ | ನ್ಯಾಯ |ಧರ್ಮ

ಎಂದೆಂದೂ ನೀನು ಸುಖವಾಗಿರು – ಪ್ರಜ್ವಲ್‌ ಹೆಸರಿನಲ್ಲಿ ಪೂಜೆ ಮಾಡಿಸಿದ ರೇವಣ್ಣ

ಚಿಕ್ಕಮಗಳೂರು : ಕೆ. ಆರ್. ನಗರ ಮೂಲದ ಮಹಿಳೆ ಮೇಲಿನ ರೇಪ್ ಕೇಸ್ ನಲ್ಲಿ ಪ್ರಜ್ವಲ್ ರೇವಣ್ಣ ಜೈಲುವಾಸದಲ್ಲಿದ್ದಾರೆ. ಆಗಸ್ಟ್ 5 ಪ್ರಜ್ವಲ್ ರೇವಣ್ಣ (prajwal revanna) ಹುಟ್ಟು ಹಬ್ಬದ ಹಿನ್ನೆಲೆ, ಶೃಂಗೇರಿ ಶಾರದಾಂಬೆಗೆ (Sringeri Sharadamba Temple) ಮಾಜಿ ಸಚಿವ ಹೆಚ್.ಡಿ.ರೇವಣ್ಣ( hd revanna) ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಗ ಪ್ರಜ್ವಲ್ ಗೆ ಎದುರಾಗಿರೋ ಸಂಕಷ್ಟ ನಾಶವಾಗಲಿ ಎಂದು ರೇವಣ್ಣ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಶೃಂಗೇರಿ ಗುರುಗಳನ್ನು ರೇವಣ್ಣ ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಇಂದು ಬೆಳ್ಳಂ ಬೆಳಗ್ಗೆಯೇ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಪ್ರಜ್ವಲ್ ಹೆಸರಲ್ಲಿ ಅರ್ಚನೆ ಮಾಡಿಸಿದ ನಂತರ ಬೆಂಗಳೂರಿಗೆ ಹೊರಟಿದ್ದಾರೆ.

ದೇವೇಗೌಡರ ಕುಟುಂಬ ಸುಮಾರು 50 ವರ್ಷಗಳಿಂದ ಶಾರದಾಂಬೆಯ ಭಕ್ತರಾಗಿದ್ದಾರೆ. ಆಗಿಂದ್ದಾಗ್ಗೆ ರೇವಣ್ಣ ಶೃಂಗೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. ಸದ್ಯ ರೇವಣ್ಣ ಕುಟುಂಬ ಸಂಕಷ್ಟದಲ್ಲಿದ್ದು, ರಾಜ್ಯದ ವಿವಿಧ ದೇಗುಲಗಳಿಗೆ ಭೇಟಿ ನೀಡಿ ರೇವಣ್ಣ ಪ್ರಾರ್ಥನೆ ಮಾಡ್ತಿದ್ದಾರೆ.

ಇನ್ನು, ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಮಂಗಳವಾರ ತಮ್ಮ ಜನ್ಮದಿನವನ್ನೂ ಆಚರಿಸಿಕೊಳ್ಳುತ್ತಿದ್ದಾರೆ. ಆ. 5. 1990 ರಂದು ಜನಿಸಿದ ಪ್ರಜ್ವಲ್‌ ರೇವಣ್ಣ ಇಂದು ತಮ್ಮ 35 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರತಿವರ್ಷ ಸಂಭ್ರಮದ ಆಚರಣೆಯಾಗಿದ್ದ ಜನ್ಮದಿನ ಇಂದು ಮಾತ್ರ ಶೋಕದ ಗೂಡಾಗಿ ಪರಿಣಮಿಸಿದೆ.

2023 ರ ತಮ್ಮ ಬರ್ತ್‌ ಡೇ ಹಿಂದಿನ ದಿನ ಪ್ರಜ್ವಲ್‌ ರೇವಣ್ಣ ಒಂದು ಸಾಮಾನ್ಯ ವಿಡಿಯೋ ಹೊರಬಿಟ್ಟಿದ್ದರು. ಇದರಲ್ಲಿ ತಾವು ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆ ಎಂದು ಹೇಳಿದ್ದರು. ಅಲ್ಲದೇ ಯಾರೂ ಸಹ ಮನೆಯಬಳಿ ಬರಬಾರದು. ಹೂಹಣ್ಣು, ಕೇಕ್‌ ಗಳನ್ನು ತರಬಾರದು ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅದಾದ ಎರಡೇ ವರ್ಷಕ್ಕೇ ಪ್ರಜ್ವಲ್‌ ರೇವಣ್ಣ ಮುಂದಿನ ಬರ್ತ್‌ ಡೇ ಜೈಲಿನಲ್ಲಿ ಆಚರಿಸಿಕೊಳ್ಳುವಂತಾಗಿದೆ.

ಸಹಸ್ರಾರು ಮಂದಿ ಪ್ರಜ್ವಲ್‌ ರೇವಣ್ಣ ಅಭಿಮಾನಿಗಳಿದ್ದರೂ ಸಹ ಜೈಲಿನಲ್ಲಿ ಒಂಟಿಯಾಗಿ ಜನ್ಮದಿನವನ್ನು ಕಳೆಯ ಬೇಕಾದ ದುಸ್ಥಿತಿಯಲ್ಲಿ ಪ್ರಜ್ವಲ್‌ ರೇವಣ್ಣ ಇದ್ದಾರೆ. ಈಗಿನ ಪರಿಸ್ಥಿತಿ ಗಮನಿಸಿದರೆ ಇನ್ನೂ ಹಲವು ಜನ್ಮದಿನಗಳನ್ನು ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿಯೇ ಆಚರಿಸಿಕೊಳ್ಳಬೇಕಿರುವುದು ಖಚಿತವಾಗಿದೆ.

ನೂರಾರು ಮಂದಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರುವ ಪ್ರಜ್ವಲ್‌ ರೇವಣ್ಣ ಅದನ್ನು ತಮ್ಮ ಮೊಬೈಲ್‌ ನಲ್ಲಿ ವಿಡಿಯೋ ಮಾಡಿಕೊಳ್ಳುವ ಚಾಲಿಯನ್ನೂ ಹೊಂದಿದ್ದು, ಇದೇ ಪ್ರಕರಣಕೆಕ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತ್ತು.ಅತ್ಯಾಚಾರಕ್ಕೊಳಗಾದವರಲ್ಲಿ ಮಹಿಳಾ ಪೊಲೀಸ್‌, ಸರ್ಕಾರಿ ಅಧಿಕಾರಿಗಳು, ನಟಿಯರು, ಮನೆಗೆಲಸದವರು, ಕೂಲಿ ಕಾರ್ಮಿಕರು ಮಾತ್ರವಲ್ಲದೇ ವಯೋವೃದ್ಧರೂ ಸಹ ಸಾಕಷ್ಟು ಮಂದಿ ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page