Tuesday, July 15, 2025

ಸತ್ಯ | ನ್ಯಾಯ |ಧರ್ಮ

ಬಿಎ ಶಿಕ್ಷಣದವರೆಗೂ ಹೃದಯ ತಪಾಸಣೆಗೆ ಕ್ರಮ – ಮಂತ್ರಿ ಕೆ.ಎನ್. ರಾಜಣ್ಣ


ಹಾಸನ : ಸರಣಿ ಹೃದಯಾಘಾತ ಸಾವಿನ ಹಿಂದೆ ಅಹಾರ ಅಸುರಕ್ಷತೆಯು ಕಾರಣ. ಈಗ ಶಾಲಾ ಹಂತದಿAದ ಜೊತೆಗೆ ಅಂತಿಮ ವರ್ಷದ ಬಿಎ ವರೆಗಿನ ವಿದ್ಯಾರ್ಥಿಗಳ ವರೆಗೂ ಕೂಡ ಹೃದಯ ತಪಾಸಣೆಗೆ ಕ್ರಮ, ರೈತರು ಮೆಕ್ಕೆ ಜೋಳದ ನಷ್ಟ ಅನುಭವಿಸುತ್ತಿದ್ದು, ವಿಮೆ ಮಾಡಿಸಲು ರೈತರಿಗೆ ಜಾಗೃತಿ ಮೂಡಿಸಿ ಹಾಗೂ ತೆಂಗು ರೋಗಕ್ಕೆ ಪರಿಹಾರ ಕಂಡುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿವಿಧ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಸಾವಿನ ಹಿಂದೆ ಅಹಾರ ಅಸುರಕ್ಷತೆ ಕಾರಣ. ಬೀದಿ ಬದಿ ಅಹಾರಗಳ ಬಗ್ಗೆ ಸರಿಯಾದ ಪರಿಶೀಲನೆ ಆಗಬೇಕು. ಗೋಬಿ ಮಂಚೂರಿಯಲ್ಲಿ ಅತಿ ಹೆಚ್ಚು ಹಾನಿಕಾರಕ ಇರುತ್ತದೆ. ಹೂ ಕೋಸು ಬೆಳೆಯುವಾಗ ಭಾರೀ ಪ್ರಮಾಣದ ಕ್ರಿಮಿನಾಶಕ ಬಳಸುತ್ತಾರೆ. ಇದನ್ನ ಅಡುಗೆ ತಯಾರಿ ಮಾಡುವಾಗ ಸರಿಯಾಗಿ ಬೇಯಿಸೊದಿಲ್ಲ. ಅರ್ದಂಬರ್ದ ಬೇಯಿಸಿ ಜನರಿಗೆ ತಿನ್ನಿಸುತ್ತಾರೆ. ಇದನ್ನ ತಿಂದ ಜನರ ಹೊಟ್ಟೆಗೆ ನೇರವಾಗಿ ಹೋಗುತ್ತೆ ಎಂದ ಸಚಿವರು, ಜೊತೆಗೆ ನೀರಿನ ಘಟಕಗಳ ಬಗ್ಗೆ ಕೂಡ ಗಮನ ನೀಡಬೇಕಾಗಿದೆ. ಸುರಕ್ಷಿತವಾದ ನೀರು ಕುಡಿಯದೆ ಹೋದರೆ ಜನರ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಶುದ್ದ ನೀರು ತಯಾರಿಸೊ ಕೇಂದ್ರಗಳ ಮೇಲೆ ನಿಗಾ ಇಡಿ ಎಂದು ಸಚಿವರು ಆರೋಗ್ಯ ಇಲಾಖೆ ಸುರಕ್ಷತಾ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು.

ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಸಾವು ಪ್ರಕರಣ ವಿಚಾರವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 46 ದಿನಕ್ಕೆ 24 ಜನರ ಸಾವು ಎಂದು ವರದಿ ಆಗಿದೆ. 24 ಜನರಲ್ಲಿ ನಾಲ್ಕು ನಾನ್ ಕಾರ್ಡಿಯಾಕ್ ಸಾವು ಎಂದು ವರದಿ ಇದೆ. ಏಳು ಜನರಲ್ಲಿ ಹೃದಯಾಘಾತ ಸಾವು ಎಂದು ವರದಿ ಏಳೂ ಪ್ರಕರಣ ಕೂಡ ಹೃದಯಾಘಾತವಾಗಿರುವುದಾಗಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಮಾಹಿತಿ ನೀಡಿದರು. ಹೃದಯಾಘಾತ ತಡೆಗೆ ಶಾಲಾ ಮಕ್ಕಳ ಅರೋಗ್ಯ ತಪಾಸಣೆಗೆ ಮುಂದಾಗಿದ್ದು, 24 ಸಾವಿರ ಮಕ್ಕಳನ್ನ ಸ್ಕ್ರೀನಿಂಗ್ ಮಾಡಲಾಗಿದೆ. ಇದರಲ್ಲಿ 40 ಮಕ್ಕಳಿಗೆ ಸಮಸ್ಯೆ ಇರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನ ಹೆಚ್ಚಿನ ಪರಿಶೀಲನೆ ಬಗ್ಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.‌ ಈ ಸಭೆಗೆ ಯಾವ ಇಲಾಖೆಯ ಅಧಿಕಾರಿಗಳು ಬಂದಿರುವುದಿಲ್ಲ ಮೊದಲು ಹಾಜರಾತಿ ಹಾಕಿ ಎಂದು ಸಭೆ ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾ ಪಂಚಾಯತ್ ವಿಧಾನ ಪರಿಷತ್ತು ಸದಸ್ಯ ವಿವೇಕಾನಂದ್, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಎಡಿಸಿ ಕೆ.ಟಿ. ಶಾಂತಲಾ, ಜಿಪಂ ಆಡಳಿತಾಧಿಕಾರಿ ನವೀನ್ ರಾಜಸಿಂಗ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣೀಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿ ಮೊಹಮ್ಮದ್ ಸುಜೀತಾ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page