Home ಲೋಕಸಭೆ ಚುನಾವಣೆ -2024 ಮೋದಿ ಮುಖ ತೋರಿಸುವುದೇ ಮಾಧ್ಯಮಗಳ ಕೆಲಸ: ರಾಹುಲ್ ಗಾಂಧಿ

ಮೋದಿ ಮುಖ ತೋರಿಸುವುದೇ ಮಾಧ್ಯಮಗಳ ಕೆಲಸ: ರಾಹುಲ್ ಗಾಂಧಿ

0

ಜೈಪುರ: ದಿನದ ಇಪ್ಪತ್ತನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿಯವರ ಮುಖ ತೋರಿಸುವುದೇ ಇಂದಿನ ಕೆಲವು ಮಾಧ್ಯಮಗಳ ಕೆಲಸವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದ ಅನುಪ್‌ಗಢದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಮಾಧ್ಯಮಗಳ ನಿಜವಾದ ಕರ್ತವ್ಯವಾಗಿದೆ. ಆದರೆ ಇಂದಿನ ಸುದ್ದಿ ಮಾಧ್ಯಮಗಳು ಆ ಕೆಲಸವನ್ನೇ ಮರೆತಿವೆ. ಪತ್ರಕರ್ತರ ಧ್ವನಿಯನ್ನು ಇಂದಿನ ಸುದ್ದಿ ಮಾಧ್ಯಮಗಳ ಬಿಲೇನಿಯರ್‌ ಮಾಲೀಕರು ಹತ್ತಿಕ್ಕುತ್ತಿದ್ದಾರೆ ಎಂದು ದೂರಿದರು.

 ಕೆಲವು ದಿನಗಳ ಹಿಂದೆ ದೇಶದ ನೈಜ ಸಮಸ್ಯೆಗಳನ್ನು ಬಿಟ್ಟು ಮಾಧ್ಯಮಗಳು ಅಂಬಾನಿ ಮಗನ ಮದುವೆ ಕಾರ್ಯಕ್ರಮ ಪ್ರಸಾರ ಮಾಡುವುದರಲ್ಲಿಯೇ ನಿರತವಾಗಿದ್ದವು. ಈ ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ ಮಾಧ್ಯಮಗಳಿಗೆ ಸಮಸ್ಯೆಯಾಗಿಯೇ ಕಾಣಿಸುತ್ತಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ತೋರಿಸುವುದೇ ಅವುಗಳ ಕೆಲಸ  ಎಂದು ಆರೋಪಿಸಿದರು.

‘ಮಾಧ್ಯಮ ಕ್ಷೇತ್ರದಲ್ಲಿ ಶೇಕಡ 2ರಿಂದ 3ರಷ್ಟು ಜನರು ಉದ್ಯೋಗ ಪಡೆಯುತ್ತಿದ್ದಾರೆ. 15ರಿಂದ 20 ಜನರು ಇಡೀ ಮಾಧ್ಯಮಲೋಕವನ್ನು ನಿಯಂತ್ರಿಸುತ್ತಿದ್ದಾರೆ.  ಅವರಿವೆ

ದೇಶದ ರೈತರು ತಮ್ಮ ಬೆಳಗೆ ಕನಿಷ್ಠ ಬೆಂಬಲ ಬೆಲೆ ಕೇಳುತ್ತಿರುವುದು, ಯುವಕರು ಉದ್ಯೋಗ ಹುಡುಕುತ್ತಿರುವುದು, ಮಹಿಳೆಯರು ಹಣದುಬ್ಬರದಿಂದ ಬೇಸತ್ತಿರುವುದು ಕಾಣಿಸುತ್ತಲೇ ಇಲ್ಲ. ಈ ಜನ ಸಾಮಾನ್ಯರ ರ ಕೂಗನ್ನು ಯಾರು ಕೇಳಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

 ನಿರುದ್ಯೋಗ, ಹಣದುಬ್ಬರ ಈ ದೇಶದ ಅತಿದೊಡ್ಡ ಸಮಸ್ಯೆಗಳೆಂದು ದೇಶದ ಯಾರನ್ನೇ ಕೇಳಿದರೂ ಹೇಳುತ್ತಾರೆ. ನಿಮ್ಮ ಸಾಲವನ್ನು ಮನ್ನಾ ಮಾಡುವುದಿಲ್ಲ, ನೀವು ಭಯೋತ್ಪಾದಕರು, ನಿಮ್ಮ ಬೆಳೆಗಳಿಗೆ ಎಂಎಸ್‌ಪಿ ನೀಡುವುದಿಲ್ಲ ಎಂದು ಮೋದಿ ರೈತರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಜಾರಿಗೆ ತಂದೆ ತರುತ್ತದೆ. ಶತಕೋಟಿ ಒಡೆಯರ ಸಾಲವನ್ನು ಮೋದಿ ಮನ್ನಾ ಮಾಡಿದರೆ, ರೈತರ ಸಾಲವನ್ನು ಕಾಂಗ್ರೆಸ್ ಮನ್ನಾ ಮಾಡುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಬಡವರು ಮತ್ತು ಶತಕೋಟಿ ಒಡೆಯರ ನಡುವಿನ ಚುನಾವಣೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

You cannot copy content of this page

Exit mobile version