Monday, July 28, 2025

ಸತ್ಯ | ನ್ಯಾಯ |ಧರ್ಮ

ಮೆಗಾ ಪವರ್ ಸ್ಟಾರ್’ ರಾಮ್​ ಚರಣ್ ಅಭಿನಯದ ಹೊಸ ಪ್ಯಾನ್​ ಇಂಡಿಯಾ ಚಿತ್ರ ಘೋಷಣೆ

‘ಆರ್​ಆರ್​ಆರ್’ ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ‘ಮೆಗಾ ಪವರ್ ಸ್ಟಾರ್’ ರಾಮ್​ ಚರಣ್ ತೇಜ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿನಯದ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಆದ ‘ಉಪ್ಪೆನಾ’ ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ, ಈಗ ರಾಮ್​ ಚರಣ್​ ಅವರನ್ನು ಈ ಹೊಸ ಚಿತ್ರದಲ್ಲಿ ನಿರ್ದೇಶಿಸಲಿದ್ದಾರೆ. ಪ್ಯಾನ್​ ಇಂಡಿಯಾಗೆ ಆಗುವ ಚಿತ್ರಕಥೆಯೊಂದನ್ನು ಬುಚ್ಚಿ ಬಾಬು ಸಿದ್ಧಪಡಿಸಿದ್ದು, ಈ ಚಿತ್ರದಲ್ಲಿ ನಟಿಸುವುದಕ್ಕೆ ರಾಮ್​ ಚರಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿರುವ ವೆಂಕಟ ಸತೀಶ್ ಕಿಲಾರು ಅವರು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಹೆಸರಿಡದ ಚಿತ್ರದ ಮುಂದಿನ ವರ್ಷ ಪ್ರಾರಂಭವಾಗಲಿದೆ. ಸದ್ಯ ಶಂಕರ್​ ನಿರ್ದೇಶನದ ಪ್ಯಾನ್​ ಇಂಡಿಯಾ ಚಿತ್ರದ ಚಿತ್ರೀಕರಣದಲ್ಲಿ ರಾಮ್​ ಚರಣ್​ ತೇಜ ಭಾಗವಹಿಸಿದ್ದು, ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಅಧಿಕೃತ ಘೋಷಣೆ ಆಗಲಿದೆ.

ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್ ನಡಿಯಲ್ಲಿ, ಸಿನಿಮಾದ ರಚನೆ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಸ್ತುತಿ- ಮೈತ್ರಿ ಮೂವೀ ಮೇಕರ್ಸ್ದಾಗಿದ್ದು, ವೆಂಕಟ ಸತೀಶ್ ಕಿಲಾರು ನಿರ್ಮಾಪಕರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page