ಛತ್ತೀಸ್‌ಗಢ: ಮಕ್ಕಳ ಅಪಹರಣಕಾರನೆಂದು ತಪ್ಪಾಗಿ ಭಾವಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಥಳಿಸಿದ ಘಟನೆ ಉತೈ ಪಿಎಸ್ ಪ್ರದೇಶದಲ್ಲಿ ನಡೆದಿದೆ.
ಈ ಕುರಿತು ನಗರದ ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಮಾಹಿತಿ ನೀಡಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಗರದ ಬೀದಿ ಬೀದಿಗಳಲ್ಲಿ ತಿರುಗಾಡುತ್ತಿದ್ದು, ಇತ್ತೀಚಿನ ಗಾಳಿ ಸುದ್ದಿಯಂತೆ ಆತ ಮಕ್ಕಳ ಕಳ್ಳ ಎಂದು ಭಾವಿಸಿ ಅಪರಿಚತ ವ್ಯಕ್ತಿಗಳು ಆತನನ್ನು ಥಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸರು ಆತನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಈ ಹಿನ್ನಲೆ ಅಪರಿಚಿತ ವ್ಯಕ್ತಿಗಳು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಥಳಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಹೇಳಿದರು.