Wednesday, August 20, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಬುದ್ದಿಮಾಂದ್ಯ ಯುವತಿಮೇಲೆ ಸಾಮೂಹಿಕವಾಗಿ ಅತ್ಯಾಚಾರ

ಹಾಸನ : ಬುದ್ದಿಮಾಂದ್ಯ ಯುವತಿ ಓರ್ವಳನ್ನು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಗ್ಯಾಂಗ್ ರೇಪ್ ಮಾಡುವ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಯುವತಿಯ ತಮ್ಮನ ಮೊಬೈಲ್‌ಗೆ  ಕಳುಹಿಸಿರುವ ಅಮಾನವೀಯ ಘಟನೆ ನಗರದಲ್ಲಿ ಸಂಭವಿಸಿದೆ.

ಅತ್ಯಾಚಾರಕ್ಕೊಳಗಾದ ಯುವತಿಯ ಸಹೋದರ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಗೆ ಮೂವರು ವಿರುದ್ದ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ. ಪೈಶಾಚಿಕ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಸನ ನಗರದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದ್ದು ಇದರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಮ್ಯಾಕಾನಿಕ್ ಕೆಲಸ ಮಾಡುವ ವಿಶೇಷ ಚೇತನರಾಗಿರುವ ದಂಪತಿಯ ಪುತ್ರಿ ಬುದ್ದಿಮಾಂದ್ಯಳಾಗಿದ್ದು ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದರು. ಕಳೆದ ಎಂಟು ದಿನಗಳ ಹಿಂದೆ ತಂದೆ ತಮ್ಮ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬಂದಿರುವ ಮೂವರು ಆರೋಪಿಗಳು ಬುದ್ದಿಮಾಂದ್ಯ ಯುವತಿಯನ್ನು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಅದರ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾರೆ. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅತ್ಯಾಚಾರ ಎಸಗಿರುವ ವಿಡಿಯೋವನ್ನು ಯುವತಿ ಸಹೋದರನ ಮೊಬೈಲ್‌ಗೆ ಆತನ ಸ್ನೇಹಿತ ಕಳುಹಿಸಿದ್ದಾನೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ತನ್ನ ಅಕ್ಕನ ಮೇಲೆ ಗ್ಯಾಂಗ್ ರೇಪ್ ನಡೆದಿರುವುದು ಬೆಳಕಿಗೆ ಬಂದಿದೆ. ನಂತರ ವಿಡಿಯೋ ಕಳುಹಿಸಿದ ಸ್ನೇಹಿತನಿಗೆ ಕರೆ ಮಾಡಿ ಯಾರು ವಿಡಿಯೋ ಕಳುಹಿಸಿದ್ದ ಎಂದು ಕೇಳಿದಾಗ ಉಮ್ರಾನ್ ಎಂಬುವವನು ನನಗೆ ವ್ಯಾಟ್ಸಪ್ ಮೂಲಕ ಕಳುಹಿಸಿದ್ದಾನೆ ಎಂದು ಹೇಳಿದ್ದಾನೆ. ಅಷ್ಟರಲ್ಲಿ ಉಮ್ರಾನ್ ವಿಡಿಯೋ ಡಿಲಿಟ್ ಮಾಡಿದ್ದಾನೆ. ನಂತರ ಅಬ್ದುಲ್ ಅಫ್ತಾಬ್, ರಾಜಿಕ್ ಪಾಷಾ, ಉಮ್ರಾನ್ ಮೇಲೆ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ನಗರದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದ್ದು 80 ಅಡಿ ರಸ್ತೆ, ಇಲಾಹಿನಗರ, ಚಿಕ್ಕನಾಳು, ಪೆನ್ಷನ್‌ ಮೊಹಲ್ಲಾ ಭಾಗದಲ್ಲಿ ಗಾಂಜಾ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಇದರಿಂದಲೇ ಗ್ಯಾಂಗ್ ರೇಪ್ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಗಾಂಜಾ ಮಾರಾಟ ಜಾಲವನ್ನು ಕಂಡುಹಿಡಿದು ಗಾಂಜಾ ಮಾರಾಟಕ್ಕೆ ಪೊಲೀಸರು ಬ್ರೇಕ್ಒ ತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಹಾಸನದಲ್ಲಿ ನಡೆದಿರುವ ಗ್ಯಾಂಗ್ ರೇಪ್ ಘಟನೆಯಿಂದ ಇಡೀ ಜಿಲ್ಲೆ ಜನರು ಬೆಚ್ಚಿಬಿದ್ದಿದ್ದು, ಇಂತಹ ಘಟನೆಗಳು ಮರುಕಳುಹಿಸದಂತೆ ಉಗ್ರ ಶಿಕ್ಷೆಯಾಗಬೇಕು ಹಾಗೂ ನಗರ ಭಾಗದಲ್ಲಿ ಹೆಚ್ಚಿರುವ ಗಾಂಜಾ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page