Wednesday, July 9, 2025

ಸತ್ಯ | ನ್ಯಾಯ |ಧರ್ಮ

ಮೆರವಣಿಗೆ ವೇಳೆ ವಿದ್ಯುತ್‌ ಅವಘಡ : ಐವರ ಸಾವು

ಉತ್ತರ ಪ್ರದೇಶ : ದೇವರ ಮೆರವಣಿಗೆ ವೇಳೆ ವಿದ್ಯುತ್‌ ತಂತಿ ತಗುಲಿ ಐವರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಹ್ರೈಚ್‌ ನಲ್ಲಿ  ಮೆರವಣಿಗೆ ವೇಳೆ ಈ ದುರಂತ ನಡೆದಿದ್ದು. ಗಾಡಿಯಲ್ಲಿ ಅಳವಡಿಸಲಾಗಿದ್ದ ಹೈಟೆನ್ಷನ್ ತಂತಿಯ ಕಬ್ಬಿಣದ ರಾಡ್‌ ಅನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಒಬ್ಬರಿಂದ ಒಬ್ಬರಿಗೆ ವಿದ್ಯುತ್‌ ಶಾಕ್‌ ತಗುಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಓರ್ವನ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡುವಾಗ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.

ವಿದ್ಯುತ್‌ ಅವಘಡದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಾಂತ್ವಾನ ಹೇಳಿದರು. ನಂತರ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಇದನ್ನೂ ನೋಡಿ : ಕಾಂತಾರ ಸಿನಿಮಾದ ಜಗಳಗಂಟಿ ತಾಯಿ ಪಾತ್ರ ನಿಭಾಯಿಸಿದ್ದು ಹೇಗೆ? || Kantara || Rishab Shetty || Manasi Sudhir ||

ಮಾನಸಿ ಸುಧೀರ್‌ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದು ಹೇಗೆ? ಇಲ್ಲಿದೆ ಮಾನಸಿ ಅವರೊಂದಿಗೆ ಪೀಪಲ್‌ ಟಿವಿ EXCLUSIVE ಮಾತುಗಳು.

https://www.instagram.com/tv/Cjeu20aJ-ys/?igshid=MDJmNzVkMjY=

Related Articles

ಇತ್ತೀಚಿನ ಸುದ್ದಿಗಳು

You cannot copy content of this page