Wednesday, August 20, 2025

ಸತ್ಯ | ನ್ಯಾಯ |ಧರ್ಮ

ಅಡ್ವಾಣಿಯವರಿಗೆ ಅವಸರದಲ್ಲಿ ಶೃದ್ಧಾಂಜಲಿ ಕೋರಿ ಎಡವಟ್ಟು ಮಾಡಿಕೊಂಡ ಸಚಿವ ಸೋಮಣ್ಣ

ಸಾಮಾಜಿಕ ಜಾಲತಾಣದ ಅತಿ ವೇಗದ ಸುದ್ದಿಗೆ ಆದ ಪ್ರಮಾದಗಳಿಗೆ ಲೆಕ್ಕವಿಲ್ಲ. ಅದೇ ರೀತಿ ರಾಜಕೀಯ ನಾಯಕ ಎಲ್.ಕೆ.ಅಡ್ವಾಣಿ ಬದುಕಿದ್ದಾಗಲೇ ಶ್ರದ್ಧಾಂಜಲಿ ಸಲ್ಲಿಸಿಕೊಂಡ ದೊಡ್ಡ ಪ್ರಮಾದವೊಂದು ತುಮಕೂರಿನಲ್ಲಿ ನಡೆದಿದೆ.

ಅಡ್ವಾಣಿಯವರು ಇತ್ತೀಚೆಗೆಯಷ್ಟೇ ಅನಾರೋಗ್ಯಕ್ಕೀಡಾಗಿ ಎರಡೆರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಆದರೆ ಕೇಂದ್ರ ಸಚಿವ ವಿ.ಸೋಮಣ್ಣ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಆಯೋಜನೆಗೊಂಡಿದ್ದ ಅಭಿನಂದನಾ ಸಭೆಯಲ್ಲಿ ಸೋಮಣ್ಣ ಶೃದ್ಧಾಂಜಲಿ ಸಲ್ಲಿಸಿದ್ದಾರೆ.

ಕಾರ್ಯಕ್ರಮದ ನಡುವೆ “ಇದೀಗ ತಾನೇ ಮಾಹಿತಿ ಬಂದಿದೆ, ಅಡ್ವಾಣಿಯವರು ಸಾವನ್ನಪ್ಪಿದ್ದಾರೆ. ನಾನು ದೆಹಲಿಗೆ ಹೋಗಬೇಕಿದೆ. ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡಿ” ಎಂದು ಬಹಿರಂಗ ಸಭೆಯಲ್ಲಿ ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನಸಮೂಹ ಮಾತ್ರವಲ್ಲದೆ, ಗುಬ್ಬಿಯ ಬಿಜೆಪಿ-ಜೆಡಿಎಸ್ ಮುಖಂಡರು ಮೌನಾಚರಣೆ ಮಾಡಿದ ಪ್ರಮಾದ ಇಂದು ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page